ಸರ್ಪದೋಷ ಮತ್ತು ಪರಿಹಾರ ಹೇಗೆ?

Contributed byShridevi Ambekallu|Vijaya Karnataka
remedies for serpent dosha problems causes and solutions
ಸರ್ಪದೋಷ ಯಾಕೆ ಬರುತ್ತದೆ?

ಪರಿಹಾರ ಹೇಗೆ?
------------------

ಇಂಟ್ರೋ: ವ್ಯಕ್ತಿಯ ಜಾತಕದಲ್ಲಿಸರ್ಪದೋಷ ಇದ್ದರೆ ಯಾವ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ? ಹೇಗೆ ಪರಿಹಾರ ಮಾಡಿಸಿಕೊಳ್ಳಬಹುದು?

----

*ಡಿ.ಎನ್ ವೆಂಕಟೇಶ್

-----

ಜೀವಿಗಳು ಅನೇಕ ಪ್ರಕಾರದ ಸುಖ ದುಃಖಗಳನ್ನು ತಮ್ಮ ಬದುಕಿನುದ್ದಕ್ಕೂ ಅನುಭವಿಸುತ್ತಿರುತ್ತವೆ. ಇದು ತಮ್ಮ ಪೂರ್ವ ಕರ್ಮದ (ಒಳ್ಳೆಯ ಹಾಗೂ ಕೆಟ್ಟ ಕೆಲಸಗಳನ್ನು) ಆಚರಣೆಯಿಂದ ಉಂಟಾಗುವ ಫಲಗಳೆಂದು ಶಾಸ್ತ್ರಗಳಲ್ಲಿಹೇಳುವರು. ಹೀಗೆ ಪೂರ್ವಾರ್ಜಿತವಾದ ಶುಭ ಕರ್ಮಗಳು ಯೋಗಗಳ ಮೂಲಕ ಶುಭ ಫಲಗಳನ್ನು, ಕ್ರೂರ ಕರ್ಮಗಳು ದೋಷಗಳ (ಅಥವಾ ಶಾಪಗಳ) ಮೂಲಕ ಕಷ್ಟದ ಫಲಗಳನ್ನು ಬದುಕಿನುದ್ದಕ್ಕೂ ನೀಡುತ್ತಲಿರುತ್ತವೆ.

ಜ್ಯೋತಿಷÜ ಶಾಸ್ತ್ರದಲ್ಲಿಕರ್ಮ ಸಂಬಂಧ ಜನಿತವಾದ ಕೆಲವು ದೋಷಗಳ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಕರ್ಮವಿಪಾಕ, ಪರಾಶರ ಹೋರ, ಪ್ರಶ್ನಮಾರ್ಗ, ಕೇರಳ ನಾಡಿ ಇತ್ಯಾದಿ ಗ್ರಂಥಗಳಲ್ಲಿದೋಷಗÜಳ ವಿಚಾರವಾಗಿ ಹೇಳಿರುವರು. ಪೂರ್ವ ಜನ್ಮ ಕರ್ಮ ವಶಾತ್ ಮಾತ, ಪಿತೃ ಪ್ರೇತ, ಭ್ರಾತೃ, ಕಳತ್ರ, ದೇವತಾ, ಸರ್ಪ ಇತ್ಯಾದಿ ದೋಷಗಳು ಅಥವಾ ಶಾಪಗಳೆನ್ನುವರು. ಇಂತಹ ಪೂರ್ವಜನ್ಮ ಕರ್ಮದ ಫಲಗಳು ಈ ಜನ್ಮದಲ್ಲಿರೋಗ, ದುಃಖ, ನಾನಾ ರೀತಿಯಲ್ಲಿಧನ ಮಾನಾದಿ ಹಾನಿ, ಕುಟುಂಬದಲ್ಲಿಅಶಾಂತಿ, ಮಕ್ಕಳ ವಿಚಾರವಾಗಿ ಚಿಂತೆ ಇತ್ಯಾದಿಯಿಂದ ಕೂಡಿದ ವಾತಾವರಣದಲ್ಲಿನಾವು ಕಷ್ಟಗಳನ್ನು ಅನುಭವಿಸುತ್ತಿರುತ್ತವೆ.

ಈ ಪೂರ್ವಾರ್ಜಿತ ಕರ್ಮ ದೋಷಗಳನ್ನು ಜನ್ಮ ಜಾತಕ, ತಾತ್ಕಾಲಿಕ ಪ್ರಶ್ನ ಜಾತಕ ವಶಾತ್ ಗ್ರಹಗಳ ಸಂಯೋಗದಿಂದ ಗುರುತಿಸಲಾಗುತ್ತದೆ. ಇಂತಹಾ ದೋಷಗಳನ್ನು ದೇವತೆಯ ಆರಾಧನೆ ಅಥವಾ ಶಾಂತಿ ಆಚರಣೆಯ ಮೂಲಕ ಶಮನ ಮಾಡಿಕೊಳ್ಳಬಹುದೆಂದು ಋುಷಿಮುನಿಗಳು, ಪೂರ್ವಾಚಾರ್ಯರ ಅಭಿಪ್ರಾಯ. ಈ ದೋಷಗಳಲ್ಲಿನಾಗದೋಷ ಅಥವಾ ಸರ್ಪದೋಷದ ಕೆಲವು ವಿಚಾರವನ್ನು ಇಲ್ಲಿನೀಡಲಾಗಿದೆ.

ಸರ್ಪಗಳ ವಾಸಸ್ಥಾನ, ಹುತ್ತ, ಮರಗಳು, ಮೊಟ್ಟೆಗಳು ಮತ್ತು ಸರ್ಪಗಳಿಗೆ ತಾವೇ ಹಿಂದಿನ ಜನ್ಮ ಅಥವಾ ಪೂರ್ವಿಕರು ಮಾಡಿದ ಕರ್ಮದಿಂದ ಉಂಟಾದ ಹಾನಿ ಅಥವಾ ಅಪವಿತ್ರ ಕೃತ್ಯಗಳು ಸರ್ಪದೋಷಕ್ಕೆ ಕಾರಣವಾಗುವುದು.

ಪರಾಶರ ಹೋರ ಮತ್ತು ಜಾತಕತತ್ತ್ವದಲ್ಲಿ

* ಪಂಚಮ ಭಾವದಲ್ಲಿರಾಹು ಇದ್ದು, ಕುಜ ಗ್ರಹ ವೀಕ್ಷಣೆಯಲ್ಲಿಇದ್ದರೆ, ಅಥವಾ ರಾಹು ಮೇಷ ಅಥವ ವೃಶ್ಚಿಕ ರಾಶಿಯಲ್ಲಿಇದ್ದರೆ,

* ಪಂಚಮಾಧಿಪತಿ ರಾಹು ಗ್ರಹ ಯುತಿಯಲ್ಲಿದ್ದು, ಪಂಚಮ ಭಾವಸ್ಥಿತ ಶನಿಯು ಚಂದ್ರನ ವೀಕ್ಷಣೆಯಲ್ಲಿದ್ದರೆ,

* ಪುತ್ರಕಾರಕ ಗ್ರಹರಾದ ಗುರು ರಾಹುವಿನ ಯುತಿಯಲ್ಲಿದ್ದು, ಪಂಚಮ ಭಾವಾಧಿಪತಿ ದುರ್ಬಲನಾಗಿದ್ದು, ಲಗ್ನಾಧಿಪತಿಯು (ಅಥವಾ ಆತ್ಮಕಾರಕ ಗ್ರಹನಿರುವ ನವಾಂಶದ ಅಧಿಪತಿಯೊಂದಿಗೆ) ಕುಜನು ಸಂಯುಕ್ತನಾಗಿದ್ದರೆ,

* ಪುತ್ರಕಾರಕ ಗುರುವು ಕುಜರ ಯುತಿಯಲ್ಲಿದ್ದು, ಲಗ್ನದಲ್ಲಿರಾಹು ಇದ್ದು, ಪಂಚಮಾಧಿಪತಿ 6ನೇ, 8ನೇ ಅಥವಾ 12ನೇ ಭಾವದಲ್ಲಿದ್ದರೆ,

* ಪುತ್ರಕಾರಕ ಗ್ರಹ ಮತ್ತು ಕುಜ ಯುತಿಯಲ್ಲಿದ್ದು, ಲಗ್ನಾಧಿಪತಿ ಮತ್ತು ರಾಹುವು ಪಂಚಮಾಧಿಪತಿಯ ಜೊತೆಗೆ 6ನೇ, 8ನೇ ಅಥವಾ 12ನೇ ಭಾವದಲ್ಲಿಸಂಬಂಧ ಹೊಂದಿದ್ದರೆ,

* ಪಂಚಮಾಧಿಪತಿ ಬುಧರು ಕುಜನ ನವಾಂಶದಲ್ಲಿಇದ್ದು, ಕುಜ ಯುತಿಯಲ್ಲಿರಬೇಕು. ಲಗ್ನದಲ್ಲಿರಾಹು ಮತ್ತು ಮಾಂದಿ (ಗುಳಿಕ) ಇದ್ದರೆ,

* ಕುಜನು ತನ್ನ ಸ್ವಃ ನವಾಂಶದಲ್ಲಿಇದ್ದು, ಬುಧನು ಪಂಚಮ ಭಾವದ ಅಧಿಪತಿಯಾಗಿದ್ದು, ಯಾವುದಾದರೂ ಪಾಪಗ್ರಹರ ಜೊತೆಗಿದ್ದರೆ

* ಪಂಚಮ ಭಾವವು ಮೇಷ ಅಥವಾ ವೃಶ್ಚಿಕವಾಗಿದ್ದು, ಪಂಚಮ ಭಾವದಲ್ಲಿರಾಹು ಇದ್ದು, ಬುಧರ ಯುತಿ ಅಥವಾ ಬುಧರ ದೃಷ್ಟಿಗೆ ಒಳಗಾಗಿದ್ದರೆ,

* ಕುಜನು ಪಂಚಮ ಭಾವದ ಅಧಿಪತಿಯಾಗಿದ್ದು, ರಾಹುವು ಪಂಚಮ ಭಾವದಲ್ಲಿಇದ್ದು, ಯಾವುದೇ ಶುಭಗ್ರಹದ ದೃಷ್ಟಿಗೆ ಒಳಗಾಗದಿದ್ದರೆ,

* ಪಂಚಮ ಭಾವದಲ್ಲಿಸೂರ್ಯ, ಶನಿ, ಮಂಗಳ, ರಾಹು, ಬುಧ ಅಥವಾ ಗುರು ಇದ್ದು, ಪಂಚಮಾಧಿಪತಿ ಮತ್ತು ಲಗ್ನಾಧಿಪತಿ ಬಲಹೀನರಾಗಿದ್ದರೆ,

* ಪಂಚಮೇಶ ಮತ್ತು ಲಗ್ನೇಶ ಇಬ್ಬರೂ ದುರ್ಬಲರಾಗಿದ್ದು, ಪಂಚಮ ಭಾವದಲ್ಲಿಪಾಪಗ್ರಹಗಳು ನೆಲೆಸಿದ್ದರೆ,

* ಲಗ್ನಾಧಿಪತಿ ಮತ್ತು (ಅಥವಾ) ಪುತ್ರಕಾರಕ ಗುರುವು ರಾಹುವಿನ ಯುತಿಯಲ್ಲಿದ್ದ, ಪಂಚಮಾಧಿಪತಿಯು ಕುಜರ ಯುತಿಯಲ್ಲಿದ್ದರೆ,

ಈ ರೀತಿಯಾದ ಗ್ರಹ ಸಂಯೋಗದಿಂದ ಸರ್ಪದೋಷ ಏರ್ಪಡುವುದು. ಇದರಿಂದ ಮಕ್ಕಳ ವಿಷಯದಲ್ಲಿಚಿಂತೆ (ಅಂದರೆ ಸಂತಾನ ಪ್ರಾಪ್ತಿಗೆ ತೊಂದರೆ, ಮಕ್ಕಳು ಅಭಿವೃದ್ಧಿ ಆಗಲು ಅಡ್ಡಿ ಆತಂಕ, ಮಕ್ಕಳ ವಿದ್ಯೆಗೆ ತೊಂದರೆ ಅಥವಾ ಭಂಗವಾಗುವುದು ಇತ್ಯಾದಿ ಚಿಂತೆಗಳು) ಕಾಡುವುದು.

ಇಲ್ಲಿ, ಗುರು ಭಗವಾನರು, ಲಗ್ನಾಧಿಪತಿ ಮತ್ತು ಪಂಚಮ ಭಾವಾಧಿಪತಿ ಈ ಮೂರೂ ಗ್ರಹಗಳು ಬಲಹೀನರಾಗಿದ್ದರೆ, ಮಕ್ಕಳ ವಿಚಾರವಾಗಿ ಚಿಂತೆ ಕಾಡುವುದು.

ರವಿ, ಕುಜ, ರಾಹು ಮತ್ತು ಶನಿ ಭಗವಾನರು ಬಲಿಷ್ಠರಾಗಿ ಪಂಚಮ ಭಾವದಲ್ಲಿಸ್ಥಿತರಾಗಿದ್ದು, ಅದೇ ಸಮಯದಲ್ಲಿಪುತ್ರಕಾರಕರಾದ ಗುರು ಮತ್ತು ಪಂಚಮ ಭಾವಾಧಿಪತಿ ಮೊದಲಾದವರು ಬಲಹೀನರಾಗಿದ್ದರೆ, ಮಕ್ಕಳ ವಿಚಾರವಾಗಿ ಚಿಂತೆ ಕಾಡುವುದು.

ಸರ್ಪಬಾಧೆಯ ದೋಷ

ಬಾಧಕಾಧಿಪತಿ ಗುರುವು 6-8-12ರಲ್ಲಿದ್ದರೂ, ಈ ಗುರುವು ಮಾಂದಿಯೊಂದಿಗೆ ಕೇಂದ್ರದಲ್ಲಿದ್ದರೂ, ಈ ಗುರುವಿಗೆ 4-7-10ರಲ್ಲಿರಾಹು ಇದ್ದರೆ ಅಥವಾ ರಾಹುವು ಲಗ್ನಾತ್ ಬಾಧಕ ಸ್ಥಾನ, 4-6-7-8-10-12ರಲ್ಲಿಇರಬೇಕು.

ರಾಹು, ಮಾಂದಿ ಜೊತೆಗಿದ್ದರೂ ಅಥವಾ ಮಾಂದಿಯು 5-7-9ನೇ ಸ್ಥಾನದಲ್ಲಿದ್ದರೆ ಸರ್ಪದೋಷದಿಂದ ಕಷ್ಟಗಳನ್ನು ಅನುಭವಿಸುವರು.

ರಾಹುವಿಗೆ 1-4-7-10ನೇ ಸ್ಥಾನದಲ್ಲಿಕುಜನಿದ್ದರೆ ಸರ್ಪಗಳ ವಾಸ ಸ್ಥಾನ ಇಲ್ಲವೇ ನಾಗ ದೇವತೆಗಳ ಸ್ಥಳವನ್ನು ನಾಶ ಮಾಡುವುದು, ನಾಗಗಳನ್ನು ಹಿಂಸಿಸಿದ ಕಾರಣದಿಂದ ದೋಷ ಏರ್ಪಡುವುದು.

ರಾಹುವಿಗೆ 1-4-7-10ನೇ ಸ್ಥಾನದಲ್ಲಿಶನಿ ಮಾಂದಿಗಳಿದ್ದರೆ ನಾಗ ದೇವತಾ ಸ್ಥಳಗಳನ್ನು ಅಪವಿತ್ರ ಮಾಡಿರುವ ಕಾರಣದಿಂದ ಸರ್ಪದೋಷ ಉಂಟಾಗುವುದು.

ರಾಹುವಿಗೆ ಕೇಂದ್ರದಲ್ಲಿಮಾಂದಿ ಮಾತ್ರ ಇದ್ದರೆ ನಾಗದೇವತಾ ಸ್ಥಳಗಳ ಮರಗಳು ಕಡಿಯುವುದು, ಹುತ್ತಗಳನ್ನು ನಾಶ ಮಾಡಿರುವ ಕಾರಣ ಮತ್ತು ಅಪವಿತ್ರ ಮಾಡಿರುವ ಕಾರಣದಿಂದ ಕಷ್ಟಗಳನ್ನು ಅನುಭವಿಸುವರು.

---

ಬಾಕ್ಸ್

ನಾಗದೋಷ

ತುಲಾ ಲಗ್ನ (21ಡಿಗ್ರಿ 48ನಿಮಿಷದಿಂದ 22ಡಿಗ್ರಿ ಒಳಗೆ ಇದ್ದು) ಶನಿ, ಶುಕ್ರ, ರಾಹು ಸಂಯೋಗ ಇದ್ದು ಸ್ವಾತಿ ನಕ್ಷತ್ರ ಆದರೆ. ಅಧಿಕ ರೋಗ ಬಾಧೆ, ನಾನಾ ರೀತಿಯಲ್ಲಿಧನ/ಭಾಗ್ಯ ಹಾನಿ, ಕಷ್ಟಗಳು ಏರ್ಪಡುವುದು.

ಇಲ್ಲಿಸರ್ಪ ಪ್ರತಿಮಾದಾನ ಮಾಡಿ ನಾಗಪ್ರತಿಷ್ಠೆ, ಶನಿ ಶಾಂತಿ, ಶ್ರೀಚಕ್ರ ಪೂಜೆ ಮಾಡಿದರೆ ಶಾಂತಿಯೆಂದು ಹೇಳಲಾಗಿದೆ.

ಶಾಂತಿ ಪರಿಹಾರ

* ನಾಗರ ಕಟ್ಟೆಗೆ (ನಾಗ ಪ್ರತಿಮೆಗೆ) ಪೂಜೆ ಮಾಡಿ 11 ದಿನಗಳು, ದಿನಕ್ಕೆ 101 ಪ್ರದಕ್ಷಿಣೆಯನ್ನು ಹಾಕಬೇಕು. ‘ಓಂ ನಾಗರಾಜಾಯ ನಮಃ’ ಎಂದು ಪ್ರದಕ್ಷಿಣೆ ಹಾಕುವಾಗ ಹೇಳುತ್ತಿರಬೇಕು.

* ಹೀಗೆ 11 ತಿಂಗಳುಗಳ ಕಾಲ ಪ್ರದಕ್ಷಿಣೆ ಮಾಡಿದರೆ ಉತ್ತಮ. ಕನಿಷ್ಟ ಒಂದು ತಿಂಗಳಾದರೂ ಪ್ರದಕ್ಷಿಣೆ ಮಾಡಬೇಕು. ಆನಂತರ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡಬೇಕು. ಇದನ್ನು ತೀರ್ಥಕ್ಷೇತ್ರಗಳು, ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಗಳು, ನದಿ ತೀರಗಳಲ್ಲಿಮಾಡಬೇಕು.

* ರಾಹು, ಕೇತು, ಕುಜ ಮತ್ತು ಶನಿ ಗ್ರಹಗಳ ಸ್ತೋತ್ರ ಪಾರಾಯಣ, ಮಂತ್ರ ಜಪ ಹಾಗೂ ಆರಾಧನೆ ಮಾಡುವುದು.

* ದುರ್ಗಾ ಸಪ್ತಶತಿ ಪಾರಾಯಣ, ದುರ್ಗಾ ಸಹಸ್ರನಾಮ ಪಾರಾಯಣ, ಸ್ತೋತ್ರ ಮತ್ತು ಮಂತ್ರ ಜಪ ಮಾಡುವುದು.

* ಮಹಾಕಾಳಿ, ಶ್ರೀರಾಜರಾಜೇಶ್ವರಿ ಸಹಸ್ರನಾಮ, ಸ್ತೋತ್ರ ಪಾರಾಯಣ ಮತ್ತು ಆರಾಧನೆ ಮಾಡಬೇಕು.

* ಗಣಪತಿ ಮತ್ತು ಸುಬ್ರಹ್ಮಣ್ಯ ಸಹಸ್ರನಾಮ ಸ್ತೋತ್ರ ಪಾರಾಯಣ ಮಾಡುವುದು.

* ನಾಗ ದೇವತೆಗಳ ಕ್ಷೇತ್ರದರ್ಶನ ಮತ್ತು ಆರಾಧನೆ ಮಾಡುವುದರಿಂದ ಶಾಂತಿ ಆಗುವುದು.

* ಮೇಲೆ ತಿಳಿಸಿರುವ ಶಾಂತಿ ಕ್ರಮವನ್ನು ಆಚರಿಸುವ ಮೊದಲು ನಾಗರ ಕಟ್ಟೆಗೆ ಪ್ರದಕ್ಷಿಣೆ ನಮಸ್ಕಾರವನ್ನು ಮುಖ್ಯವಾಗಿ ಮಾಡಬೇಕು.

ಲೇಖಕರು: ಜ್ಯೋತಿಷ ಶಾಸ್ತ್ರಿ, ಜ್ಯೋತಿಷ ರತ್ನ