ಅ.13ರಿಂದ ಶರಣಸಂಸ್ಕೃತಿ ಉತ್ಸವ

Contributed byShridevi Ambekallu|Vijaya Karnataka
sharana culture festival to be held from october 13 to 21
ಚಿತ್ರದುರ್ಗ: ಶ್ರೀಮುರುಘರಾಜೇಂದ್ರ ಬೃಹನ್ಮಠದಿಂದ ಪ್ರತಿವರ್ಷ ನಡೆಯುವ ಶರಣಸಂಸ್ಕೃತಿ ಉತ್ಸವವನ್ನು ಈ ಬಾರಿ ಅಕ್ಟೋಬರ್ 13ರಿಂದ 21ರವರೆಗೆ ಆಚರಿಸಲು ಶ್ರೀಮಠದಲ್ಲಿಆಗಸ್ಟ್ 18ರಂದು ನಡೆದ ಪೂರ್ವಸಿದ್ಧತಾ ಸಭೆಯಲ್ಲಿತೀರ್ಮಾನಿಸಲಾಯಿತು.

ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ‘ಈ ಬಾರಿ ಸರಳ ಹಾಗೂ ಅರ್ಥಪೂರ್ಣವಾಗಿ ಶರಣಸಂಸ್ಕೃತಿ ಉತ್ಸವ ನಡೆಸಲಾಗುವುದು. ಎಂದಿನಂತೆ ಕ್ರೀಡೆ, ಕೃಷಿ, ಮಹಿಳಾ, ಮಕ್ಕಳ ಗೋಷ್ಠಿಗಳು, ಜಯದೇವ ಜಂಗೀಕುಸ್ತಿ ಜತೆಯಲ್ಲಿಶ್ರೀಜಯವಿಭವ ಜಗದ್ಗುರುಗಳ ಕುರಿತು ಚಿನ್ಮೂಲಾದ್ರಿ ಚಿದ್ರೂಪ, ಶಾಂತವೀರ ಜಗದ್ಗುರುಗಳ ಕುರಿತ ಬೃಹತ್ ಗ್ರಂಥ ಹಾಗೂ ಶ್ರೀಜಯದೇವ ಜಗದ್ಗುರುಗಳ ಕುರಿತು ಕಾದಂಬರಿ ಬಿಡುಗಡೆ ಸೇರಿ 10 ಸಾವಿರ ಜನರಿಂದ ವಚನ ಝೇಂಕಾರ, ಎಸ್ ಜೆಎಂ ವಿಶ್ವವಿದ್ಯಾಲಯ ಸಹಯೋಗದಲ್ಲಿಯುವಜನರಲ್ಲಿಅರಿವು ಮೂಡಿಸಲು ನಶಾಮುಕ್ತ ಭಾರತ ಜಾಥಾ ಒಳಗೊಂಡ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.