Ntpc Limited Recruitment Last Date To Apply For 147 Engineer And Executive Positions Is September 7
ಪುಟ 5 ಲೀಡ್
Contributed by: Jaya shree|Vijaya Karnataka•
ದೇಶಾದ್ಯಂತ ಎನ್ ಜಿಇಎಲ್ ನೇಮಕಾತಿ
- ಎಂಜಿನಿಯರ್ ಹಾಗೂ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆಕೇಂದ್ರ ಸರಕಾರದ ಅಧೀನದಲ್ಲಿರುವ ಎನ್ ಟಿಪಿಸಿ ಲಿಮಿಟೆಡ್ ನ ಅಂಗಸಂಸ್ಥೆಯಾದ ‘ಎನ್ ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್ ’ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿಖಾಲಿ ಇರುವ ಒಟ್ಟು 147 ಎಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 7 ಕೊನೆಯ ದಿನವಾಗಿದೆ.
ನೇಮಕಾತಿಯು ಸಿವಿಲ್ ಎಂಜಿನಿಯರ್ -43, ಎಲೆಕ್ಟ್ರಿಕಲ್ ಇಂಜಿನಿಯರ್ -69, ಮೆಕ್ಯಾನಿಕಲ್ ಇಂಜಿನಿಯರ್ -9, ಎಕ್ಸಿಕ್ಯೂಟಿವ್ (ಮಾನವ ಸಂಪನ್ಮೂಲ)-4, ಎಕ್ಸಿಕ್ಯೂಟಿವ್ (ಹಣಕಾಸು)-9, ಎಂಜಿನಿಯರ್ (ಸುರಕ್ಷತೆ)-7, ಎಕ್ಸಿಕ್ಯೂಟಿವ್ (ಸಿಎಸ್ ಆರ್ )-5 ಮತ್ತು ಎಕ್ಸಿಕ್ಯೂಟಿವ್ -1 ಹುದ್ದೆಗಳನ್ನು ಒಳಗೊಂಡಿದೆ.
ಅರ್ಹತೆ: ವಿವಿಧ ಎಂಜಿನಿಯರ್ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿಶೇ. 65ರಷ್ಟು ಅಂಕಗಳೊಂದಿಗೆ ಬಿ.ಇ ಅಥವಾ ಬಿ.ಟೆಕ್ ಪದವಿ ಪಡೆದಿರಬೇಕು. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಎಂಬಿಎ, ಸಿಎ, ಸಿಎಂಎ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಇದರೊಂದಿಗೆ ಆಯಾ ಹುದ್ದೆಗಳಿಗೆ ತಕ್ಕಂತೆ ಕನಿಷ್ಠ 1ರಿಂದ 3 ವರ್ಷಗಳ ಅನುಭವ ಕಡ್ಡಾಯವಾಗಿದೆ. ಎಸ್ ಸಿ, ಎಸ್ ಟಿ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ವಿದ್ಯಾರ್ಹತೆಯಲ್ಲಿಶೇ. 55ರಷ್ಟು ಅಂಕಗಳ ಸಡಿಲಿಕೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷಗಳಾಗಿರಬೇಕು. ನಿಯಮಾನುಸಾರ ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು. ಎಸ್ ಸಿ, ಎಸ್ ಟಿ, ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ, ಸಂದರ್ಶನ ಹಾಗೂ ಅನುಭವದ ಆಧಾರದ ಮೇಲೆ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಸುಮಾರು 11 ಲಕ್ಷ ರೂಪಾಯಿಗಳ ವೇತನ ದೊರೆಯಲಿದೆ.