ಪೊನ್ನಾಡ್ ಎಫ್ ಪಿಒಗೆ ರಾಜ್ಯಮಟ್ಟದ ಶ್ರೇಷ್ಠತಾ ಪ್ರಶಸ್ತಿ

Contributed bynasirmnkodagu@gmail.com|Vijaya Karnataka
ponnad farmers producer organization receives state excellence award
ಪೊನ್ನಾಡ್ ಎಫ್ ಪಿಒಗೆ ರಾಜ್ಯಮಟ್ಟದ ಶ್ರೇಷ್ಠತಾ ಪ್ರಶಸ್ತಿ

*ಮಾರುಕಟ್ಟೆ ವಿಭಾಗದಲ್ಲಿಗೌರವ | ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿಕೆ
ವಿಕ ಸುದ್ದಿಲೋಕ, ಮಡಿಕೇರಿ

ಈಶಾ ಔಟ್ ರೀಚ್ ಸಹಕಾರ ಮತ್ತು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ (ಎಫ್ ಪಿಒ) ಮಾರುಕಟ್ಟೆ ವಿಭಾಗದಲ್ಲಿರಾಜ್ಯಮಟ್ಟದ ಶ್ರೇಷ್ಠತಾ ಪ್ರಶಸ್ತಿಗೆ ಭಾಜನವಾಗಿದೆ.

ನಗರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ‘‘ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರದಲ್ಲಿನಡೆದ ಸಂಸ್ಥೆಯ 9ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿಪೊನ್ನಾಡ್ ಎಫ್ ಪಿಒಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು,’’ ಎಂದು ತಿಳಿಸಿದರು.

‘‘ರಾಜ್ಯದಲ್ಲಿಕಾರ್ಯನಿರ್ವಹಿಸುತ್ತಿರುವ 1,750 ಎಫ್ ಪಿಒಗಳು ಹಾಗೂ ಕೇಂದ್ರ ಸರಕಾರದ ಪ್ರಾಯೋಜಕತ್ವದಲ್ಲಿನಬಾರ್ಡ್ ಸಹಕಾರದೊಂದಿಗೆ ಕಾರ್ಯಾಚರಿಸುತ್ತಿರುವ 250 ಎಫ್ ಪಿಒಗಳು ಸೇರಿದಂತೆ ಒಟ್ಟು 2,000 ಸಂಸ್ಥೆಗಳ ಪೈಕಿ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ ಮಾರುಕಟ್ಟೆ ವಿಭಾಗದಲ್ಲಿಗಣನೀಯ ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ,’’ ಎಂದು ಹೇಳಿದರು.

15 ಕೋಟಿ ರೂ. ವಹಿವಾಟು: ‘‘ನಾಪೋಕ್ಲುಸೇರಿದಂತೆ ಸುತ್ತಮುತ್ತಲಿನ 24 ಗ್ರಾಮಗಳ ಬೆಳೆಗಾರರ ಅನುಕೂಲಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿ 2023ರಲ್ಲಿಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ ಆರಂಭಗೊಂಡಿತು. ಪ್ರಸ್ತುತ ಸಂಸ್ಥೆ 750 ಸದಸ್ಯರನ್ನು ಹೊಂದಿದ್ದು, ಕಳೆದ ಸಾಲಿನಲ್ಲಿಒಟ್ಟು 15 ಕೋಟಿ ರೂ. ವಹಿವಾಟು ನಡೆಸಿದೆ. ಈ ವ್ಯವಹಾರಗಳಲ್ಲಿಕನಿಷ್ಠ 3 ಲಕ್ಷ ಲಾಭಾಂಶವನ್ನಷ್ಟೇ ಇರಿಸಿಕೊಂಡು ಬೆಳೆಗಾರರ ಅನುಕೂಲಕ್ಕಾಗಿ ಸಂಸ್ಥೆ ಕಾರ್ಯನಿರ್ವಹಿಸಿದೆ. ಸಂಸ್ಥೆಯ ಈ ಸಾಧನೆ ರಾಜ್ಯಮಟ್ಟದ ಪ್ರಶಸ್ತಿಗೆ ಕಾರಣವಾಗಿದೆ,’’ ಎಂದು ವಿವರಿಸಿದರು.

ಪೊನ್ನಾಡ್ ಕಾಫಿ ಬ್ರಾಂಡ್ ಚಿಂತನೆ: ‘‘ಪೊನ್ನಾಡ್ ಎಫ್ ಪಿಒ ಈಗಾಗಲೇ ಬೆಳೆಗಾರರಿಂದ ಕಾಫಿ ಖರೀದಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿಸ್ಥಳೀಯ ಕಾಫಿಯನ್ನು ಪುಡಿ ಮಾಡಿ ಪೊನ್ನಾಡ್ ಬ್ರಾಂಡ್ ನಲ್ಲಿಮಾರುಕಟ್ಟೆಗೆ ಪರಿಚಯಿಸುವ ಚಿಂತನೆ ಇದೆ,’’ ಎಂದು ತಿಳಿಸಿದರು.

‘‘ಇದರ ಜತೆಗೆ ಕರಿಮೆಣಸು ಹಾಗೂ ಏಲಕ್ಕಿ ಖರೀದಿ, ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಹಾರಗಳಲ್ಲೂಸಂಸ್ಥೆ ತೊಡಗಿಸಿಕೊಂಡಿದ್ದು, ರೈತರಿಗೆ ಉತ್ತಮ ಮಾರುಕಟ್ಟೆ ಅವಕಾಶ ಕಲ್ಪಿಸುತ್ತಿದೆ. ಸಂಸ್ಥೆಯ ಕಾರ್ಯಗಳಿಗೆ ಈಶಾ ಔಟ್ ರೀಚ್ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಿದ್ದು, ಕೊಯಮತ್ತೂರಿನಲ್ಲಿತರಬೇತಿಯನ್ನೂ ನೀಡುತ್ತಿದೆ,’’ ಎಂದರು.

ರೈತರಿಗೆ ಗುಣಮಟ್ಟದ ಸುಣ್ಣ: ‘‘ಸಂಸ್ಥೆಯ ವತಿಯಿಂದ ಕೃಷಿಕ ಸದಸ್ಯರಿಗೆ ಗುಣಮಟ್ಟದ ಸುಣ್ಣವನ್ನು ವಿತರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿಕಳಪೆ ಗುಣಮಟ್ಟದ ಸುಣ್ಣ ಟನ್ ಗೆ 5,500 ರೂ.ಗಳಿಂದ 8,000 ರೂ.ವರೆಗೆ ಮಾರಾಟವಾಗುತ್ತಿದ್ದರೆ, ಪೊನ್ನಾಡ್ ಸಂಸ್ಥೆ ಗುಣಮಟ್ಟದ ಸುಣ್ಣವನ್ನು 3,750ರೂ.ನಿಂದ 4,000ರೂ. ದರದಲ್ಲಿಬೆಳೆಗಾರರಿಗೆ ವಿತರಿಸುತ್ತಿದೆ,’’ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ‘‘ಕಳೆದ ಸಾಲಿನಲ್ಲಿಪೊನ್ನಾಡ್ ಸಂಸ್ಥೆ ಸುಮಾರು 20 ಸಾವಿರ ಚೀಲ ಕಾಫಿಯನ್ನು ಬೆಳೆಗಾರರಿಂದ ಉತ್ತಮ ದರ ನೀಡಿ ಖರೀದಿಸಿದೆ. ಕಾಫಿಯ ಗುಣಮಟ್ಟ ಕಾಪಾಡಿಕೊಳ್ಳಲು ಅಗತ್ಯ ಸಹಕಾರವನ್ನೂ ಬೆಳೆಗಾರರಿಗೆ ನೀಡಲಾಗುತ್ತಿದೆ,’’ ಎಂದರು.

ಸುದ್ದಿಗೋಷ್ಠಿಯಲ್ಲಿನಿರ್ದೇಶಕರಾದ ಕೇಟೋಳಿರ ರತ್ನ ಚರ್ಮಣ, ಕಾಟುಮಣಿಯಂಡ ಎಂ. ಉಮೇಶ್ ಹಾಗೂ ಈಶಾ ಔಟ್ ರೀಚ್ ನ ರಾಜ್ಯ ಸಂಯೋಜಕ ವಿಶ್ವನಾಥ್ ಉಪಸ್ಥಿತರಿದ್ದರು.

*ಫೋಟೊ ಇದೆ

ಮಾರುಕಟ್ಟೆ ವಿಭಾಗದಲ್ಲಿರಾಜ್ಯಮಟ್ಟದ ಶ್ರೇಷ್ಠತಾ ಪ್ರಶಸ್ತಿ ಪಡೆದ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿಪ್ರಶಸ್ತಿ ಪ್ರದರ್ಶಿಸಿದರು.