ವಿಕ ಸುದ್ದಿಲೋಕ ಮಂಗಳೂರುಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಆಶ್ಮಿತ್ ಎ.ಜೆ. ಝೀ ಕನ್ನಡ ಸ ರಿ ಗ ಮ ಪ ಲಿಟಲ್ ಚಾಂಫ್ಸ್ 2026ರ ವಿಜೇತನಾಗಿ ಹೊರಹೊಮ್ಮಿದ್ದು, ವಿಜೇತ ಟ್ರೋಫಿ ಮತ್ತು 20 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾನೆ. ಸ್ಪರ್ಧೆಯುದ್ದಕ್ಕೂ ಖ್ಯಾತ ಗಾಯಕಿ ಇಂದು ನಾಗರಾಜ್ ಅವರು ಆತನಿಗೆ ಮಾರ್ಗದರ್ಶನ ನೀಡಿದ್ದರು.ಆಶ್ಮಿತ್ ನ ಈ ಅಸಾಧಾರಣ ಯಶಸ್ಸನ್ನು ಶ್ಲಾಸಿದ ಸಂಸ್ಥೆಯ ಪ್ರಿನ್ಸಿಪಾಲ್ ಫಾ. ರೋಹನ್ ಡಿ ಅಲ್ಮೇಡಾ ಎಸ್ .ಜೆ.ಅವರು ಅಭಿನಂದಿಸಿದರು.
ಜಯರಾಮ್ ಎ ಮತ್ತು ರೇವತಿ ಕೆ ಅವರ ಪುತ್ರ ಆಶ್ಮಿತ್ ಎ.ಜೆ. ಒಂದನೇ ತರಗತಿಯಿಂದಲೇ ಸಂತ ಅಲೋಶಿಯಸ್ ಗೊನ್ಜಾಗಶಾಲೆಯಲ್ಲಿಕಲಿಯತ್ತಿದ್ದು, ಆರಂಭಿಕ ವರ್ಷಗಳಿಂದಲೇ ಆತನ ಶಿಕ್ಷಕರು ಮತ್ತು ಶಾಲೆಯ ಸಂಗೀತ ಶಿಕ್ಷಕರು ಆತನ ಗಾಯನದಲ್ಲಿನ ಅಸಾಧಾರಣ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದ್ದರು.