ಕೇದಾರನಾಥಗೆ ಪಾದಯಾತ್ರೆ ಯಶಸ್ವಿ:ಸ್ವಾಗತ

Contributed bybeerappapujar93@gmail.com|Vijaya Karnataka
successful pilgrimage to kedarnath in just 87 days
ಕೇದಾರನಾಥಗೆ ಪಾದಯಾತ್ರೆ ಯಶಸ್ವಿ :ಸ್ವಾಗತ

ವಿಕ ಸುದ್ದಿಲೋಕ ಲಕ್ಷೆ ್ಮೕಶ್ವರ
ಪಟ್ಟಣದ ಯುವಕ ವಿಕಾಸ ಮಂಜುನಾಥ ಮಹಾಜನಶೆಟ್ಟರ ಅವರು ಲಕ್ಷೆ ್ಮೕಶ್ವರದಿಂದ ಕೇದಾರನಾಥ ವರೆಗೆ ಕೈಗೊಂಡ 87 ದಿನಗಳ, 2100 ಕಿ.ಮೀ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪಟ್ಟಣಕ್ಕೆ ಮರಳಿದ ಹಿನ್ನೆಲೆಯಲ್ಲಿಹಿಂದೂ ಮಹಾಸಭಾ ಗಣಪತಿ ಮಂಡಳಿ, ಹಾವಳಿ ಆಂಜನೇಯ ದೇವಸ್ಥಾನ ಕಮಿಟಿ, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ಬಂಧುಗಳು ಹಾಗೂ ಸ್ನೇಹಿತರ ಬಳಗದಿಂದ ಅವರಿಗೆ ಸ್ವಾಗತ ನೀಡಲಾಯಿತು.

ವಿಕಾಸ ಅವರು ಮೇ 13ರಂದು ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿಪೂಜೆ ಸಲ್ಲಿಸಿ ಕೇದಾರನಾಥದತ್ತ ಪಾದಯಾತ್ರೆ ಆರಂಭಿಸಿದ್ದರು. ಪ್ರತಿದಿನ ಸರಾಸರಿ 25ರಿಂದ 30 ಕಿ.ಮೀ ಕ್ರಮಿಸುತ್ತಾ ರಾಜ್ಯದ ವಿವಿಧ ಭಾಗಗಳನ್ನು ದಾಟಿ ಉತ್ತರ ಭಾರತದತ್ತ ಸಾಗಿದರು. ಹಾದಿ ಬದಲಾದರೂ ಗುರಿ ಬದಲಾಗಲಿಲ್ಲ. ದಾರಿ ಕಠಿಣವಾಗಿದ್ದರೂ ಸಂಕಲ್ಪ ಸಡಿಲವಾಗಲಿಲ್ಲ. ಪಾದಗಳಲ್ಲಿನೋವು, ದೇಹದಲ್ಲಿಆಯಾಸ ಎದುರಾದರೂ ಮನದಲ್ಲಿ‘ಹರ ಹರ ಮಹಾದೇವ’ ‘ರಾಧೆ ರಾಧೆ’ ಎಂಬ ಮಂತ್ರವನ್ನು ಜಪಿಸುತ್ತಾ ವಿಕಾಸ ಹೆಜ್ಜೆ ಮುಂದುವರಿಸಿದ್ದರು.

87 ದಿನಗಳ ನಿರಂತರ ನಡಿಗೆಯ ಬಳಿಕ ಆ.7ರಂದು ಕೇದಾರನಾಥ ತಲುಪಿದ ಅವರು ಶಿವನ ದರ್ಶನ ಪಡೆದು ಸಂಕಲ್ಪ ಈಡೇರಿಸಿಕೊಂಡರು. ಕೇದಾರನಾಥದಲ್ಲಿ25 ಕೆಜಿ ಅಕ್ಕಿಯನ್ನು ಬಳಸಿ ಭಕ್ತರಿಗೆ ಪ್ರಸಾದ ವಿತರಿಸಿರುವುದು ವಿಶೇಷವಾಗಿತ್ತು. ಲಕ್ಷೆ ್ಮೕಶ್ವರಕ್ಕೆ ಮರಳಿದ ವಿಕಾಸ ಅವರನ್ನು ಬಜಾರ್ ಮುಖ್ಯ ರಸ್ತೆ ಉದ್ದಕ್ಕೂ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಬಂಧುಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕೋಟ್

ದೈವಭಕ್ತಿ, ಆತ್ಮವಿಶ್ವಾಸ, ಶಿಸ್ತು ಮತ್ತು ಅಚಲ ಸಂಕಲ್ಪದಿಂದ ಮುನ್ನಡೆದರೆ ಅಸಾಧ್ಯವೆನಿಸುವ ಗುರಿ ಸಾಧಿಸಬಹುದು ಎಂಬುದನ್ನು ವಿಕಾಸ ತೋರಿಸಿಕೊಟ್ಟಿದ್ದಾರೆ. ಇಂಥ ಸಾಹಸ ಯುವಕರಿಗೆ ಪ್ರೇರಣೆಯಾಗಿದೆ. ವಿಕಾಸ ಅವರ 87 ದಿನಗಳ ಪಾದಯಾತ್ರೆ ಧಾರ್ಮಿಕ ಭಕ್ತಿಯ ಜತೆಗೆ ಆತ್ಮವಿಶ್ವಾಸ, ತಾಳ್ಮೆ ಮತ್ತು ಸಂಕಲ್ಪದ ಮಹತ್ವ ಸಾರುವ ಮೂಲಕ ಗಮನ ಸೆಳೆದಿದ್ದಾರೆ.

-ಲಕ್ಷೆ ್ಮೕಶ್ವರದ ವಿವಿಧ ಸಂಘಟನೆ ಹಾಗೂ ಕಮಿಟಿ

ಪೋಟೊ: ಕೇದಾರನಾಥ 87 ದಿನಗಳ ಪಾದಯಾತ್ರೆ ಮಾಡಿ ಶಿವನ ದರ್ಶನ ಪಡೆದು ಮರಳಿ ಲಕ್ಷೆ ್ಮೕಶ್ವರಕ್ಕೆ ಬಂದ ವಿಕಾಸ ಮಹಾಜನಶೆಟ್ಟರ ಅವರಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.