ಗೋಮಾಳ ಜಮೀನಿನಲ್ಲಿನಿಯಮ ಉಲ್ಲಂಘಿಸಿ ಕ್ರಷರ್ ಸ್ಥಾಪನೆ

Contributed byragh.pkn@gmail.com|Vijaya Karnataka
protest by villagers against establishment of crusher in gomala land
ಸ್ಥಳದಲ್ಲಿಜಾನುವಾರುಗಳೊಂದಿಗೆ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ

ವಿಕ ಸುದ್ದಿಲೋಕ ಕೋಲಾರ
ತಾಲೂಕಿನ ವೇಮಗಲ್ ಹೋಬಳಿ ಸೀತಿ ಗ್ರಾಮದ ಸರ್ವೇ ನಂ.19ರ ಸರ್ಕಾರಿ ಗೋಮಾಳ ಜಮೀನಿನಲ್ಲಿನಿಯಮ ಉಲ್ಲಂಘಿಘಿಸಿ ಜಲ್ಲಿಕ್ರಷರ್ ಘಟಕ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸೀತಿ, ತಿಪ್ಪೇನಹಳ್ಳಿ ಮಾರ್ಜೇನಹಳ್ಳಿ ಹಾಗೂ ಮಠಪುರ ಗ್ರಾಮಸ್ಥರು ಜಾನುವಾರುಗಳೊಂದಿಗೆ ಕ್ರಷರ್ ಮುಂಭಾಗ ಅಡುಗೆ ಮಾಡಿಕೊಂಡು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕೃಷಿಗೆ ಯೋಗ್ಯವಾಗಿರುವ ಹಾಗೂ ಜಾನುವಾರುಗಳ ಮೇಯುವಿಕೆಗೆ ಮೀಸಲಿರುವ ಗೋಮಾಳ ಜಮೀನಿನಲ್ಲಿನಿಯಮ ಉಲ್ಲಂಘಿಘಿಸಿ ಕ್ರಷರ್ ಘಟಕ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ವೆ ನಂ.19ರಲ್ಲಿಸುಮಾರು 25 ಎಕರೆ ಗೋಮಾಳ ಜಮೀನನ್ನು ಅಕ್ರಮವಾಗಿ ಅತಿಕ್ರಮಿಸಲಾಗಿದೆ. ಕೇವಲ ಆರು ಎಕರೆ ಪ್ರದೇಶಕ್ಕೆ ಅನುಮತಿ ಪಡೆದು, ಉಳಿದ ಜಮೀನನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಈ ಕುರಿತು ಗಣಿ ಮತ್ತು ಭೂ ಅಧಿಕಾರಿಗಳಿಗೆ ದೂರು ನೀಡಿದರೂ ಉಡಾಫೆ ಉತ್ತರ ನೀಡುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ನೀಡಲಾಗಿದೆ ಎಂಬ ಅನುಮಾನವಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕ್ರಷರ್ ನಿಂದ ಹೊರಬರುವ ಧೂಳಿನಿಂದ ಸುತ್ತಮುತ್ತಲಿನ ಕೃಷಿ ಬೆಳೆಗಳು ಹಾನಿಗೊಳಗಾಗುತ್ತಿವೆ. ಅಕ್ಕಪಕ್ಕದ ಜಮೀನುಗಳ ಮೇಲೆ ಕಲ್ಲುಹಾಗೂ ಧೂಳು ಬೀಳುತ್ತಿದೆ. ಜನಪ್ರತಿನಿಧಿಗಳು ಬಡ ರೈತರ ಪರ ನಿಲ್ಲಬೇಕು. ರೈತರಿಗೆ ತೊಂದರೆಯಾದರೆ ಪಕ್ಷಾತೀತವಾಗಿ ಅವರೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸೀತಿ ಗ್ರಾಮದ ಮುರಳಿಗೌಡ ಮಾತನಾಡಿ, ಹೊಸಕೋಟೆ ಮೂಲದ ನರೇಂದ್ರ ಎಂ.ಸಿ.ಮಾಲೀಕತ್ವದ ಕೇಶವ ಕನ್ಸ್ ಟ್ರಕ್ಷನ್ಸ್ ಹೆಸರಿನಲ್ಲಿಕ್ರಷರ್ ಘಟಕ ನಿರ್ಮಿಸಲಾಗಿದೆ. ಕೇವಲ ಆರು ಎಕರೆ ಪ್ರದೇಶದಲ್ಲಿಕಟ್ಟಡ ಕಲ್ಲುಗಣಿಗಾರಿಕೆಗೆ ಅನುಮತಿ ಪಡೆದಿದ್ದರೂ ಸುಮಾರು 20 ಎಕರೆ ಸರಕಾರಿ ಗೋಮಾಳ ಜಮೀನನ್ನು ಅತಿಕ್ರಮಿಸಲಾಗಿದೆ ಎಂದು ಆರೋಪಿಸಿದರು.

ಮಾರ್ಜೇನಹಳ್ಳಿ ಗ್ರಾಮದ ಪ್ರಭು ಮಾತನಾಡಿ, ಎನ್ ಎಚ್ ಎಐ ಕಾಮಗಾರಿಗಾಗಿ ಕ್ರಷರ್ ನಡೆಸಲಾಗುತ್ತಿದ್ದು, ಕೃಷಿ ಭೂಮಿಯಿಂದ ಕೇವಲ 20 ಮೀಟರ್ ಅಂತರದಲ್ಲಿಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಧೂಳು ಗ್ರಾಮಗಳಿಗೆ ವ್ಯಾಪಿಸಿ ಬೆಳೆಗಳಿಗೆ ಹಾನಿಯಾಗುತ್ತಿದೆ. ಕಲ್ಲುಸ್ಫೋಟದಿಂದ ಮನೆಗಳು ಹಾಗೂ ಕೊಳವೆ ಬಾವಿಗಳಿಗೆ ಹಾನಿಯಾಗುವ ಆತಂಕವಿದೆ. ಜಿಂಕೆ, ಮೊಲ, ನವಿಲು ಸೇರಿದಂತೆ ವನ್ಯಜೀವಿಗಳಿಗೂ ತೊಂದರೆಯಾಗುತ್ತಿದೆ ಕೂಡಲೇ ಕ್ರಷರ್ ಕಾರ್ಯಾಚರಣೆ ಸ್ಥಗಿತಗೊಳಿಸಿ, ಅತಿಕ್ರಮಣ ತೆರವುಗೊಳಿಸಿ, ನಿಯಮ ಉಲ್ಲಂಘನೆ ಕುರಿತು ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿಸೀತಿ, ತಿಪ್ಪೇನಹಳ್ಳಿ, ಮಾರ್ಜೇನಹಳ್ಳಿ ಹಾಗೂ ಮಠಪುರ ಗ್ರಾಮಸ್ಥರು ಧರಣಿಯಲ್ಲಿಭಾಗವಹಿಸಿದ್ದರು.

=

ಫೋಟೋಕ್ಯಾಪ್ಷನ್ : ತಾಲೂಕಿನ ಸೀತಿ ಸಮೀಪ ಗೋಮಾಳ ಜಮೀನಿನಲ್ಲಿನಿಯಮ ಉಲ್ಲಂಘಿಘಿಸಿ ಕ್ರಷರ್ ಸ್ಥಾಪನೆ ಮಾಡಲಾಗಿದ್ದು, ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. (24ಕೆಪಿಎಚ್ 3)