ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿಸೋಮವಾರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅಧ್ಯಕ್ಷತೆಯಲ್ಲಿಭಾರತ್ ಜೋಡೋ ಯುವ ಸಂಘದ ಯೋಜನೆಯ ಪರಿಶೀಲನಾ ಸಭೆ ನಡೆಯಿತು.‘‘ಯೋಜನೆಯ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿ, ನಿರಂತರವಾಗಿ ಅನುಸರಣೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆಯುಕ್ತರು ಸೂಚನೆ ನೀಡಿದರು. ವಿಶೇಷವಾಗಿ ಯುವಜನರಿಗೆ ಯೋಜನೆ ಪ್ರಯೋಜನಗಳ ಕುರಿತು ಸೂಕ್ತ ಮಾಹಿತಿ ನೀಡಿ, ಜಾಗೃತಿ ಮೂಡಿಸುವಂತೆ ಅವರು ನಿರ್ದೇಶಿಸಿದರು.
ರಾಜ್ಯ ಸರಕಾರದ ನಿರ್ದೇಶನದಂತೆ ಅಂತಿಮ ನೋಂದಣಿ ಪ್ರಕ್ರಿಯೆ ಆ.31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ನಿಗದಿತ ಅವಧಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸುವಂತೆ ಆಯುಕ್ತರು ಕರೆ ನೀಡಿದರು.
ಪಾಲಿಕೆಯ ನಗರ ಯೋಜನೆ, ಆರೋಗ್ಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೊ-23ಎಂ-ಭಾರತ್ ಜೋಡೊ
ಮಂಗಳೂರು ಮಹಾನಗರ ಪಾಲಿಕೆಯಲ್ಲಿಸೋಮವಾರ ಭಾರತ್ ಜೋಡೋ ಯುವ ಸಂಘ ಯೋಜನೆ ಪರಿಶೀಲನಾ ಸಭೆ ನಡೆಯಿತು.