ಪ್ರಶಾಂತಿ ವಿದ್ಯಾಕೇಂದ್ರದಲ್ಲಿಜಿಲ್ಲಾಮಟ್ಟದ ಸೇವಾದಳ ತರಬೇತಿ ಶಿಬಿರ

Contributed bygangadhar.korekkana@gmail.com|Vijaya Karnataka
successful completion of district level seva dal training camp in kasaragod
ವಿಕ ಸುದ್ದಿಲೋಕ ಮಂಜೇಶ್ವರ

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲೆ, ಕರ್ನಾಟಕ ಉತ್ತರ ಇದರ ಜಿಲ್ಲಾಮಟ್ಟದ ಸೇವಾದಳ ತರಬೇತಿ ಶಿಬಿರವು ಭಾನುವಾರದಂದು ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರು ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿನಡೆಯಿತು. ಕಾರ್ಯಕ್ರಮವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಉತ್ತರ ಇದರ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಅವರು ಧ್ವಜಾರೋಹಣ ಮತ್ತು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಬಳಿಕ ಭಗವಾನ್ ಶ್ರೀ ಸತ್ಯಸಾಯಿ ಬಾಬಾ: ಅವತಾರ ಮತ್ತು ದೈವೀ ಕಾರ್ಯ ಈ ವಿಷಯವಾಗಿ ವಿಚಾರ ಮಂಡಿಸಿದರು.
ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪೈ ಅವರು ಸಂಸ್ಥೆಯ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಜಿಲ್ಲಾಧ್ಯಕ್ಷ ಎಚ್ . ಮಹಾಲಿಂಗ ಭಟ್ ಅವರು ‘ಶ್ರೀ ಸತ್ಯಸಾಯಿ ಸೇವಾ ಸಮಿತಿಯ ನಿರ್ವಹಣೆ ಮತ್ತು ಮೂರು ವಿಭಾಗಗಳ ಸಬಲೀಕರಣ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ಈ ತರಬೇತಿ ಶಿಬಿರದಲ್ಲಿಒಟ್ಟು 82 ಮಂದಿ ಸೇವಾದಳ ಸದಸ್ಯರು ಭಾಗವಹಿಸಿದ್ದರು. ಶಿಬಿರವು ಮಹಾಮಂಗಳಾರತಿ ಮತ್ತು ನಾರಾಯಣ ಸೇವೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

24ಎಂಜೆಸತ್ಯಸಾಯಿ