ಶಾಸಕರ ಮುತುವರ್ಜಿ: 400 ವಿದ್ಯಾರ್ಥಿಗಳಿಗೆ ನಿತ್ಯ ಮಧ್ಯಾಹ್ನದ ಊಟ

Contributed byragh.pkn@gmail.com|Vijaya Karnataka
free midday meal arrangement for 400 students by mla
ವಿಕ ಸುದ್ದಿಲೋಕ ಕೋಲಾರ

ತಾಲೂಕಿನ ವೇಮಗಲ್ -ನರಸಾಪುರ ಭಾಗದ ಎರಡು ಪದವಿ ಪೂರ್ವ ಕಾಲೇಜುಗಳ ಸುಮಾರು 400 ವಿದ್ಯಾರ್ಥಿಗಳಿಗೆ ಸಾಯಿ ಆಶ್ರಯ ಸಂಸ್ಥೆಯ ವತಿಯಿಂದ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಮುತುವರ್ಜಿಯಿಂದ ಕಲ್ಪಿಸಲಾಗಿದೆ.
ದೂರದ ಊರುಗಳಿಂದ ಕಾಲೇಜಿಗೆ ಆಗಮಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಊಟದ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜು ಆಡಳಿತ ಮಂಡಳಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಮಾಡಿದ್ದವು. ಮನವಿಗೆ ಸ್ಪಂದಿಸಿದ ಶಾಸಕರು ಸಾಯಿ ಆಶ್ರಯ ಸಂಸ್ಥೆಯೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಊಟ ನೀಡುವಂತೆ ವ್ಯವಸ್ಥೆ ಮಾಡಿದರು.

ಅದರಂತೆ ಸೋಮವಾರ ವೇಮಗಲ್ ಕಾಲೇಜಿನಲ್ಲಿಕಾಂಗ್ರೆಸ್ ಮುಖಂಡರು ವಿದ್ಯಾರ್ಥಿಗಳಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿಆಶ್ರಯ ಸಮಿತಿ ಸದಸ್ಯ ಪೆರ್ಜೇನಹಳ್ಳಿ ನಾಗೇಶ್ ಮಾತನಾಡಿ, ಶಾಸಕರ ಮುತುವರ್ಜಿಯಿಂದ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಸಮಸ್ಯೆ ನಿವಾರಣೆಯಾಗಲಿದೆ. ಇಂತಹ ಸಹಕಾರಗಳು ವಿದ್ಯಾರ್ಥಿಗಳ Íಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಲಿವೆ ಎಂದರು.

ಈ ಸಂದರ್ಭದಲ್ಲಿವೇಮಗಲ್ -ನರಸಾಪುರ ಪ್ರಾಧಿಕಾರದ ಸದಸ್ಯ ಬಿ.ನಾಗರಾಜ್ , ಉಪನ್ಯಾಸಕ ಟಿ.ಕೆ. ನಟರಾಜ್ , ಉಪಪ್ರಾಂಶುಪಾಲ ರಮೇಶ್ , ಪಟ್ಟಣ ಪಂಚಾಯಿತಿ ಸದಸ್ಯರಾದ ತಾಸು ಖಾನ್ , ಗಂಗಪ್ಪ, ಸನಾವುಲ್ಲಖಾನ್ , ತಿರುಮಳಪ್ಪ, ವಿ.ಪಿ. ರವಿಕುಮಾರ್ , ಮುಖಂಡರಾದ ಮೆಡಿಕಲ್ ಮುನಿರಾಜ್ , ಮಂಜುನಾಥ್ , ಶಶಿಕುಮಾರ್ , ಚಂದ್ರು, ಚೌಡರೆಡ್ಡಿ, ಜಮೀರ್ , ಹಾಗೂ ಸಾಯಿ ಆಶ್ರಯ ಟ್ರಸ್ಟ್ ಸಿಬ್ಬಂದಿ, ಇದ್ದರು.

=

ಫೋಟೋಕ್ಯಾಪ್ಷನ್ : ಕೋಲಾರ ತಾಲೂಕಿನ ವೇಮಗಲ್ -ನರಸಾಪುರ ಭಾಗದ ಎರಡು ಪದವಿ ಪೂರ್ವ ಕಾಲೇಜುಗಳ ಸುಮಾರು 400 ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಶಾಸಕ ಕೊತ್ತೂರು ಮಂಜುನಾಥ್ ಮುತುವರ್ಜಿಯಿಂದ ಕಲ್ಪಿಸಲಾಗಿದ್ದು, ಸೋಮವಾರ ಅಧಿಕೃತ ಚಾಲನೆ ನೀಡಲಾಯಿತು. (24ಕೆಪಿಎಚ್ 4)