ವಿಕ ಸುದ್ದಿಲೋಕ ಕಾಸರಗೋಡು
ಕೇರಳದಲ್ಲಿಬಿಜೆಪಿಗೆ ಸ್ಥಾನವಿಲ್ಲಎಂದು ಪ್ರಚಾರ ಮಾಡಿದವರಿಗೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹಿನ್ನಡೆಯಾಗಿದ್ದು, ಮುಂಬರುವ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲೂಬಿಜೆಪಿಯ ಶಕ್ತಿ ಸಾಬೀತಾಗುತ್ತದೆ ಎಂದು ಬಿಜೆಪಿ ಕರ್ನಾಟಕ ಮಾಜಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಸರಗೋಡಿನಲ್ಲಿವಿಧಾನಸಭೆ ಚುನಾವಣಾ ಸಿದ್ಧತೆಯ ಭಾಗವಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಮಂದಿರದಲ್ಲಿನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಜಿಲ್ಲಾಪದಾಧಿಕಾರಿಗಳು ಮತ್ತು ಪಂಚಾಯಿತಿ, ವಲಯ ಉಸ್ತುವಾರಿಗಳ ನಾಯಕತ್ವ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್ . ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಕೋಝಿಕ್ಕೋಡ್ ವಲಯ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ , ಕೋಝಿಕ್ಕೋಡ್ ವಲಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಜಿ.ಕಾಶಿನಾಥ್ , ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್ , ಸತೀಶ್ ಚಂದ್ರ ಭಂಡಾರಿ, ಎ.ವೇಲಾಯುಧನ್ , ಕಾಸರಗೋಡು ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್ .ಸುನೀಲ್ , ಮನುಲಾಲ್ ಮೇಲತ್ ್ತ, ಕಣ್ಣೂರು ಉತ್ತರ ಜಿಲ್ಲಾಕಾರ್ಯದರ್ಶಿ ಮನೋಜ್ , ಕೋಝಿಕೋಡ್ ವಲಯ ಉಪಾಧ್ಯಕ್ಷ ವಿಜಯಕುಮಾರ್ ಮತ್ತಿತರರು ಮಾತನಾಡಿದರು.
ಚಿತ್ರ:20ಕೆಎಸ್ ನಳಿನ್ - ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿದರು.

