ಮಹಿಳಾ ಕ್ರೀಡಾಕೂಟಕ್ಕೆ ಆಹ್ವಾನ
ಸಾಗರ: ಇಲ್ಲಿನ ಸ್ನೇಹಸಾಗರ ಮಹಿಳಾ ಡೊಳ್ಳು ತಂಡದ ಆಶ್ರಯದಲ್ಲಿತಾಲೂಕು ಮಟ್ಟದ ಮಹಿಳಾ ಕ್ರೀಡಾಕೂಟವನ್ನು ಮಾ. 15ರಂದು ಏರ್ಪಡಿಸಲಾಗಿದೆ.
ಅಂದು ಮಧ್ಯಾಹ್ನ 2ಕ್ಕೆ ನಗರಸಭೆ ಆವರಣದ ರಂಗಮಂದಿರದಲ್ಲಿ35 ವರ್ಷ, 45 ವರ್ಷ, 55 ವರ್ಷ, 65 ವರ್ಷ ಸೇರಿ ನಾಲ್ಕು ವಿಭಾಗಗಳಲ್ಲಿಸ್ಪರ್ಧೆ ನಡೆಯುತ್ತದೆ. 20 ವರ್ಷ ಮೇಲ್ಪಟ್ಟ ಎಲ್ಲಮಹಿಳೆಯರು ಸ್ಪರ್ಧೆಯಲ್ಲಿಪಾಲ್ಗೊಳ್ಳಬಹುದು.
100 ಮೀ. ಓಟ, 100 ಮೀಟರ್ ವೇಗದ ನಡಿಗೆ, ಕುಂಟಬಿಲ್ಲೆ, ಲಗೋರಿ, ಚನ್ನಮಣೆ, ಕವಡೆ, ಕಲ್ಲಾಟ, ಚೆಂಡು ಎಸೆಯುವ ಸ್ಪರ್ಧೆಗಳು ನಡೆಯುತ್ತವೆ. ಅತ್ತೆ ಸೊಸೆ, ಅಜ್ಜಿ ಮೊಮ್ಮಗಳು, ಅಮ್ಮ ಮಗಳು ಜೋಡಿಗೆ ರಸಪ್ರಶ್ನೆ ಇರುತ್ತದೆ. ಸ್ಪರ್ಧೆಯಲ್ಲಿಭಾಗವಹಿಸಲು ಇಚ್ಚಿಸುವವರು ಮಾ.5ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಚೂಡಾಮಣಿ ರಾಮಚಂದ್ರ (ಮೊ.9740270544), ಅರುಣಾ ಸಂಜಯ್ (ಮೊ.9380095789) ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

