ಕನ್ನಡಿಗರ ಸ್ವಾಭಿಮಾನ ಕೆಣಕಿದವರನ್ನು ಗಡಿಪಾರು ಮಾಡಿ

Contributed byanjukumaranju6044@gmail.com|Vijaya Karnataka

ರಾಜ್ಯಕ್ಕೆ ಬಂದು ನೆಲೆಸಿರುವ ಕೆಲವರು ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇಂತಹವರನ್ನು ತಕ್ಷಣವೇ ಗಡಿಪಾರು ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆಯ ಆಂಜನಪ್ಪ ಆಗ್ರಹಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಇಂತಹವರ ಮೇಲೆ ನಿಗಾ ಇಟ್ಟು ಕಾನೂನು ಕ್ರಮ ಕೈಗೊಳ್ಳಬೇಕು.

strict action against those hindering kannada identity

ಹಾರೋಹಳ್ಳಿ: ರಾಜ್ಯಕ್ಕೆ ಹೊಟ್ಟೆಪಾಡಿಗೆ ಬಂದ ಕೆಲವರು ಕನ್ನಡಭಾಷೆ ಹಾಗೂ ಕನ್ನಡಿಗರ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದಾರೆ. ಅಂಥವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆಯ ಆಂಜನಪ್ಪ ಆಗ್ರಹಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿಕನ್ನಡ ಭಾಷೆಯ ಮೇಲೆ ದೌರ್ಜನ್ಯ ಹೆಚ್ಚಿದೆ. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲೇ ಘಟನೆ ನಡೆದಿರುವುದು ದುರಾದೃಷ್ಟಕರ ಜಿಲ್ಲಾಡಳಿತ ಇಂಥವರ ಮೇಲೆ ನಿಗಾ ಇಟ್ಟು ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿಅದರಲ್ಲೂಹಾರೋಹಳ್ಳಿ ತಾಲೂಕಿನಲ್ಲಿಕೈಗಾರಿಕಾ ಪ್ರದೇಶ, ಪ್ರತಿಷ್ಟಿತ ಯೂನಿವರ್ಸಿಟಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಹಾಗಾಗಿ ಜಿಲ್ಲಾಡಳಿತ ಗಮನಹರಿಸಿ ಕಾಲೇಜು ಆಡಳಿತ ಮಂಡಳಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದರು.

23ಹಾರೋಹಳ್ಳಿ1 ಆಂಜನಪ್ಪ.