ವಿಕ ಸುದ್ದಿಲೋಕ ಚಿಂತಾಮಣಿ
ನಗರದ ಕಿಶೋರ ವಿದ್ಯಾಭವನ ಶಿಕ್ಷಣ ಸಂಸ್ಥೆ ಆವರಣದಲ್ಲಿಮಾದರಿ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂಸತ್ತಿನಲ್ಲಿದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಕುರಿತು ವಿದ್ಯಾರ್ಥಿಗಳು ಅರ್ಥಪೂರ್ಣ ಕಾರ್ಯಕ್ರಮ ನಡೆಸಿದರು.
ಪ್ರಶ್ನೋತ್ತರ ಅವಧಿಯಲ್ಲಿರೈತರ ಆತ್ಮಹತ್ಯೆ ವಿಷಯವು ಸದನದಲ್ಲಿಕಿಚ್ಚು ಹಚ್ಚಿಸಿತು. ಅನ್ನದಾತನ ಸಾವು ಕೇವಲ ಅಂಕಿಅಂಶವಲ್ಲ, ಈ ಸರಕಾರದ ವೈಫಲ್ಯ ಎಂದು ವಿರೋಧ ಪಕ್ಷದ ಸದಸ್ಯರು ಸರಕಾರದ ವಿರುದ್ಧ ಮುಗಿಬಿದ್ದರು.
ಬೆಳೆ ವಿಮೆ ಮತ್ತು ಸಾಲ ಪರಿಹಾರ ಭರವಸೆಗಳು ರೈತರನ್ನು ತಲುಪುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿದರು. ಸ್ಪೀಕರ್ ಅವರ ಎಚ್ಚರಿಕೆ ದಾಟಿ ಘೋಷಣೆ ಕೂಗಿದಾಗ, ಮಾರ್ಷಲ್ ಗಳು ಧರಣಿ ನಿರತರನ್ನು ಎತ್ತಿಕೊಂಡು ಹೊರಗೆ ಕರೆದೊಯ್ದ ದೃಶ್ಯ ಅಸಲಿ ಸಂಸತ್ತಿನ ಕಲಾಪವನ್ನೇ ನೆನಪಿಸುವಂತಿತ್ತು.
ಆಧುನಿಕ ಕಾಲಘಟ್ಟದ ಅತಿದೊಡ್ಡ ಸವಾಲಾದ ಕೃತಕ ಬುದ್ಧಿಮತ್ತೆಯಿಂದ ಎದುರಾಗುವ ಉದ್ಯೋಗ ಕಡಿತದ ಬಗ್ಗೆ ಸದನದಲ್ಲಿಗಂಭೀರ ಚರ್ಚೆ ನಡೆಯಿತು. ಎಐ ತಂತ್ರಜ್ಞಾನದಿಂದ ಯುವ ಜನತೆ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂಬ ವಿರೋಧ ಪಕ್ಷದ ಪ್ರಶ್ನೆಗೆ ಉತ್ತರಿಸಿದ ಉದ್ಯೋಗ ಮತ್ತು ಕಾರ್ಮಿಕ ಸಚಿವರು, ತಂತ್ರಜ್ಞಾನ ಸವಾಲಲ್ಲ, ಅದೊಂದು ಅವಕಾಶ. ಇದನ್ನು ಎದುರಿಸಲು ಸರ್ಕಾರವು ಸ್ಕಿಲ್ ಇಂಡಿಯಾ ಮೂಲಕ ಯುವಕರಿಗೆ ನವೀನ ಕೌಶಲಗಳ ತರಬೇತಿ ನೀಡುತ್ತಿದೆ ಎಂದು ಸಮರ್ಥಿಸಿಕೊಂಡರು.
ಹಣಕಾಸು ಸಚಿವರು ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ವರದಿ ಮಂಡಿಸುತ್ತಾ, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಗುರಿಯನ್ನು ಸದನದ ಮುಂದಿಟ್ಟರು. ಸುಭದ್ರ ಹಣಕಾಸು ವ್ಯವಸ್ಥೆ ಮತ್ತು ಡಿಜಿಟಲ್ ಆರ್ಥಿಕತೆಯ ಮೂಲಕ ಭಾರತವು ಜಗತ್ತಿನ ಮುಂಚೂಣಿ ಶಕ್ತಿಯಾಗಲಿದೆ ಎಂದು ಘೋಷಿಸಿದಾಗ, ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಮಾಜಿ ಗೃಹ ಸಚಿವ, ಕಿಶೋರ ವಿದ್ಯಾಭವನ ಸಂಸ್ಥೆಯ ಅಧ್ಯಕ್ಷ ಚೌಡರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಡಾ. ಎಂ.ಸಿ. ಬಾಲಾಜಿ, ಉಪಾಧ್ಯಕ್ಷ ಮುನಿಶಾಮಿರೆಡ್ಡಿ, ಖಜಾಂಚಿ ಗೋಪಾಲರೆಡ್ಡಿ ಹಾಗೂ ಟ್ರಸ್ಟ್ ಸದಸ್ಯರು ಇದ್ದರು.
22ಸಿಎಂವೈವಿ2
ಚಿಂತಾಮಣಿ ನಗರದ ಕಿಶೋರ ವಿದ್ಯಾಭವನದಲ್ಲಿಹಮ್ಮಿಕೊಂಡಿದ್ದ ಮಿನಿ ಸಂಸತ್ತು ಕಾರ್ಯಕ್ರಮದಲ್ಲಿಭಾಗವಹಿಸಿದ್ದ ಪ್ರಮುಖರು.

