ವಿಕ ಸುದ್ದಿಲೋಕ ಪುತ್ತೂರು
ಸ್ವಾಲವಂಬಿ ಬದುಕು ನಿರ್ಮಾಣ ಮತ್ತು ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಕೊಡುಗೆ ಅಮೋಘ. ಯೋಜನೆಯಿಂದಾಗಿ ಇವತ್ತು ನಾಡಿನ ಹಳ್ಳಿ ಹಳ್ಳಿಯಲ್ಲೂಮಹಿಳೆಯರು ಸಶಕ್ತರಾಗಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪುತ್ತೂರು ವಲಯ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕಸಬಾ, ಬಪ್ಪಳಿಗೆ, ಪರ್ಲಡ್ಕ, ಪಡೀಲು, ಸಾಲ್ಮರ, ಬೊಳ್ವಾರು, ಜಿಡೆಕಲ್ಲು, ಸಾಮೆತ್ತಡ್ಕ ಆಶ್ರಯದಲ್ಲಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿಭಾನುವಾರ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಜಿಲ್ಲಾನಿರ್ದೇಶಕ ಬಾಬು ನಾಯ್ಕ ಮಾತನಾಡಿ, 44 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪನೆಯಾಗಿ ಇವತ್ತು ರಾಜ್ಯದ ಹಳ್ಳಿ ಹಳ್ಳಿಗಳಿಗೆ ವಿಸ್ತರಣೆಗೊಂಡಿದೆ. ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವುದೇ ಯೋಜನೆಯ ಮುಖ್ಯ ಉದ್ದೇಶ ಎಂದರು.
ದ.ಕ.ಜಿಲ್ಲಾಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಸರಕಾರಗಳು ಮಾಡದ ಯೋಚನೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 40 ವರ್ಷಗಳ ಹಿಂದೆಯೇ ಮಾಡಿದ್ದರು. ಗ್ರಾಮಾಭಿವೃದ್ಧಿ ಕಲ್ಪನೆ ಒಂದು ದೂರದೃಷ್ಟಿತ್ವದ ಯೋಜನೆಯಾಗಿದೆ. ಸುಂದರ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಯಾವ ಕಾರ್ಯಕ್ರಮ ಬೇಕು ಎನ್ನುವುದನ್ನು ಯೋಜನೆಯ ಮೂಲಕ ಅನುಷ್ಠಾನಿಸಲಾಗಿದೆ ಎಂದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಸುಭಾಷ್ ರೈ, ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ವಲಯ ಅಧ್ಯಕ್ಷ ಸತೀಶ್ ನಾೖಕ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಯೋಜನಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.
ಬಹುಮಾನ ವಿತರಣೆ: ಒಕ್ಕೂಟದ ಸದಸ್ಯರಿಗೆ ಆಯೋಜಿಸಿದ ನಾನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಪ್ಪಳಿಗೆ ಒಕ್ಕೂಟದ ಸದಸ್ಯ ಗಿರೀಶ್ ಸ್ವಾಗತಿಸಿದರು. ಪರ್ಲಡ್ಕ ಒಕ್ಕೂಟದ ಪದಾಧಿಕಾರಿ ರಾಜೇಶ್ ವರದಿ ಮಂಡಿಸಿದರು. ದಾಖಲಾತಿ ಸಮಿತಿಯ ಚೇತನಾ ವಂದಿಸಿದರು. ಸೇವಾಪ್ರತಿನಿಧಿ ನಳಿನಾಕ್ಷಿ ನಿರೂಪಿಸಿದರು.
ಫೊಟೋ: 23ಪಿ-ಯೋಜನೆ
ಶಾಸಕ ಅಶೋಕ್ ರೈ ಕಾರ್ಯಕ್ರಮ ಉದ್ಘಾಟಿಸಿದರು.

