ವಿಕ ಸುದ್ದಿಲೋಕ ಮೂಡಲಗಿ
ಪಟ್ಟಣದ ಲಕ್ಷ್ಮೀ ನಗರದಲ್ಲಿಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ‘ಮನೆ ಮನೆಗೆ ಗ್ಯಾರಂಟಿ - ಮನೆ ಮುಂದೆ ರಂಗೋಲಿ’ ಎಂಬ ವಿನೂತನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ ದಳವಾಯಿ ಅವರು, ‘‘ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮೇ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಇಂದು ಪ್ರತಿ ಮನೆಬಾಗಿಲನ್ನು ತಲುಪಿರುವುದು ಹರ್ಷದಾಯಕವಾಗಿದೆ. ಕೇವಲ ಯೋಜನೆಗಳನ್ನು ಘೋಷಿಸುವುದು ಮಾತ್ರವಲ್ಲದೆ, ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಅನುಷ್ಠಾನ ಸಮಿತಿಗಳನ್ನು ರಚಿಸಿ, ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸೌಲಭ್ಯ ಸಿಗುವಂತೆ ಸರಕಾರ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ, ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿಗಳೇ ಶಕ್ತಿ,’’ ಎಂದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ವಿ.ಪಿ. ನಾಯ್ಕ, ಸೂರ್ಯಕಾಂತ ಮಗದುಮ್ , ಪ್ರಕಾಶ ಅರಳಿ, ರಿಯಾಜ ಮುಧೋಳ, ಲಕ್ಕಪ್ಪ ಕಂಬಳಿ, ಅನಿತಾ ನಾಯಿಂಗ್ಲಜ, ಚಂದ್ರಪ್ಪ ನಾಯಿಂಗ್ಲಜ, ಗುರುನಾಥ ಉಪ್ಪಾರ, ರವಿ ಮೂಡಲಗಿ, ಮಾರುತಿ ಕರಿಶೆಟ್ಟಿ, ವಿರೂಪಾಕ್ಷ ಮುಗಳಖೋಡ, ಸಿದ್ದಪ್ಪ ಖಾನಟ್ಟಿ ಮಹದೇವ ಕೆಳಗಡೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
-23ಎಮಡಿಎಲ್ 1
ಮೂಡಲಗಿಯ ಲಕ್ಷಿತ್ರ್ಮೕ ನಗರದಲ್ಲಿ‘ಮನೆ ಮನೆಗೆ ಗ್ಯಾರಂಟಿ- ಮನೆ ಮುಂದೆ ರಂಗೋಲಿ’ ಕಾರ್ಯಕ್ರಮ ಜರುಗಿತು.

