ಲೀಟರ್ ಗೆ ಒಂದು ರೂ. ಪ್ರೋತ್ಸಾಹ ಧನ
ಚಳ್ಳಕೆರೆ: ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಹರಿ ನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಸಭೆಯಲ್ಲಿಹಾಲು ಉತ್ಪಾದಕರಿಗೆ ಲೀಟರ್ ಗೆ ಒಂದು ರೂ. ಪ್ರೋತ್ಸಾಹ ಧನ ನೀಡುವುದಾಗಿ ತೀರ್ಮಾನಿಸಿದ್ದಾರೆ.
ಸಂಘದ ಕಚೇರಿಯಲ್ಲಿಭಾನುವಾರ ಎಸ್ .ಕಾರ್ತಿಕ್ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿಸಂಘದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ, ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಜ.1ರಿಂದ ಪೂರ್ವಾನ್ವಯವಾಗುವಂತೆ ಸಹಮತದಿಂದ ನಿರ್ಧರಿಸಲಾಯಿತು.
ನರಹರಿ ಹಾಲು ಉತ್ಪಾದಕರ ಸಂಘವು ಜನವರಿ 2026ರ ಅಂತ್ಯದ ವೇಳೆಗೆ ಶೇ.8.6ರಂತೆ 9.51 ಲಕ್ಷ ರೂ. ವ್ಯಾಪಾರ ಲಾಭ ಗಳಿಸಿದೆ ಹಾಗೂ ಶೇ. 4.3ರಂತೆ 4.69 ಲಕ್ಷ ನಿವ್ವಳ ಲಾಭ ಗಳಿಸಿರುವುದಾಗಿ ಸಭೆಯಲ್ಲಿವಿವರಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಕಾರ್ತಿಕ್ ಎಸ್ . ಮಾತನಾಡಿದರು. ಸಭೆಯಲ್ಲಿಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ, ನರಹರಿ ನಗರದ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಪಿ.ಶಿವಣ್ಣ, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಆರ್ . ಸ್ವರೂಪ, ಹಾಲು ಪರೀಕ್ಷಕ ಕುಮಾರಸ್ವಾಮಿ ಇತರರಿದ್ದರು.
---
ಫೋಟೊ:23ಸಿಎಲ್ ಕೆ 2. ಚಳ್ಳಕೆರೆ ತಾಲೂಕಿನ ನರಹರಿ ನಗರದ ಉತ್ಪಾದಕರ ಸಂಘದ ಸಭೆ ಎಸ್ .ಮೂರ್ತಿ ಅಧ್ಯಕ್ಷತೆಯಲ್ಲಿನಡೆಯಿತು.

