ದೇವಸ್ಥಾನ ಜೀರ್ಣೋದ್ಧಾರಕ್ಕೆ ಬದ್ಧ

Contributed bymudholvk@gmail.com|Vijaya Karnataka

Minister R.B. Timmapur visited the Lokeshwara Temple in Lokapur. He offered prayers and received honors from the festival committee. The minister pledged to undertake the renovation of the temple. He stated that the renovation would be done with government and public support. Special prayers were offered for the well-being of the people of the state.

minister in charge rb thimmappa announces commitment for renovation of lokeshwara temple

ದೇವಸ್ಥಾನ ಜೀರ್ಣೋದ್ಧಾರಕ್ಕೆ ಬದ್ಧ

ವಿಕ ಸುದ್ದಿಲೋಕ ಲೋಕಾಪುರ

ಜಿಲ್ಲಾಉಸ್ತುವಾರಿ ಸಚಿವ ಆರ್ .ಬಿ.ತಿಮ್ಮಾಪೂರ ಅವರು ಪಟ್ಟಣದ ಲೋಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು. ಜಾತ್ರಾ ಸಮಿತಿಯ ಪ್ರಮುಖರು ಸಚಿವರನ್ನು ಸನ್ಮಾನಿಸಿದರು.

ಸಚಿವ ಆರ್ .ಬಿ.ತಿಮ್ಮಾಪೂರ ಮಾತನಾಡಿ, ‘‘ಲೋಕೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಾನು ಬದ್ಧನಾಗಿರುವೆ. ಸರಕಾರ ಹಾಗೂ ಭಕ್ತರ ಸಹಾಯ, ಸಹಕಾರ ಪಡೆದು ದೇವಸ್ಥಾನದ ಜೀರ್ಣೋದ್ಧಾರ ಮಾಡೋಣ. ನಾಡಿನ ಜನರ ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸೋಣ’’ ಎಂದರು.

ಕಾಂಗ್ರೆಸ್ ಮುಖಂಡರಾದ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ಆನಂದ ಹಿರೇಮಠ, ಭೀಮನಗೌಡ ಪಾಟೀಲ, ಪವನ ಉದಪುಡಿ, ಗೋಪಾಲ ಲಮಾಣಿ, ಜಾತ್ರಾ ಕಮಿಟಿ ಅಧ್ಯಕ್ಷ ಕಿರಣಕುಮಾರ ದೇಸಾಯಿ, ಪಿಕೆಪಿಎಸ್ ನಿರ್ದೇಶಕ ಚನ್ನಯ್ಯ ಗಣಾಚಾರಿ, ಲೋಕಣ್ಣ ಗಣಾಚಾರಿ ಹಾಗೂ ಲೋಕೇಶ್ವರ ದೇವಸ್ಥಾನದ ಅರ್ಚಕರು ಹಾಗೂ ಪಟ್ಟಣದ ಜಾತ್ರಾ ಸಮಿತಿ ಸದಸ್ಯರಿದ್ದರು.

ಫೋಟೊ 21 ಎಂಡಿಎಲ್ 4

ಲೋಕಾಪುರದಲ್ಲಿಲೋಕೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಆರ್ .ಬಿ.ತಿಮ್ಮಾಪೂರ ಅವರನ್ನು ಸನ್ಮಾನಿಸಲಾಯಿತು.