ನರಗುಂದ

Contributed bysubedarcb@gmail.com|Vijaya Karnataka

The 77th birth anniversary of Dr. Thontada Siddalinga Shri was celebrated at Hiremath. Shri Basavalinga Mahaswamiji stated that Shri Siddalinga Shri remains in the hearts of devotees. He was a proponent of social reform and championed the cause of the common people. Shri Siddalinga Shri's efforts for the Kannada language are remembered.

77th jayanti of dr tontad siddalinga swamiji in naragund inspiration for social service kannada movement and communal harmony

23 ಎನ್ ಆರ್ ಡಿ-5

ಡಾ.ತೋಂಟದ ಸಿದ್ಧಲಿಂಗ ಶ್ರೀಗಳ 77ನೇ ಜಯಂತಿ ಕಾರ್ಯಕ್ರಮ (ಕಿಕ್ಕರ್ )

ಭಕ್ತರ ಮನದಲ್ಲಿನಿಂತ ಸಿದ್ಧಲಿಂಗ ಶ್ರೀಗಳು (ಹೆಡ್ )

ವಿಕ ಸುದ್ದಿಲೋಕ ನರಗುಂದ

ಮಾತೃ ಹೃದಯಿ, ಅಂತಃಕರಣದ ಕರುಣಾಮಯಿಗಳಾಗಿದ್ದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಕ್ತರ ಮನಸ್ಸಿನಲ್ಲಿಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ನವಲಗುಂದ ಗವಿಮಠದ ಶ್ರೀಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿಹಮ್ಮಿಕೊಂಡಿದ್ದ ಕೋಮು ಸೌಹಾರ್ದತೆ ಹರಿಕಾರ ಲಿಂ. ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಶ್ರೀಗಳ 77ನೇ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸಮಾಜ ಸೇವೆಯೇ ಶಿವಪೂಜೆ ಎಂದರಿತಿದ್ದ ಪೂಜ್ಯರು ಧಾರ್ಮಿಕ ಆಚರಣೆ, ಸಾಮಾಜಿಕ ಸುಧಾರಣೆಗಳಲ್ಲಿಜನಸಾಮಾನ್ಯರ ಪರ ಧ್ವನಿಯೆತ್ತಿ ಸರ್ವ ಜನಾಂಗದವರನ್ನೂ ಅಪ್ಪಿ-ಒಪ್ಪಿಕೊಂಡಿದ್ದರು.ಲಿಂ. ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡ ನಾಡು-ನುಡಿಗಾಗಿ ಮಾಡಿದ ಹೋರಾಟ ಕನ್ನಡ ಸಾರಸ್ವತ ಲೋಕದ ಚರಿತ್ರೆಯಲ್ಲಿಅಜರಾಮರವಾದುದು. ಲಿಂಗಾಯತ ಅಧ್ಯಯನ ಸಂಸ್ಥೆ ಮೂಲಕ 500ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದು ಅವರ ಪುಸ್ತಕ ಪ್ರೀತಿಯನ್ನು ತೋರಿಸುತ್ತದೆ.

ವಿಶ್ರಾಂತ ಉಪನ್ಯಾಸಕ ಎಸ್ .ಬಿ.ಭಜಂತ್ರಿ ಮಾತನಾಡಿ, ದುಡಿಯುವ, ಶ್ರಮಿಕರ ಪರವಾದ ಉದಾರತೆ ತೋರಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ಈ ಶತಮಾನದ ಬಸವಣ್ಣನವರಾಗಿದ್ದಾರೆ. ಅರಣ್ಯ, ಪ್ರಾಣಿ, ರೈತ ಹಾಗೂ ಶ್ರಮಿಕರು ಸೇರಿದಂತೆ ಸಮಾಜದ ಪ್ರತಿಯೊಬ್ಬ ಜನಸಾಮಾನ್ಯರಿಗೆ ಅನ್ಯಾಯವಾದಾಗ ಹೋರಾಟದ ಮೂಲಕ ಅವರಿಗೆ ನ್ಯಾಯ ಕೊಡಿಸಲು ಪ್ರಮಾಣಿಕ ಪ್ರಯತ್ನಿಸಿದ ಪೂಜ್ಯರು ಸರ್ವರಿಗೂ ಆದರ್ಶಪ್ರಾಯರು.

ಜಾತಿ ಬೇಧವರಿಯದೆ ಇಡೀ ಮನುಕುಲದ ಒಳತಿಗೆ ಶ್ರಮಿಸಿದ ಮಹನೀಯರ ಜಯಂತಿಯನ್ನುಶ್ರೀಮಠದಲ್ಲಿಆಚರಿಸಿ ಭಾವೈಕ್ಯ ಸಂದೇಶ ಸಾರಿದ್ದರು. ಭಾಷೆ, ನಾಡು ಜನರ ಹಿತಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟವರು. ಕನ್ನಡ ಭಾಷೆ ಉಳಿದರೆ ನಾವು ಉಳಿದೇವು ಎಂಬ ನಿಲುವನ್ನು ಹೊಂದಿದ್ದ ಪೂಜ್ಯರು ತಮ್ಮ ಉಸಿರು ಇರುವವರೆಗೂ ಕನ್ನಡದ ಸಂರಕ್ಷಣೆಗಾಗಿ ಕಂಕಣಬದ್ಧರಾಗಿದ್ದರು ಎಂದರು.

ಶ್ರೀ ಶಾಂತಲಿಂಗ ಮಹಾಸ್ವಾಮಿಗಳು, ಮುಖ್ಯ ಶಿಕ್ಷಕ ವಿ.ಜಿ.ಬೋಗಾರ, ಬಿ.ಎಂ.ಲೆಂಕೆನ್ನವರ, ಎಸ್ .ಎಸ್ . ಪಾಟೀಲ, ಪ್ರೊ.ಆರ್ .ಕೆ.ಐನಾಪೂರ,ಪ್ರೊ.ಆರ್ .ಬಿ.ಚಿನಿವಾಲರ, ಮಹಾಂತೇಶ ಹಿರೇಮಠ, ಎಸ್ .ಬಿ. ಭಜಂತ್ರಿ ಇನ್ನಿತರರು ಇದ್ದರು.

ಫೋಟೋ ಶೀರ್ಷಿಕೆ) 23 ಎನ್ ಆರ್ ಡಿ-5 :

ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದಲ್ಲಿನಡೆದ ಕಾರ್ಯಕ್ರಮದಲ್ಲಿಮುಖ್ಯ ಶಿಕ್ಷಕ ವಿ.ಜಿ.ಭೋಗಾರ ಅವರನ್ನು ಸತ್ಕರಿಸಲಾಯಿತು.