Police intercepted a vehicle transporting 25 cattle without proper permits on the Kushtagi-Hospet National Highway-50. The incident occurred near the Hitnal Toll Plaza. Upon seeing the police, the lorry driver and two others abandoned the vehicle and fled. A case has been registered at the Munirabad police station. The action was taken following a complaint.
25 ಜಾನುವಾರು ರಕ್ಷಣೆ
ಕೊಪ್ಪಳ: ತಾಲೂಕಿನ ಕುಷ್ಟಗಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-50ರ ಹಿಟ್ನಾಳ ಟೋಲ್ ಪ್ಲಾಜಾ ಬಳಿ ಪರವಾನಗಿ ಇಲ್ಲದೇ 25 ಜಾನುವಾರು ತುಂಬಿಕೊಂಡು ಹೊರಟಿದ್ದ ವಾಹನವನ್ನು ಪೊಲೀಸರು ತಡೆದು ವಾಹನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕಾಮನೂರು ಗ್ರಾಮದ ಗವಿಸಿದ್ದಪ್ಪ ಸಂಗಾಪುರ ನೀಡಿದ ದೂರು ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಪೊಲೀಸರನ್ನು ಕಂಡ ಲಾರಿ ಚಾಲಕ ಹಾಗೂ ಅದರಲ್ಲಿದ್ದ ಇತರೆ ಇಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.