ಯಂಟಗಾನಹಳ್ಳಿ ಶಾಲೆ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ

Contributed byvijaykumarhs9740@gmail.com|Vijaya Karnataka

Yantaganahalli village school is proposed for upgrade to a KPS school. This upgrade is expected to be announced next year. The government provides many facilities to students in government schools. Parents are encouraged to utilize these benefits. The upgrade will greatly benefit the students of Yantaganahalli. The school celebrated its annual day with cultural programs. Achievers were felicitated.

yantaganhalli government school to be upgraded to kps likely announcement next year

ಡಿಡಿಪಿಐ ಬೈಲಾಂಜಿನಪ್ಪ

ವಿಕ ಸುದ್ದಿಲೋಕ ನೆಲಮಂಗಲ

ಯಂಟಗನಹಳ್ಳಿ ಗ್ರಾಮದ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ನೀಡಲಾಗಿದ್ದು ಮುಂದಿನ ವರ್ಷ ಘೋಷಣೆಯಾಗುವ ಸಾಧ್ಯತೆಗಳಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಡಿಡಿಪಿಐ ಬೈಲಾಂಜಿನಪ್ಪ ತಿಳಿಸಿದರು.

ತಾಲೂಕಿನ ಯಂಟಗನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದರು. ಸರಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಊಟ, ನೀರು, ಶೂ ಸೇರಿದಂತೆ ಎಲ್ಲಾಸೌಲಭ್ಯಗಳನ್ನು ಉಚಿತವಾಗಿ ನೀಡುವ ಜತೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಿದೆ. ಪೋಷಕರು ಹೆಚ್ಚಾಗಿ ಸರಕಾರಿ ಶಾಲೆಗಳ ಅನುಕೂಲಗಳನ್ನು ಪಡೆದುಕೊಳ್ಳಬೇಕು. ಯಂಟಗಾನಹಳ್ಳಿ ಶಾಲೆಯಲ್ಲಿಬಹಳಷ್ಟು ದಾಖಲಾತಿಗಳಿದ್ದು ಕೆಪಿಎಸ್ ಶಾಲೆ ಮಾಡುವುದರಿಂದ ಬಹಳಷ್ಟು ಅನುಕೂಲವಾಗಲಿದೆ. ಪ್ರಸ್ತಾವನೆಯಲ್ಲಿದ್ದು ಮುಂದಿನ ವರ್ಷದ ಪಟ್ಟಿಯಲ್ಲಿಘೋಷಣೆಯಾಗುವ ಸಾಧ್ಯತೆಗಳಿದೆ ಎಂದರು.

ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಸಂಪತ್ ಬಾಬು ಮಾತನಾಡಿ, ಯಂಟಗನಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಗಂಗಹನುಮಯ್ಯನವರು ಶಾಲೆಗಳ ಸ್ಥಾಪನೆಗೆ ಶ್ರಮಿಸಿದ್ದಾರೆ. ಅವರ ಬಯಕೆಯಂತೆ ಕೆಪಿಎಸ್ ಶಾಲೆಯಾಗಿ ಮಾಡಬೇಕು. ಯಾವುದೇ ಖಾಸಗಿ ಶಾಲೆಗಳಿಂತಲೂ ಕಡಿಮೆ ಇಲ್ಲದಂತೆ ವಾರ್ಷಿಕೋತ್ಸವ ಮಾಡಿರುವುದು ಸಂತೋಷವಾಗಿದೆ ಎಂದರು.

ಸಾಂಸ್ಕೃತಿಕ ಸಮಾರಂಭ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೋಲಾಟ, ನೃತ್ಯ, ನಾಟಕ, ಡೊಳ್ಳು ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಕ್ಕಳ ಅಭಿನಯ ಜನಮನ್ನಣೆಗೆ ಕಾರಣವಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯವತಿಯಿಂದ ಅಭಿನಂದನೆ ಸಲ್ಲಿಸಲಾಯಿತು ಎಂದು ಮುಖ್ಯಶಿಕ್ಷಕ ಪರಮೇಶ್ವರಯ್ಯ ತಿಳಿಸಿದರು.

ಈ ಸಂದರ್ಭದಲ್ಲಿಜಿಲ್ಲಾಶಿಕ್ಷಣಾಧಿಕಾರಿ ಹನುಮನಾಯ್ ್ಕ, ಎಬಿಟಿ ಗ್ರೂಪ್ ಮಾಲೀಕ ವಿಜಯಕುಮಾರ್ , ಕುಮುದ್ವತಿ ಸಂಸ್ಥೆ ಮಾಲೀಕ ಚಿಕ್ಕಹನುಮೇಗೌಡ, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಹನುಮೇಗೌಡ, ವಕೀಲ ರವಿಕುಮಾರ್ , ಚಲನಚಿತ್ರ ನಟ ರವಿಗೌಡ, ಲಕ್ಷ್ಮಣ್ , ಅರ್ಜುನ್ , ಎಸ್ ಡಿಎಂಸಿ ಅಧ್ಯಕ್ಷ ಹನುಮಂತರಾಜು, ಮುಖಂಡರಾದ ಪ್ರಕಾಶ್ , ಹನುಮಯ್ಯ, ಪುಟ್ಟಶಾಮಣ್ಣ, ಮಂಜುನಾಥ್ , ಶಿವಮೂರ್ತಿ, ಗಂಗರಂಗಯ್ಯ, ಬೈರಣ್ಣ, ಚಿಕ್ಕಣ್ಣ ಸೇರಿದಂತೆ ಶಿಕ್ಷಕರು ಸೇರಿದಂತೆ ಮತ್ತಿತರರಿದ್ದರು.

24ನೆಲಪಿಹೆಚ್ 2: ನೆಲಮಂಗಲ ತಾಲೂಕಿನ ಯಂಟಗನಹಳ್ಳಿ ಗ್ರಾಮದಲ್ಲಿಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಡಿಡಿಪಿಐ ಉದ್ಘಾಟಿಸಿದರು.