ವೀರ ಯೋಧನಿಗೆ 1 ಕೋಟಿ ರೂ.ನೆರವು
ವಿಕ ಸುದ್ದಿಲೋಕ ಗದಗ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಹಾಗೂ ಭಾರತೀಯ ಸೇನೆಯಲ್ಲಿಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಗಿಡ್ಡಮಲ್ಲಣ್ಣನರ ಅವರಿಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ.
ಯೋಧ ಮಂಜುನಾಥ, ತಮ್ಮ ಸೇವಾ ಅವಧಿಯಲ್ಲಿವಿದ್ಯುತ್ ಸ್ಪರ್ಶದಿಂದ ವೀರ ಮರಣ ಹೊಂದಿದ್ದಾರೆ. ಇವರು ಪಂಜಾಬ್ ಬ್ಯಾಂಕ್ ನಲ್ಲಿಉಳಿತಾಯ ಖಾತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿರಕ್ಷಕ್ ಪ್ಲಸ್ ಯೋಜನೆಯಡಿ 1 ಕೋಟಿ ರೂ.ಗಳನ್ನು ಅವರ ಕುಟುಂಬಕ್ಕೆ ಹುಬ್ಬಳ್ಳಿ ವೃತ್ತಾಧಿಕಾರಿ ಸೂರ್ಯಮಣಿ ಸಾಹು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ದೇಶದ ಒಬ್ಬ ಯೋಧ ವೀರಮರಣ ಹೊಂದಿದ್ದು ಅತ್ಯಂತ ದುಃಖದ ಸಂಗತಿ. ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ನಮ್ಮ ಬ್ಯಾಂಕ್ ಅವರ ಕುಟುಂಬದ ಸಹಾಯಕ್ಕೆ ಧಾವಿಸುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ತನ್ನದೇ ಆದ ಇತಿಹಾಸವಿದ್ದು, ಸದಾ ಸಮಾಜಮುಖಿ ಕಾರ್ಯದಲ್ಲಿತೋಡಗಿದೆ ಎಂದರು.
ಪಂಜಾಬ್ ಬ್ಯಾಂಕ್ ನಿರಂತರ ಗ್ರಾಹಕ ಸೇವೆಗಳ ಮೂಲಕ ಮನೆ ಮಾತಾಗಿದೆ. ಪಂಜಾಬ್ ಬ್ಯಾಂಕ್ ನಲ್ಲಿಸಾಕಷ್ಟು ಸೌಲಭ್ಯಗಳಿವೆ. ಸ್ಯಾಲರಿ ಯೋಜನೆ, ವೈದ್ಯರ ಯೋಜನೆ, ಕಾರ್ಮಿಕರ ಯೋಜನೆ, ರೈತರ ಯೋಜನೆ, ಮಹಿಳಾ ಯೋಜನೆ ಸೇರಿದಂತೆ ಹಲವು ಯೋಜನೆಗಳಿವೆ ಎಂದರು.
ಮುಂದಿನ ದಿನಮಾನಗಳಲ್ಲಿರಾಜ್ಯಾಧ್ಯಂತ 40 ರಿಂದ 45 ಶಾಖೆ ತೆರೆಯುವ ಉದ್ದೇಶ ಹೊಂದಲಾಗಿದೆ. ಪಂಜಾಬ್ ಬ್ಯಾಂಕ್ ನಲ್ಲಿಖಾತೆ ಹೊಂದಿದವರಿಗೆ ಹಲವು ಸೌಲಭ್ಯಗಳಿವೆ ಎಂದರು.
ಈ ವೇಳೆ ವೀರ ಮರಣ ಹೊಂದಿದ ಯೋಧನ ತಂದೆ, ತಾಯಿ, ಪತ್ನಿ, ಮಗು ಸೇರಿದಂತೆ ಗುರುರಾಜ್ ಬಳಗಾನೂರ, ಸಿನಿಯರ್ ಮ್ಯಾನೇಜರ್ ಕೆ.ಶಿವಕುಮಾರ , ಮ್ಯಾನೆಜರ್ ಡಿ.ಎಚ್ . ಅಸ್ಲಂಭಾಷಾ,ಆರ್ .ಜೆ. ಮೀಡಿಯಾದ ಮುಖ್ಯಸ್ಥ ಡಾ. ರವೀಂದ್ರ ಜಲರಡ್ಡಿ, ದಿಲಾವಾರ್ , ದೇವರಾಜ್ , ರಮೇಶ ಅನಂತಪುರ, ಅಕ್ಷತಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
24ಸಲೀಮ2-
ಗದಗ ನಗರದ ಪಂಜಾಬ್ ನ್ಯಾಶನಲ್ ಬ್ಯಾಂಕಿನಲ್ಲಿಯೋಧನ ಕುಟುಂಬದವರಿಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಲಾಯಿತು.

