26ಕ್ಕೆ ಕಬ್ಬು ನುರಿಸುವ ಕಾರ್ಯ ಸ್ಥಗಿತ

Contributed byutkolekar@gmail.com|Vijaya Karnataka

The Bhima Shankar Cooperative Sugar Factory in Maragur village will conclude its sugarcane crushing for the 2025-26 season on February 26. Sugarcane growers are urged to supply all their harvested cane to the factory by this date as per their agreement. After February 26, the contract will be cancelled.

from february 26 sugarcane crushing will stop at bhimashankar sugar factory farmers must complete supply immediately

26ಕ್ಕೆ ಕಬ್ಬು ನುರಿಸುವ ಕಾರ್ಯ ಸ್ಥಗಿತ

ಇಂಡಿ: ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಫೆ.26 ರಂದು ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಕಬ್ಬು ಬೆಳೆಗಾರರು ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೆ ಒಳಪಟ್ಟ ಆದೇಶದಂತೆ ತಮ್ಮ ಎಲ್ಲಕಬ್ಬನ್ನು ಫೆ.26 ರವರೆಗೆ ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು. ಫೆ.26 ರ ನಂತರ ಕರಾರು ಪತ್ರ ರದ್ದುಗೊಳ್ಳುತ್ತದೆ. ನಂತರ ಕಟಾವುಗೊಳ್ಳದೆ ಉಳಿಯುವ ಕಬ್ಬಿಗೆ ಕಾರ್ಖಾನೆಯು ಜವಾಬ್ದಾರಿ ಆಗಿರುವುದಿಲ್ಲಎಂದು ತಿಳಿಸಿದ್ದಾರೆ.