ದೇವದುರ್ಗ- ಸ್ವಚ್ಛತೆಯಿಂದ ಉತ್ತಮ ಆರೋಗ್ಯ

Contributed bysureshgowdajhl@gmail.com|Vijaya Karnataka

An awareness campaign and pesticide spraying drive was conducted in Somanamaradi village, Devadurg taluk. Health officials emphasized that cleanliness at home and in the environment is crucial for preventing infectious diseases. The initiative aims to control mosquito breeding and improve public health in the malaria-prone village. Residents are urged to follow medical advice and seek prompt treatment for any ailments.

malaria prevention drive launched in deodurgas somanamaradi village through cleanliness and insecticide spraying

ಸ್ವಚ್ಛತೆಯಿಂದ ಉತ್ತಮ ಆರೋಗ್ಯ

ವಿಕ ಸುದ್ದಿಲೋಕ ದೇವದುರ್ಗ

‘‘ಜನರು ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆ, ಪರಿಸರ, ಊರು ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ,’’ ಎಂದು ಗಾಣಧಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಷ್ಮಾ ಹೇಳಿದರು.

ತಾಲೂಕಿನ ಸೋಮನಮರಡಿ ಗ್ರಾಮದಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಕೀಟನಾಶಕ ಸಿಂಪಡಣೆ ಹಾಗೂ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘‘ಸೋಮನಮರಡಿ ಮಲೇರಿಯಾ ಹೈರಿಸ್ಕ್ ಗ್ರಾಮವಾಗಿದ್ದರಿಂದ ರೋಗ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತವಾಗಿ ಪ್ರತಿ ಮನೆ, ಓಣಿ ಸೇರಿ ಗ್ರಾಮದ ಎಲ್ಲಕಡೆ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಸುತ್ತಲೂ ನೀರಾವರಿ ಪ್ರದೇಶವಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಿದೆ. ಸ್ವಚ್ಛತೆ ಕಾಪಾಡಿಕೊಂಡರೆ ಸೊಳ್ಳೆಗಳನ್ನು ನಿಯಂತ್ರಿಸಬಹುದು. ವೈದ್ಯರು ನೀಡುವ ಸೂಚನೆ ತಪ್ಪದೇ ಪಾಲಿಸಬೇಕು. ಸಣ್ಣಪುಟ್ಟ ಕಾಯಿಲೆ ಕಂಡುಬಂದರೆ ನಿರ್ಲಕ್ಷತ್ರ್ಯ ಮಾಡದೆ ತಕ್ಷಣ ಚಿಕಿತ್ಸೆ ಪಡೆಯಬೇಕು,’’ ಎಂದು ಸಲಹೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಆರೋಗ್ಯ ಇಲಾಖೆ ನೌಕರರಾದ ದಿಲೀಪ್ ಕುಮಾರ್ , ಓಂಕಾರ್ , ಐಶ್ವರ್ಯ, ಆಶಾ ಕಾರ್ಯಕರ್ತೆಯರಾದ ದೇವಿಕಾ, ಪವಿತ್ರಾ, ಗದ್ದೆಮ್ಮ, ಬಸಮ್ಮ ಇತರರಿದ್ದರು.

---

23ಡಿವಿಡಿ1

ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮದಲ್ಲಿಕೀಟನಾಶಕ ಸಿಂಪಡಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಜರುಗಿತು.