ವಿಕ ಫಲಶೃತಿ ವರದಿ

Contributed bymanjunathrd59@gmail.com|Vijaya Karnataka

A report by Vijay Karnataka highlighted garbage accumulation on Haveri's Kaginele road. This drew the attention of the Chief Minister's office. A directive was issued to Haveri's planning director. Consequently, city council staff promptly cleared the waste. Public spaces are now clean. This action followed a previous lack of response from officials. The newspaper's report prompted the necessary cleanup.

response to vijaya karnataka report cm office orders action on kaginele road garbage issue haveri city corporation launches cleanliness drive

ಕಾಗಿನೆಲೆ ರಸ್ತೆ ಬದಿ ಕಸಕ್ಕೆ ಮುಕ್ತಿ

ಸಿಎಂ ಕಚೇರಿಯಿಂದ ಹಾವೇರಿ ನಗರಸಭೆ ಸಿಬ್ಬಂದಿಗೆ ಕ್ರಮಕ್ಕೆ ಸೂಚನೆ

ವಿಕ ಸುದ್ದಿಲೋಕ ಹಾವೇರಿ

ಇಲ್ಲಿಯ ಕಾಗಿನೆಲೆ ರಸ್ತೆಯ ಇಕ್ಕೆಲಗಳಲ್ಲಿಕಸದ ರಾಶಿ ಕುರಿತು ವಿಜಯ ಕರ್ನಾಟಕದಲ್ಲಿಪ್ರಕಟವಾಗಿದ್ದ ಕಾಲಂ ವರದಿಯು ಸರಕಾರದ ಮಟ್ಟದಲ್ಲಿಗಮನ ಸೆಳೆದಿದೆ. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಹಾವೇರಿಯ ಯೋಜನಾ ನಿರ್ದೇಶಕರಿಗೆ ಕ್ರಮಕ್ಕೆ ಸೂಚನೆ ನೀಡಿದ ಪರಿಣಾಮ ನಗರಸಭೆ ಸಿಬ್ಬಂದಿ ಕಸ ತೆಗೆದು ಸ್ವಚ್ಛಗೊಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನಗರದ ಕಾಗಿನೆಲೆ ರಸ್ತೆಯ ಇಕ್ಕೆಲಗಳಲ್ಲಿಎಲ್ಲೆಂದರಲ್ಲಿಕೊಳೆತ ಹಣ್ಣು, ಹೂವು, ಪ್ಲಾಸ್ಟಿಕ್ ಕಸದ ತ್ಯಾಜ್ಯಗಳನ್ನು ಎಸೆಯಲಾಗುತ್ತಿದ್ದು, ದುರ್ವಾಸನೆ ಬೀರುತ್ತಿರುವ ಬಗ್ಗೆ ವಿಜಯ ಕರ್ನಾಟಕ ಕೇಳ್ರಪ್ಪೋ ನಮ್ ಏರಿಯಾ ಪ್ರಾಬ್ಲಂ ಎಂಬ ಅಂಕಣದಲ್ಲಿಫೆ.13ರಂದು ಕಾಗಿನೆಲೆ ರಸ್ತೆ ಇಕ್ಕೆಲಗಳಲ್ಲಿಕಸದ ರಾಶಿ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಈ ವರದಿ ಸರಕಾರ ಗಮನ ಸೆಳೆದಿದ್ದು, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಈ ಸಮಸ್ಯೆಯನ್ನು ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾವೇರಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಸ್ವಚ್ಛತೆ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ವಿಕ ಕಳಕಳಿಗೆ ಮೆಚ್ಚುಗೆ

ನಗರದ ಕಾಗಿನೆಲೆ ರಸ್ತೆಯಲ್ಲಿಎಲ್ಲೆಂದರಲ್ಲಿಕಸ ತ್ಯಾಜ್ಯವನ್ನು ಬೀಸಾಡುವುದರಿಂದ ಸ್ವಚ್ಛತೆ ಮರೀಚಿಕೆಯಾಗಿತ್ತು. ಹಾವೇರಿ ನಗರದಿಂದ ಕಾಗಿನೆಲೆ ರಸ್ತೆ ಮಾರ್ಗವಾಗಿ ದಿನನಿತ್ಯ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲಸಮಸ್ಯೆಗಳ ಬಗ್ಗೆ ವಿಜಯ ಕರ್ನಾಟಕ ವಿಸ್ತೃತ ವರದಿ ಪ್ರಕಟಿಸಿದ್ದರ ಪರಿಣಾಮ ನಗರಸಭೆ ಸಿಬ್ಬಂದಿ ವರ್ಗ ಸ್ಥಳಕ್ಕಾಗಮಿಸಿ ಸ್ವಚ್ಛತೆ ಕೈಗೊಂಡಿದ್ದಾರೆ. ವಿಜಯ ಕರ್ನಾಟಕದ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೋಟ್ :

ಹಾವೇರಿ ನಗರದ ಕಾಗಿನೆಲೆ ರಸ್ತೆಯ ಇಕ್ಕೆಲಗಳಲ್ಲಿಸಂಗ್ರಹಗೊಂಡಿದ್ದ ಕಸ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ವಿಕ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಮಾಡಿಸಿದ್ದಾರೆ. ವಿಜಯ ಕರ್ನಾಟಕಕ್ಕೆ ಕೃತಜ್ಞತೆ ತಿಳಿಸುವೆ.

- ಸಿದ್ದು, ಸ್ಥಳೀಯ ನಿವಾಸಿ.

ಪೋಟೋ 24 ಮಂಜು 4

ಹಾವೇರಿಯ ಕಾಗಿನೆಲೆ ರಸ್ತೆಯಲ್ಲಿಸಂಗ್ರಹಗೊಂಡಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಿರುವುದು.

ಪೋಟೋ 24 ಮಂಜು 4ಎ

ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಹಾವೇರಿ ಜಿಲ್ಲಾಯೋಜನಾ ನಿರ್ದೇಶಕರಿಗೆ ಬರೆದ ಪತ್ರ.