ತಾಯ್ನುಡಿಯಿಂದ ಆತ್ಮಗೌರವ

Contributed byaatish.kannale@timesgroup.com|Vijaya Karnataka

Writer Dr. Rajendra Burudikatti stated that mother tongue fosters self-respect and enables effective expression of thoughts and dreams. Speaking at an event in Shivamogga, he emphasized that learning English does not require abandoning one's mother tongue. NES Secretary S.N. Nagaraja also spoke, highlighting the challenges of learning multiple languages. The event celebrated Mother Tongue Day.

self respect through mother tongue mother language day celebration at shivamogga nes institute highlighting the importance of kannada

ತಾಯ್ನುಡಿಯಿಂದ ಆತ್ಮಗೌರವ

ವಿಕ ಸುದ್ದಿಲೋಕ ಶಿವಮೊಗ್ಗ

ನಮ್ಮ ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಲು, ಆಲೋಚಿಸಲು, ಕನಸು ಕಾಣಲು ಸಾಧ್ಯವಾಗುವುದು ನಮ್ಮ ತಾಯ್ನುಡಿಯಲ್ಲಿಮಾತ್ರ ಎಂದು ಸಾಹಿತಿ ಡಾ.ರಾಜೇಂದ್ರ ಬುರುಡಿಕಟ್ಟಿ ಹೇಳಿದರು.

ಕನ್ನಡ ಸಾಹಿತ್ಯ ವೇದಿಕೆಯು ನಗರದ ಎನ್ ಇಎಸ್ ಇನ್ಸಿ$್ಟಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿಮಾತೃಭಾಷಾ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ನಮ್ಮ ತಾಯ್ನುಡಿ ನಮಗೊಂದು ಘನತೆ, ಆತ್ಮಗೌರವ ತಂದುಕೊಡುತ್ತದೆ. ಇದರಿಂದ ವೈಯಕ್ತಿಕ ಮತ್ತು ಸಾಂಸ್ಕೃತಿಕ ಗುರುತು ಸಿಗುತ್ತದೆ. ಇಂಗ್ಲಿಷ್ ಕಲಿಯಲು ನಮ್ಮ ತಾಯ್ನುಡಿಯನ್ನು ಬಿಡಬೇಕಾಗಿಲ್ಲ. ಏಕೆಂದರೆ ತಾಯ್ನುಡಿಯನ್ನು ಚೆನ್ನಾಗಿ ಕಲಿತವರು ಮಾತ್ರ ಇಂಗ್ಲಿಷ್ ಭಾಷೆಯನ್ನೂ ಸುಲಭವಾಗಿ ಕಲಿಯಲು ಸಾಧ್ಯ ಎಂದರು.

ಎನ್ ಇಎಸ್ ಕಾರ್ಯದರ್ಶಿ ಎಸ್ .ಎನ್ . ನಾಗರಾಜ ಮಾತನಾಡಿ, ನಾವಾಡುವ ನುಡಿ ಮತ್ತು ಕಲಿಯುವ ನುಡಿ ಬೇರೆಯಾಗಿರುವುದರಿಂದ ಎರಡೂ ನುಡಿಗಳನ್ನು ಸರಿಯಾಗಿ ಕಲಿಯಲು ನಮಗೆ ಸಾಧ್ಯವಾಗುತ್ತಿಲ್ಲ. ಇನ್ನೊಂದು ಭಾಷೆಯನ್ನು ಕಲಿಯುವ ಹಠದಲ್ಲಿಶೈಕ್ಷಣಿಕ ಹಂತದಲ್ಲಿಕಂಠಪಾಠದ ಅಭ್ಯಾಸವಿದೆ. ಆದರೆ ಇದರಿಂದ ಪ್ರಯೋಜನವಿಲ್ಲ. ನಾವು ಕಂಠಸ್ಥ ಭಾಷೆಯಲ್ಲಿಕಲಿತರೆ ಮಾತ್ರ ಅದು ನಮ್ಮ ಪ್ರಜ್ಞೆಯ ಭಾಗವಾಗುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ಬಿ.ಎಸ್ . ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ವೇದಿಕೆ ಸಂಚಾಲಕ ಡಾ.ಸರ್ಜಾಶಂಕರ ಹರಳಿಮಠ ಮಾತನಾಡಿದರು. ವೇದಿಕೆ ಸಹ ಸಂಚಾಲಕಿ ಆರ್ .ಸುಜಾತಾ ಇತರರಿದ್ದರು. ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿ, ಕೆ.ಕೆ. ಸ್ನೇಹ ಸ್ವಾಗತಿಸಿ, ದೀಕ್ಷಾ ವಂದಿಸಿದರು.

ಫೋಟೊ: 23ಎಸ್ ಎಂಜಿ54

ಶಿವಮೊಗ್ಗದ ಎನ್ ಇಎಸ್ ಇನ್ಸಿ$್ಟಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.