ಶ್ರೀಕಾಂತ ಹೊಸಕೇರಾ ಕಳವಳ
ವಿಜಯನಗರ ಸಾಮ್ರಾಜ್ಯದ ವಿಷಯ ಪಠ್ಯದಿಂದ ದೂರ
ವಿಕ ಸುದ್ದಿಲೋಕ ಬಸವನಬಾಗೇವಾಡಿ
‘‘ಭಾರತದ ವೈಶಿಷ್ಟತ್ರ್ಯ ಸಾರುವ ವಿಜಯನಗರ ಸಾಮ್ರಾಜ್ಯ ಸೇರಿ ಇತರೆ ಇಂತಹ ಪ್ರಮುಖ ಸಾಮ್ರಾಜ್ಯಗಳ ಬಗ್ಗೆ ಓದಲು ನಮ್ಮ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿಮಾಹಿತಿ ಇಲ್ಲದಂತೆ ಮಾಡಲಾಗಿದೆ,’’ಎಂದು ಹಿಂದೂ ಜಾಗರಣಾ ವೇದಿಕೆಯ ಉತ್ತರ ಪ್ರಾಂತ ಸಂಯೋಜಕ ಶ್ರೀಕಾಂತ ಹೊಸಕೇರಾ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿಹಿಂದೂ ಸಮ್ಮೇಳನ ಸಂಚಲನಾ ಸಮಿತಿ ಹಮ್ಮಿಕೊಂಡ ಬೃಹತ್ ಶೋಭಾಯಾತ್ರೆ, ಸಮ್ಮೇಳನದಲ್ಲಿಅವರು ಮಾತನಾಡಿದರು.
‘‘ದೇಶದಲ್ಲಿಆರ್ ಎಸ್ ಎಸ್ ಸ್ವಾರ್ಥ ಸಂಘವಾಗಿರದೇ ಜನಹಿತಕ್ಕಾಗಿ ಇದೆ. ಬಾಂಗ್ಲಾಅಕ್ರಮದಾರರಿಗೆ ವಾಸ್ತವ್ಯ ಕಲ್ಪಿಸಿದ್ದು ಆಘಾತಕಾರಿ. ಭಾರತದ ಮೇಲೆ ಆಗಾಗ ಶತ್ರು ರಾಷ್ಟ್ರಗಳು ದಾಳಿ ಮಾಡುತ್ತಲೇ ಇವೆ,’’ಎಂದು ಕಳವಳ ವ್ಯಕ್ತಪಡಿಸಿದರು.
ಸಾನ್ನಿಧ್ಯವಹಿಸಿ ಮಾತನಾಡಿದ ಮನಗೂಳಿಯ ಸಂಗನಬಸವ ಶಿವಾಚಾರ್ಯರು, ‘‘ಭಾರತದಲ್ಲಿಎಲ್ಲಧರ್ಮಿಯರೂ ಐಷಾರಾಮಿಯಾಗಿದ್ದಾರೆ. ಆದರೆ, ನೆರೆ ರಾಷ್ಟ್ರಗಳಲ್ಲಿಹಿಂದೂಗಳು ಐಷಾರಾಮಿಯಾಗಿಲ್ಲ. ಹಿಂದೂಗಳನ್ನು ದೇಶದಲ್ಲಿಕಡಿಮೆ ಮಾಡಬೇಕು ಎಂಬ ಭಯಾನಕತೆಯ ನಡೆಗಳ ಬಗ್ಗೆ ಸಮಸ್ತ ಭಾರತೀಯರು ಜಾಗೃತರಾಗಿರಬೇಕು. ಬಾಗಲಕೋಟೆಯಲ್ಲಿಶಿವಾಜಿ ಮೆರವಣಿಗೆಯಲ್ಲಿಕಲ್ಲುತೂರಿದ್ದರೂ ಹಿಂದೂಗಳು ಸಹನೆ ತೆಗೆದುಕೊಂಡಿದ್ದಾರೆ. ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ನಾನು ಒಬ್ಬ ಹಿಂದೂ. ಇಂತಹ ಕಾರ್ಯ ಮಾಡಲು ಮುಂದಾದರೆ ನನ್ನನ್ನೂ ಟೀಕಿಸುವ ನಮ್ಮವರಿಂದಲೇ ಹೇಳಿಸುವ ಕೆಲಸ ನಡೆದಿದೆ. ಲವ್ ಜಿಹಾದ್ , ಗೋಹತ್ಯೆ ನಿಲ್ಲಬೇಕು,’’ಎಂದರು.
ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀಕಾಂತ ಮಹಾರಾಜರು, ನರಹರಿ ಆಚಾರ್ಯ ಮಾತನಾಡಿದರು. ಅರಟಾಳ ಶರಣರು, ಕಾಂತು ಪಟ್ಟಣಶೆಟ್ಟಿ, ಮಹಾಂತೇಶ ಹಡಪದ, ಶ್ರೀಶೈಲ ಶಿರಗುಪ್ಪಿ, ಸಿದ್ದನಗೌಡ ಪಾಟೀಲ, ರುದ್ರಮುನಿ ಸಾರಂಗಮಠಇದ್ದರು.
ಭವ್ಯ ಶೋಭಾಯತ್ರೆ:
ಪಟ್ಟಣದ ನಾನಾ ಪ್ರಮುಖ ರಸ್ತೆಗಳಲ್ಲಿಭವ್ಯವಾದ ಶೋಭಾಯಾತ್ರೆ ನಡೆಯಿತು. ಭಾರತಮಾತೆ, ಬಸವೇಶ್ವರರು, ಕಿತ್ತೂರ ಚನ್ನಮ್ಮ, ಡಾ.ಅಂಬೇಡ್ಕರ್ , ಅಕ್ಕಮಹಾದೇವಿ ಸೇರಿ ಇತರೇ ಮಹಾಮಹಿಮರ ಭಾವಚಿತ್ರ ಮೆರವಣಿಗೆ ವಾದ್ಯಗಳೊಂದಿಗೆ ನಡೆಯಿತು. ಗೋಮಾತೆಗೆ ಪೂಜೆ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿಮಾಜಿ ಶಾಸಕ ಎಸ್ .ಕೆ.ಬೆಳ್ಳುಬ್ಬಿ, ಅಶೋಕ ಹಾರಿವಾಳ, ಕೃಷ್ಣ ಬಡಿಗೇರ, ಎಸ್ .ಎ.ದೆಗಿನಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಗುರು ಕುಂಟೋಜಿ ಸೇರಿ ನೂರಾರು ಜನರಿದ್ದರು.
ಪೋಟೊ ಮೆರವಣಿಗೆ ಬೇಡ

