‘ಅಗ್ರ 10ರೊಳಗೆ ಬರಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ’
ಜಿಲ್ಲಾಧಿಕಾರಿ ಕವಿತಾ ಎಸ್ . ಮನ್ನಿಕೇರಿ ಸೂಚನೆ |
ವಿಕ ಸುದ್ದಿಲೋಕ ವಿಜಯನಗರ (ಹೊಸಪೇಟೆ)
‘‘ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಜಿಲ್ಲೆಯು ರಾಜ್ಯಮಟ್ಟದ ಅಗ್ರ 10 ಸ್ಥಾನಗಳ ಪಟ್ಟಿಯಲ್ಲಿಸ್ಥಾನ ಪಡೆಯುವಂತಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅವಿರತವಾಗಿ ಶ್ರಮಿಸಬೇಕು,’’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ . ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಒಳಾಂಗಣ ಕ್ರೀಡಾಂಗಣದಲ್ಲಿಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿಆಯೋಜಿಸಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು.
‘‘ಪೂರ್ವಭಾವಿ ಪರೀಕ್ಷೆಗಳಲ್ಲಿಅತೀ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು ಫಲಿತಾಂಶ ಸುಧಾರಿಸಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿಕೆಲ ಶಾಲೆಗಳ ಫಲಿತಾಂಶ ತೀರ ಕಳಪೆಯಾಗಿದೆ. ಫಲಿತಾಂಶ ವೃದ್ಧಿಗೆ ಆಗಿರುವ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಪೋಷಕರಿಗೂ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು. ಶಾಲೆಯಿಂದ ಅಥವಾ ಪರೀಕ್ಷೆಯಿಂದ ಯಾವೊಬ್ಬ ವಿದ್ಯಾರ್ಥಿಯೂ ಹೊರಗುಳಿ ಯದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ನಿರ್ದಿಷ್ಟವಾಗಿ ಯಾವ ವಿಷಯದಲ್ಲಿಹಿಂದುಳಿದಿದ್ದಾರೆ ಎಂಬುದನ್ನು ಅರಿತು ವಿಶೇಷ ತರಗತಿ ನಡೆಸುವ ಮೂಲಕ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಬೇಕು,’’ ಎಂದರು.
ಜಿಪಂ, ಸಿಇಒ ಅಕ್ರಂ ಪಾಷಾ ಮಾತನಾಡಿ, ‘‘ಕಳೆದ ಬಾರಿಗಿಂತಲೂ ಉತ್ತಮ ಫಲಿತಾಂಶ ನೀಡಲು ಅಗತ್ಯ ಕ್ರಮವಹಿಸಬೇಕು. ಈ ಬಗ್ಗೆ ಏನಾದರು ಲೋಪದೋಷಗಳಿದ್ದಲ್ಲಿತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಈ ಹಿಂದೆ ಏನಾದರೂ ತೊಡಕುಗಳು ಉಂಟಾಗಿದ್ದರೆ ಮತ್ತೊಮ್ಮೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಕೆಲ ವಿದ್ಯಾರ್ಥಿಗಳು ಯಾವುದಾದರೊಂದು ವಿಷಯದಲ್ಲಿಹಿಂದುಳಿದಿರುತ್ತಾರೆ. ಪರೀಕ್ಷಾ ದೃಷ್ಟಿಯಿಂದ ಅಂತಹವರನ್ನು ಗುರುತಿಸಿ ಶಾಲಾ ಅವಧಿಯ ನಂತರವೂ ಹೆಚ್ಚುವರಿ ತರಗತಿ ನಡೆಸಿ ಶೇ.100ರಷ್ಟು ಫಲಿತಾಂಶ ಪಡೆಯುವಂತೆ ಪ್ರೇರೇಪಿಸಬೇಕು. ಇದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು,’’ ಎಂದು ನಿರ್ದೇಶಿಸಿದರು.
ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಶಿಕ್ಷಣಾಧಿಕಾರಿ ಭಜಂತ್ರಿ ಸೇರಿ ಜಿಲ್ಲೆಯ ಎಲ್ಲತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಾನಾ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.
ಕೋಟ್ --------
‘‘ಜಿಲ್ಲೆಯಲ್ಲಿಶೇ.100 ಅಥವಾ ಅತೀ ಹೆಚ್ಚು ಫಲಿತಾಂಶ ನೀಡುವ ಶಾಲೆಗೆ ಜಿಲ್ಲಾಡಳಿತದ ವತಿಯಿಂದ ವಿಶೇಷ ಬಹುಮಾನ ನೀಡಲಾಗುವುದು,’’
-ಕವಿತಾ ಎಸ್ .ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ
ಫೋಟೋ ಕ್ಯಾಪ್ಷನ್ : ವಿಜೆಎನ್ 24ಜಯಪ್ಪ01
ಹೊಸಪೇಟೆ ನಗರದ ಜಿಲ್ಲಾಒಳಾಂಗಣ ಕ್ರೀಡಾಂಗಣದಲ್ಲಿಆಯೋಜಿಸಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೇರಿ ಮಾತನಾಡಿದರು.

