ನೌಕರನ ಮೇಲೆ ಹೆಜ್ಜೆನು ದಾಳಿ

Contributed byaravindahebbar1971@gmail.com|Vijaya Karnataka

An employee named Ronald was stung by a wasp while repairing a water tank meter in Beltangadi. Diver Ismail rushed to his aid, drove away the wasp, and rescued Ronald from the tank. Ronald sustained serious injuries and was admitted to Beltangadi Government Hospital for further treatment. Several residents and a town panchayat employee assisted in the rescue operation.

snake attack at belthangadi tank worker ronald seriously injured diver rescues

ಬೆಳ್ತಂಗಡಿ : ಪಟ್ಟಣ ಪಂಚಾಯಿತಿ ನೀರಿನ ಟ್ಯಾಂಕ್ ಮೀಟರ್ ಸರಿಪಡಿಸುವ ಸಂದರ್ಭದಲ್ಲಿ ನೌಕರ ರೋನಾಲ್ಡ್ ಸಂಜಯನಗರ ಎಂಬವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ.

ತಕ್ಷಣ ಕಾರ್ಯಪ್ರವೃತರಾದ ಮುಳುಗು ತಜ್ಞ ಇಸ್ಮಾಯಿಲ್ ಸಂಜಯನಗರ ರಕ್ಷಣಾ ಕಾರ್ಯಕ್ಕೆ ಧಾವಿಸಿ ಹೆಜ್ಜೇನು ಓಡಿಸಿ ನೌಕರನನ್ನು ನೀರಿನ ಟ್ಯಾಂಕಿನಿಂದ ಕೆಳಗಿಳಿಸಿ ರಕ್ಷಿಸಿದರು.

ಗಂಭೀರ ಗಾಯಗೊಂಡಿರುವ ರೋನಾಲ್ಡ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯದಲ್ಲಿಬೆಳ್ತಂಗಡಿ ಸಂಜಯನಗರ ನಿವಾಸಿಗಳಾದ ಅಕ್ಬರ್ ಬೆಳ್ತಂಗಡಿ, ರಶೀದ್ ಬೆಳ್ತಂಗಡಿ, ಬದ್ರು ಮಟ್ಲ, ಶಫೀರ್ ಸಂಜಯನಗರ, ಇರ್ಫಾನ್ ಬೆಳ್ತಂಗಡಿ, ಶರೀಫ್ ಸಂಜಯನಗರ ಹಾಗೂ ಪಟ್ಟಣ ಪಂಚಾಯಿತಿ ನೌಕರ ಫ್ರಾನ್ಸಿಸ್ ಬೆಳ್ತಂಗಡಿ ಪಾಲ್ಗೊಂಡಿದ್ದರು.