ದಿ ಜ್ಯುವೆಲರಿ ಶೋಗೆ ಚಾಲನೆ
ಮೂರು ದಿನಗಳ ಕಾಲ ನಡೆಯುವ ಮೇಳ
ವಿಕ ಸುದ್ದಿಲೋಕ ಚಿಕ್ಕಮಗಳೂರು
ಮದುವೆ ಹಾಗೂ ಶುಭಕಾರ್ಯಗಳಿಗೆ ಮೆರುಗು ನೀಡಲು ನಗರದಲ್ಲಿವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟವನ್ನು ದಿ ಗೋಲ್ಡನ್ ಜ್ಯುವೆಲರಿ ಶೋ ಒಂದೇ ವೇದಿಕೆಯಲ್ಲಿಪ್ರಸ್ತುತಪಡಿಸುತ್ತಿದೆ.
ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್ .ಜಗದೀಶ್ ಮತ್ತು ಹೇಮಲತಾ ಜಗದೀಶ್ ಅವರು ನಗರದ ಜಿಲ್ಲಾಒಕ್ಕಲಿಗರ ಭವನದಲ್ಲಿಆಯೋಜಿಸಿರುವ ಭಾರತೀಯ ಒಡವೆಗಳ ಮೂರು ದಿನಗಳ ಉತ್ಸವ ‘ದಿ ಜ್ಯುವೆಲರಿ ಶೋ’ವನ್ನು ಶನಿವಾರ ನಟಿ ಅಮೃತಾ ಪ್ರೇಮ್ ಉದ್ಘಾಟಿಸಿದರು.
ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು ಹಾಗೂ ನಂಬಿಕಸ್ತ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಿವೆ. ಮದುವೆ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿಆಭರಣಗಳನ್ನು ಕೊಳ್ಳಲು ಇದು ಉತ್ತಮ ವೇದಿಕೆಯೂ ಆಗಿದೆ. ನಗರ ಮತ್ತು ಸುತ್ತಲಿನ ನಾಗರಿಕರಿಗೆ ಅಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದ್ದು ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದ ವಿಭಿನ್ನ ಆಭರಣಗಳು ಮೇಳದಲ್ಲಿವೆ.
ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಿರುವ ಈ ಮೇಳದಲ್ಲಿವಿಶೇಷ ವಿನ್ಯಾಸಗಳ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಇದೆ. ಎಲ್ಲಚಿನ್ನದ ಆಭರಣಗಳೂ ಬಿಐಎಸ್ ಹಾಲ್ ಮಾರ್ಕ್ ಹೊಂದಿದ್ದು ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ, ಐಜಿಐ ಪ್ರಮಾಣಿತವಾಗಿವೆ. ಆಭರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಜ್ರಾಭರಣ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಖರೀದಿದಾರರು ಹಳೆ ಚಿನ್ನವನ್ನು ಬದಲಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆ ದೊರೆಯಲಿದೆ. ಒಂದೆ ವೇದಿಕೆಯಲ್ಲಿದೇಶದ 30 ಹೆಸರಾಂತ ಆಭರಣ ಮಳಿಗೆಗಳಿವೆ.
ಬೆಂಗಳೂರಿನ ಆಧರಣ, ಆಭೂಷಣ್ , ಗಜರಾಜ್ , ಶ್ರೀ ಗಣೇಶ್ ಡೈಮೆಂಡ್ಸ್ , ರೂಪಾ ಜ್ಯುವೆಲರ್ (ಹಾಸನ), ಡಾಲ್ ರ್ ಗೋಲ್ಡ್ (ಮೈಸೂರು), ಸಸ್ತೋಷಿ, ಅದ್ವಾಯ, ಲುವೇರಾ, ಆರ್ಟ್ ಇಂಡಿಯಾ, ಮೇಹ್ತಾ(ಚೆನ್ನೈ), ಓರಾ (ನವದೆಹಲಿ), ಟ್ರೈ ಡೈಯಾ, ರೂಪಂ ಸಿಲ್ವರ್ , ಎಮ್ಮಡಿ ಸಿಲ್ವರ್ , ಸಂಜಯ್ ಜ್ಯುವೆಲರ್ , ಮರನ್ ಜೆಮ್ಸ್ , ಸ್ವಸ್ಥ, ನಿತ್ಯಾಸ್ (ವಿಶಾಖಪಟ್ಟಣಂ ಬಾಲಾಜಿ ಪಲ್ಲ, ಚೆನ್ನೈ), ಪ್ಯಾಶನ್ ಜ್ಯುವೆಲರಿ ಮಳಿಗೆಗಳಿವೆ.
=====
28ಎಸ್ ಎಂಜಿಗುರು1
ಚಿಕ್ಕಮಗಳೂರಿನ ಜಿಲ್ಲಾಒಕ್ಕಲಿಗರ ಭವನದಲ್ಲಿಆಯೋಜಿಸಿರುವ ಭಾರತೀಯ ಒಡವೆಗಳ ಉತ್ಸವ ದಿ ಜ್ಯುವೆಲರಿ ಶೋವನ್ನು ನಟಿ ಅಮೃತಾ ಪ್ರೇಮ್ ಉದ್ಘಾಟಿಸಿದರು.

