ಅಂಕೋಲಾ

Contributed bynmanjaguni@gmail.com|Vijaya Karnataka

ಅಂಕೋಲಾದ ಕೆ.ಎಲ್‌.ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ ಪವಾರ ಮಾತನಾಡಿದರು. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಮ್ಯೂಚುವಲ್‌ ಫಂಡ್‌ ಮತ್ತು ಸಿಪ್‌ ಮೂಲಕ ಹೂಡಿಕೆ ಆರಂಭಿಸುವುದು ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ. ಇದು ಭವಿಷ್ಯಕ್ಕೆ ದೊಡ್ಡ ಬುನಾದಿಯಾಗುತ್ತದೆ. ಕೆಲಸಕ್ಕೆ ಸೇರುವ ಹೊತ್ತಿಗೆ ದೊಡ್ಡ ಮೊತ್ತದ ಹಣ ಕೈ ಸೇರುತ್ತದೆ ಎಂದು ತಿಳಿಸಿದರು.

ankola students lessons on financial discipline and investments

ವಿದ್ಯಾರ್ಥಿ ಜೀವನದಿಂದಲೇ ಹಣಕಾಸಿನ ಮಹತ್ವ ಅರಿಯಬೇಕು

ವಿಕ ಸುದ್ದಿಲೋಕ ಅಂಕೋಲಾ

ವಿದ್ಯಾರ್ಥಿ ಜೀವನದಲ್ಲಿಯೇ ಮ್ಯೂಚುವಲ್ ಫಂಡ್ ಮತ್ತು ಸಿಪ್ ಮೂಲಕ ಹೂಡಿಕೆ ಆರಂಭಿಸುವುದು ಆರ್ಥಿಕ ಸ್ವಾತಂತ್ರ್ಯದತ್ತ ಇಡುವ ಮೊದಲ ಹೆಜ್ಜೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಹಣಕಾಸಿನ ಶಿಸ್ತು ಬೆಳೆಸಿಕೊಳ್ಳುವುದು ಅವರ ಭವಿಷ್ಯಕ್ಕೆ ದೊಡ್ಡ ಬುನಾದಿಯಾಗುತ್ತದೆ ಎಂದು ಧಾರಾ ಅಕಾಡೆಮಿಕ್ಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ನಿರ್ದೇಶಕ ರಮೇಶ ಪವಾರ ಹೇಳಿದರು.

ಪಟ್ಟಣದ ಕೆ.ಎಲ್ .ಇ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿಪ್ರ.ಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಮಾರ್ಟ್ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ವಿದ್ಯಾರ್ಥಿ ಜೀವನದಲ್ಲಿಹೂಡಿಕೆ ಆರಂಭಿಸಿದರೆ, ಕೆಲಸಕ್ಕೆ ಸೇರುವ ಹೊತ್ತಿಗೆ ದೊಡ್ಡ ಮೊತ್ತದ ಹಣ ತಮ್ಮ ಕೈ ಸೇರುತ್ತದೆ’’ ಎಂದರು.

ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಪೂರ್ವಿ ಹಲಗೆಕರ್ ಸ್ವಾಗತಿಸಿದರು. ಪ್ರಿಯದರ್ಶಿನಿ ಹೆಗಡೆ ವಂದಿಸಿದರು.

4ಅಂಕೋಲಾ3

ಅಂಕೋಲಾದ ಕೆಎಲ್ ಇ ಶಿಕ್ಷಣ ಮಹಾವಿದ್ಯಾಲಯದಲ್ಲಿನಡೆದ ಕಾರ್ಯಕ್ರಮದಲ್ಲಿರಮೇಶ ಪವಾರ ಮಾತನಾಡಿದರು.