ಶೂಟಿಂಗ್ ರೇಂಜ್ , ಬಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

Contributed byshekargraphics1@gmail.com|Vijaya Karnataka

ತುಮಕೂರಿನಲ್ಲಿ ನೂತನ ಶೂಟಿಂಗ್ ರೇಂಜ್, ಬಾಸ್ಕೆಟ್‌ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ಜಲಕ್ರೀಡಾ ಕೇಂದ್ರಗಳನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಉದ್ಘಾಟಿಸಿದರು. ಯುವ ಸಮುದಾಯಕ್ಕೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಈ ಬಗ್ಗೆ ಮಾಹಿತಿ ನೀಡಿದರು.

in tumkur inauguration of shooting range and basketball courts

ವಿಕ ಸುದ್ದಿಲೋಕ ತುಮಕೂರು

ನಗರದಲ್ಲಿನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್ , ಟೆನಿಸ್ , ಬಾಸ್ಕೆಟ್ ಬಾಲ್ ಅಂಕಣಗಳು ಹಾಗೂ ಅಮಾನಿಕೆರೆಯಲ್ಲಿಕಯಾಕಿಂಗ್ ಮತ್ತು ಕೆನೋಯಿಂಗ್ ಜಲಕ್ರೀಡಾ ಕೇಂದ್ರಗಳನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕಾರ ್ಯಕ್ರಮವನ್ನು ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸಿದರು.

ಬಳಿಕ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ತುಮಕೂರಿನ ಯುವ ಸಮುದಾಯ ಹಾಗೂ ಕ್ರೀಡಾಸಕ್ತರಿಗೆ ಉತ್ತಮ ಸೌಲಭ್ಯಗಳಿರುವ ಕ್ರೀಡಾಂಗಣಗಳ ಅವಶ್ಯ ಇತ್ತು. ಈ ನಿಟ್ಟಿನಲ್ಲಿಜಿಲ್ಲಾಉಸ್ತುವಾರಿ ಸಚಿವರ ನೇತೃತ್ವದಲ್ಲಿಉತ್ತಮ ಗುಣಮಟ್ಟದ ಸೌಲಭ್ಯಗಳಿರುವ ಶೂಟಿಂಗ್ ರೇಂಜ್ , ಬಾಸ್ಕೆಟ್ ಬಾಲ್ ಅಂಕಣ, ಟೆನಿಸ್ ಅಂಕಣಗಳನ್ನು ನುರಿತ ಕ್ರೀಡಾ ತಜ್ಞರ ಮಾರ್ಗದರ್ಶನದಲ್ಲಿನಿರ್ಮಿಸಲಾಗಿದೆ ಎಂದ ಅವರು, ಜಿಲ್ಲಾಕೇಂದ್ರದ ಹೃದಯಭಾಗದಲ್ಲಿಇಷ್ಟು ವಿಶಾಲವಾದ ಸುಂದರ ಕೆರೆ ಎಲ್ಲಜಿಲ್ಲೆಗಳಲ್ಲಿಇಲ್ಲ. ಇರುವ ಅವಕಾಶಗಳನ್ನು ಇಲ್ಲಿಬಳಸಿಕೊಂಡು ಜಲಕ್ರೀಡಾ ಸ್ಪರ್ಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿಕಯಾಕಿಂಗ್ ಮತ್ತು ಕೆನೋಯಿಂಗ್ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದರು.

ತುಮಕೂರು ಜಿಲ್ಲಾದ್ಯಂತ ವಿವಿಧ ತಾಲೂಕುಗಳಲ್ಲಿನಡೆಯುತ್ತಿರುವ ಜನಸಂಪರ್ಕ ಸಭೆ ಯಶಸ್ವಿಯಾಗುತ್ತಿದೆ. ಗುಬ್ಬಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿನಡೆದ ಜನಸಂಪರ್ಕ ಸಭೆಯಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿಇದನ್ನು ಆಧಾರ್ ಅದಾಲತ್ ರೀತಿಯಲ್ಲಿನಿರಂತರವಾಗಿ ಹಮ್ಮಿಕೊಳ್ಳಲು ಚಿಂತನೆ ಇದೆ. ಪೌತಿ ಖಾತೆ ಆಂದೋಲನ ಕೂಡ ಹಮ್ಮಿಕೊಳ್ಳಲಾಗುವುದು. ಈ ವಾರದಲ್ಲಿಆನ್ ಲೈನ್ ನಲ್ಲಿ10 ಸಾವಿರ ಪೌತಿ ಖಾತೆ ಮಾಡಿದ್ದೇವೆ. ಜನಸಂಪರ್ಕ ಸಭೆಯಲ್ಲಿಸ್ಥಳದಲ್ಲೇ ಕೆಲವು ಪರಿಹಾರಗಳು ಆಗಿವೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿಶಾಸಕ ಜಿ.ಬಿ.ಜ್ಯೋತಿಗಣೇಶ್ , ಬಿಎಂಟಿಸಿ ನಿಗಮದ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜಾ, ಜಿಲ್ಲಾಪೊಲೀಸ್ ಅಧೀಕ್ಷಕ ಕೆ.ಎ.ಅಶೋಕ್ , ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಸಿ., ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಚಂದ್ರ, ಮತ್ತಿತರರು ಹಾಜರಿದ್ದರು.

ಬಾಕ್ಸ್ 1

ಬೇಸಿಗೆ ರಜೆಗಳನ್ನು ವ್ಯರ್ಥವಾಗಿ ಕಳೆಯದೆ ನಮ್ಮ ಜಿಲ್ಲೆಯ ಮಕ್ಕಳು ಅರ್ಥಪೂರ್ಣವಾಗಿ ಕಳೆಯಬೇಕು. ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತುಮಕೂರು ಇತ್ತೀಚಿನ ದಿನಗಳಲ್ಲಿಕ್ರೀಡಾ ಹಬ್ ಆಗಿದೆ. ಈಗಾಗಲೇ ಜಿಲ್ಲಾಕ್ರೀಡಾ ಹಾಸ್ಟೆಲ್ ಇದ್ದು ಮತ್ತೊಂದು ಕ್ರೀಡಾ ಹಾಸ್ಟೆಲ್ ಸ್ಥಾಪನೆಗೆ ಚಿಂತನೆ ಇದೆ.

- ಶುಭಾ ಕಲ್ಯಾಣ್ , ಜಿಲ್ಲಾಧಿಕಾರಿ

ಪೋಟೋ ಇದೆ : 15 ಟಿ ಎಂ ಕೆ ಲೋಕಾರ್ಪಣೆ: ಪೋಟೋ ಕ್ಯಾಫ್ಶನ್ : ತುಮಕೂರಲ್ಲಿಭಾನುವಾರ ಜಿಲ್ಲಾಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಶೂಟಿಂಗ್ ರೇಂಜ್ , ಬಾಸ್ಕೆಟ್ ಬಾಲ್ ಅಂಕಣಗಳನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಸಚಿವರು, ಶೂಟಿಂಗ್ ರೇಂಜ್ ನಲ್ಲಿಗನ್ ಹಿಡಿದು ಗುರಿ ಇಟ್ಟರು.