ವಿಕ ಸುದ್ದಿಲೋಕ ಹನೂರು
ಸಮಾಜದಲ್ಲಿಜಾತಿ ಪದ್ಧತಿ, ಅಸ್ಪೃಶ್ಯತೆ , ದ್ವೇಷಾತ್ಮಕ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಲು ಹನೂರಿನಲ್ಲಿಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಚಾಲನೆ ನೀಡಿದರು.
ಜಿಲ್ಲಾಸಮಾಜ ಕಲ್ಯಾಣ ಇಲಾಖೆ, ಚಾಮರಾಜನಗರ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಹನೂರು ಹಾಗೂ ವಿಷÜನ್ ಫೌಂಡೇಶನ್ , ಕೊಳ್ಳೇಗಾಲ ಇವರ ಸಂಯುಕ್ತ ಆಶ್ರಯದಲ್ಲಿಈ ಕಾರ್ಯಕ್ರಮ ನಡೆಯಿತು.
ಕೇಶವಮೂರ್ತಿ ಮಾತನಾಡಿ‘‘ ಅಸ್ಪೃಶ್ಯತೆ ಅಮಾನವೀಯ ಪದ್ಧತಿ, ಎಲ್ಲರಿಗೂ ಸಮಾನ ಹಕ್ಕು ಮತ್ತು ಸಹಬಾಳ್ವೆ ಇರುವಂತೆ ಜನರಿಗೆ ಜಾಗೃತಿ ಮೂಡಿಸುವಲ್ಲಿಬೀದಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ,’’ ಎಂದರು.
ಹನೂರು ತಾಲೂಕಿನ ಬೈರನತ್ತ, ಹೂಗ್ಯ, ರಾಮಾಪುರ, ಒಡೆಯರಪಾಳ್ಯ ಗ್ರಾಮಗಳಲ್ಲಿಬೀದಿ ನಾಟಕ ಪ್ರದರ್ಶನಗೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರು ನಾಟಕದ ಸಂದೇಶವನ್ನು ತಿಳಿದು, ತಮ್ಮ ಭಾವನೆಗಳನ್ನು ಬದಲಾಯಿಸುವ ಮೂಲಕ ಸಮಾನತೆ ಮತ್ತು ಸಹಬಾಳ್ವೆಯನ್ನು ಬೆಳೆಸಬೇಕು,’’ ಎಂದು ತಿಳಿ ಹೇಳಿದರು.
ವಿಷÜನ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಸಿದ್ದರಾಜು. ಸಿ, ನಿರ್ದೇಶಕರಾದ ಮಹದೇವ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಸಿಬ್ಬಂದಿ ಹಾಗೂ ಆಯ್ದ ಗ್ರಾಮಗಳ ನಿವಾಸಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಅಊಓ14ಊಓಖ,08
ಪೋಟೊ:01
ಹನೂರು: ಸಮಾಜದಲ್ಲಿಜಾತಿ ಪದ್ಧತಿ, ಅಸ್ಪೃಶ್ಯತೆ, ದ್ವೇಷಾತ್ಮಕ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಲು ಹನೂರಿನಲ್ಲಿಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಚಾಲನೆ ನೀಡಿದರು.

