ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ
*ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹ
* ಅಂಗನವಾಡಿ ನೌಕರರ ಒತ್ತಾಯ
ವಿಕ ಸುದ್ದಿಲೋಕ ಯಲಬುರ್ಗಾ
ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ನೌಕರರ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ, ಶಾಸಕ ಬಸವರಾಜ ರಾಯರಡ್ಡಿ ಅವರ
ಆಪ್ತ ಸಹಾಯಕ ರಮೇಶ ಕೊಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಲಲಿತಾ ಅರಳಿ ಮಾತನಾಡಿ, ‘‘ಪ್ರತಿಯೊಬ್ಬ ಅಂಗನವಾಡಿ ನೌಕರರಿಗೆ ಇಎಸ್ ಐ, ಪಿಎಫ್ ಸೌಲಭ್ಯ ಒದಗಿಸಬೇಕು.
ನೌಕರರ ಕನಿಷ್ಠ ವೇತನ ಹೆಚ್ಚಿಸಬೇಕು,’’ ಎಂದು ಆಗ್ರಹಿಸಿದರು.
‘‘ನೌಕರರಿಗೆ ಸಮಗ್ರ ಸೌಲಭ್ಯ ನೀಡುವಲ್ಲಿಸರಕಾರ ಮುಂದಾಗುತ್ತಿಲ್ಲ. ಆರು ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಮೂಲಕ ಆಹಾರ, ಆರೋಗ್ಯ, ಶಿಕ್ಷಣ ಕೊಡಲಾಗುತ್ತಿದೆ. ಆದರೆ ರಾಜ್ಯ ಸರಕಾರ ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. ಬಿಎಲ್ ಒ ಕೆಲಸದಿಂದ
ನೌಕರರನ್ನು ಬಿಡುಗಡೆ ಮಾಡಬೇಕು,’’ ಎಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಪಾರ್ವತಿ ಛಲವಾದಿ, ಬಸಮ್ಮ ಉಣೆಚಗೇರಿ, ಯಲ್ಲುಬಾಯಿ ಮ್ಯಾಗೇರಿ, ರತ್ನಾ ವಜ್ರಬಂಡಿ, ಸಾವಿತ್ರಿ ಅಂಗಡಿ,
ಪ್ರೇಮಾ ಹುಬ್ಬಳ್ಳಿ, ಗೌರಮ್ಮ ಬೇಲೇರಿ, ನೀಲಮ್ಮ ಗಿರೆಡ್ಡಿ, ವೇದಾ ದೇಸಾಯಿ, ಅನುಸೂಯಾ ಚವಡಿ, ಸುಜಾತಾ ಛಲವಾದಿ ಇದ್ದರು.
15ವೈಎಲ್ ಬಿಪೋಟೋ01
ಅಂಗನವಾಡಿ ನೌಕರರ ಯಲಬುರ್ಗಾ ತಾಲೂಕು ಘಟಕದಿಂದ ಶಾಸಕ ಬಸವರಾಜ ರಾಯರಡ್ಡಿ ಅವರ ಆಪ್ತ ಸಹಾಯಕ ರಮೇಶ ಕೊಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.

