ಕೆ.ಎಚ್ .ಪಾಟೀಲರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಡಾ.ಕಲ್ಲನಗೌಡರ ಅಭಿಪ್ರಾಯ (ಕಿಕ್ಕರ್ )
ರೈತ, ಗ್ರಾಮಾಭಿವೃದ್ಧಿಗೆ ಕೆ.ಎಚ್ .ಪಾಟೀಲರಿಂದ ಬಲ (ಹೆಡ್ )
ವಿಕ ಸುದ್ದಿಲೋಕ ಗದಗ
ಸಮಾಜದಲ್ಲಿರುವ ಪ್ರತಿಯೊಬ್ಬರೂ ಸಮಾನ ಅವಕಾಶಗಳನ್ನು ಪಡೆದು ಬೆಳವಣಿಗೆ ಹೊಂದುವ ದೃಷ್ಟಿಕೋನ ಹೊಂದಿದ್ದ ಕೆ.ಎಚ್ .ಪಾಟೀಲರು ಇದಕ್ಕೆ ಪೂರಕವಾದ ಅನೇಕ ಸಂಪನ್ಮೂಲಗಳನ್ನು ಸೃಷ್ಟಿಸಿದರು ಎಂದು ಪ್ರಾಚಾರ್ಯ ಡಾ.ರಮೇಶ ಕಲ್ಲನಗೌಡರ ತಿಳಿಸಿದರು.
ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ನಿಂದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿನಡೆದ ಸಹಕಾರಿ ರಂಗದ ಭೀಷ್ಮ ಕೆ.ಎಚ್ .ಪಾಟೀಲರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಮಾತನಾಡಿದರು.
ರೈತರ ಹಿತ ಮತ್ತು ಗ್ರಾಮಾಭಿವೃದ್ಧಿ , ಕೃಷಿ, ಸಹಕಾರಿ, ಶಿಕ್ಷಣ, ನೀರಾವರಿ, ಅರಣ್ಯ ಕ್ಷೇತ್ರಗಳನ್ನು ಬಲಪಡಿಸುವ ಕಾರ್ಯ ಮಾಡಿದರು. ತನ್ಮೂಲಕ ಸಾಮಾಜೋನ್ನತಿಗೆ ವಿಶಿಷ್ಠ ಸೇವೆ ಸಲ್ಲಿಸಿ ತಮ್ಮ ಕಾಯಕದ ಮೂಲಕ ಮಾದರಿಯಾಗಿದ್ದಾರೆ. ರಾಜಕೀಯ ವ್ಯವಸ್ಥೆಗೆ ಹೊಸ ಆಯಾಮ ಸೃಜಿಸಿದರು. ಸರಳತೆ, ನೇರ ನಡೆ ನುಡಿಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿವೆ. ಸಂಘ ಜೀವಿಯಾಗಿರುವ ಮನುಷ್ಯ ಸಹಕಾರದಿಂದ ಬದುಕಬೇಕು ಎಂಬ ನೀತಿಗೆ ಗದಗನ್ನು ಮಾದರಿಯಾಗಿಸಿದರು ಎಂದು ತಿಳಿಸಿದರು.
ಮುಖ್ಯ ಅತಿಥಿ ಕೃಷ್ಣಗೌಡ ಪಾಟೀಲ, ಜಿಲ್ಲಾಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ವಿದ್ಯಾಧರ ದೊಡ್ಡಮನಿ, ಜಿಲ್ಲಾಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು.
ಬಸವರಾಜ ನೆಲಜೇರಿ ಹಾಗೂ ಕಸ್ತೂರಿ ಕಡಗದ ಕೆ.ಎಚ್ .ಪಾಟೀಲರ ಕುರಿತು ಕವನ ವಾಚಿಸಿದರು. ಡಾ.ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು. ಚಂದ್ರಶೇಖರ ವಸ್ತ್ರದ, ಕೆ.ಎಚ್ .ಬೇಲೂರ, ಜಿ.ಬಿ.ಪಾಟೀಲ, ಅರ್ಜುನ ಗೊಳಸಂಗಿ, ಶಂಕರಪ್ಪ ಗಾಂಜಿ, ರಶ್ಮಿ ಅಂಗಡಿ, ಡಿ.ಎಸ್ .ಬಾಪುರಿ, ರಾಹುಲ ಗಿಡ್ನಂದಿ, ಅಮರೇಶ ರಾಂಪೂರ, ಸುರೇಶ ಕುಂಬಾರ, ರತ್ನಕ್ಕ ಪಾಟೀಲ, ಮಂಜುಳಾ ವೆಂಕಟೇಶಯ್ಯ, ಉಮಾದೇವಿ ಪಾಟೀಲ, ಎಸ್ .ಬಿ.ಕಣವಿ, ಶಿವಪುತ್ರವ್ವ ಕಣವಿ ಇದ್ದರು.
ಫೊಟೊ: 15ಜಿಡಿಜಿ 1:
ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ನಿಂದ ನಡೆದ ಕೆ.ಎಚ್ .ಪಾಟೀಲ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಕೆ.ಎಚ್ .ಪಾಟೀಲ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

