ತಾಯಿ ಗುಣಗಾನ ಮಾತಿನಲ್ಲಿವಿಶ್ಲೇಷಣೆ ಅಸಾಧ್ಯ (ಹೆಡ್ )

Contributed byvinayakbhavimani11@gmail.com|Vijaya Karnataka

ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ತಾಯಿಯ ಮಹತ್ವ ಸಾರಿದರು. ತಾಯ್ತನದ ಪ್ರೀತಿ ಅನುಭವಿಸಬೇಕು ಎಂದರು. ಎಸ್.ಆರ್. ಬೊಮ್ಮಾಯಿ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಲು ಅವರ ತಾಯಿ ಗಂಗಮ್ಮ ತಾಯಿಯ ಕಾಲ್ಗುಣ ಕಾರಣ ಎಂದರು. ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಲಾಯಿತು. ತಾಯಂದಿರರ ತ್ಯಾಗ ಸ್ಮರಿಸಲಾಯಿತು.

mothers welfare statements by basavaraj bommai

ತಾಯಿ ನೆನಪಾದರೆ ಕಣ್ಣು ಒದ್ದೆಯಾಗುತ್ತವೆ: ಬೊಮ್ಮಾಯಿ (ಬಾಕ್ಸ್ )

ಶ್ರೀ ಮಾತೃ ಶ್ರೀ ಸೇವಾ ಟ್ರಸ್ಟ್ ನಿಂದ ನಡೆದ ಕಾರ್ಯಕ್ರಮದಲ್ಲಿಬೊಮ್ಮಾಯಿ ಅಭಿಮತ (ಕ್ಕಿಕರ್ )

ತಾಯಿ ಗುಣಗಾನ ಮಾತಿನಲ್ಲಿವಿಶ್ಲೇಷಣೆ ಅಸಾಧ್ಯ (ಹೆಡ್ )

ವಿಕ ಸುದ್ದಿಲೋಕ ಗದಗ

ಜೀವನದ ಅಂತ್ಯದ ಸಮಯದಲ್ಲೂತಾಯಿ ನೆನಪಾದಾಗ ಕಣ್ಣು ಒದ್ದೆಯಾಗುತ್ತವೆ. ತಾಯ್ತನ ಎನ್ನುವ ಶಬ್ದ ದೊಡ್ಡದು. ಅದನ್ನು ಮಾತಿನಲ್ಲಿವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ತಾಯಿಯ ಪ್ರೀತಿ ಅನುಭವಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿಜಗದ್ಗುರು ಸಿದ್ದರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿನಡೆದ ಲಿಂ. ಬಸಮ್ಮ ತಾಯಿ ಸಂಗನಗೌಡ ಪಾಟೀಲ ಹಾಗೂ ಲಿಂ.ಲಕ್ಷ ್ಮಮ್ಮ ಗೌಡರ ಅವರ ಪುಣ್ಯಸ್ಮರಣೋತ್ಸವ ಮತ್ತು ಮಹಿಳಾ ದಿನಾಚರಣೆ ಅಂಗವಾಗಿ ಪ್ರತಿಭಾ ದೀಪ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿಮಾತನಾಡಿದರು.

ಶಾಸಕ ಜಿ.ಎಸ್ .ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್ .ಆರ್ .ಬೊಮ್ಮಾಯಿ ಹಾಗೂ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಆಗಲು ಅವರ ತಾಯಿ ಗಂಗಮ್ಮ ತಾಯಿಯ ಕಾಲ್ಗುಣ ಕಾರಣವಾಗಿತ್ತು. ಅವರ ಮಗ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿದ್ದು ಸಂತಸ ತಂದಿದೆ. 12ನೇ ಶತಮಾನದಿಂದ ಸಮಾನತೆ ತರಬೇಕು ಎಂದು ಹೋರಾಟ ಮಾಡುತ್ತಾ ಬರಲಾಗಿದೆ. ಆದರೆ, ಇಂದಿಗೂ ಕೆಲವು ಕಡೆ ಮಹಿಳೆಯರಿಗೆ ಸಮಾನತೆ ಇಲ್ಲದಾಗಿದೆ. ಹೆಣ್ಣು-ಗಂಡು ಸಮಾನರಾಗಿರಬೇಕು ಎಂದು ಸಂವಿಧಾನದಲ್ಲೂಹೇಳಲಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಜಯಶ್ರೀ ಶಿವಾನಂದ ಮಾತನಾಡಿ, ಸಮಾರಂಭದಲ್ಲಿಇಬ್ಬರು ತಾಯಂದಿರರ ಸಾಧನೆಗಾಗಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಗಿದೆ. ಜನ್ಮ ಕೊಟ್ಟ ತಾಯಿ, ಹೊತ್ತ ಭೂಮಿ ಎರಡು ಸ್ವರ್ಗಕ್ಕಿಂತ ಮಿಗಿಲು. ವಿದ್ಯೆಯ ಜತೆಗೆ ಸುಸಂಸ್ಕೃತಿ ನೀಡುವುದು ತಾಯಿಯ ಮೂಲ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಬಸಮ್ಮ ತಾಯಿ ಹಾಗೂ ಲಕ್ಷ ್ಮಮ್ಮ ತಾಯಿ ಅಚ್ಚುಕಟ್ಟಾಗಿ ಮಾಡಿದ್ದು ಪ್ರಶಂಸನೀಯವಾಗಿದೆ. ನಾರಿ ಶಕ್ತಿಯ ಕುರಿತು ಅನೇಕರು ಹೇಳುತ್ತಾರೆ. ಆದರೆ, ಅದು ಅನುಷ್ಠಾನಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿಬರಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್ .ವಿ.ಸಂಕನೂರ ಮಾತನಾಡಿ, ತಮಗಾಗಿ, ತಮ್ಮ ಕುಟುಂಬಕ್ಕಾಗಿ ಬದುಕದೆ ಸಮಾಜದ ಏಳಿಗೆಗಾಗಿ ಶ್ರಮಿಸಿದವರ ಪುಣ್ಯಸ್ಮರಣೆ ಮಾಡಲಾಗುತ್ತದೆ. ಲಿಂ.ಬಸಮ್ಮನವರು ಐದು ಮುತ್ತಿನಂತ ಮಕ್ಕಳಿಗೆ ಜನ್ಮ ನೀಡಿದರು. ಅವರೆಲ್ಲರೂ ಉನ್ನತ ಸ್ಥಾನದಲ್ಲಿರಾರಾಜಿಸುತ್ತಿದ್ದಾರೆ. ಇದಕ್ಕೆ ಬಸಮ್ಮ ತಾಯಿ ನೀಡಿದ ಸಂಸ್ಕಾರವೇ ಮೂಲ ಕಾರಣ. ಭಾರತದಲ್ಲಿಮಹಿಳೆಯರಿಗೆ ವಿಶೇಷ ಗೌರವ ನೀಡುತ್ತದೆ. ಮಾತೃದೇವೋಭವ ಎಂದು 2,500 ವರ್ಷಗಳ ಹಿಂದೆಯೇ ಭಾರತದಲ್ಲಿಹೇಳಲಾಗಿತ್ತು. ಇಲ್ಲಿಸಾಧನೆ ಮಾಡಲು ಮಹಿಳೆಯರು ಹಿಂದೆ ಬಿದ್ದಿಲ್ಲಎಂದು ಹೇಳಿದರು.

ಈ ವೇಳೆ ಐವರು ಸಾಧಕ ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನ ಮಾಡಲಾಯಿತು.

ಫೋಟೊ: 15 ಜಿಡಿಜಿ 3:

ಗದಗ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.