ಮುಳಬಾಗಲು ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Contributed byprk.k73@gmail.com|Vijaya Karnataka

ಮುಳಬಾಗಲು ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್‌, ಉಪಾಧ್ಯಕ್ಷರಾಗಿ ಎನ್‌. ಸುಧಾ ತಿಮ್ಮರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಂದು ವರ್ಷದೊಳಗೆ ನೂತನ ಹೈಟೆಕ್‌ ಕಟ್ಟಡ ನಿರ್ಮಾಣವಾಗಲಿದೆ. ರೈತರಿಗೆ ಅನುಕೂಲವಾಗುವಂತೆ ಹೋಬಳಿ ಕೇಂದ್ರಗಳಲ್ಲಿ ಶಾಖೆಗಳು ಪ್ರಾರಂಭವಾಗಲಿವೆ. ಬಡವರಿಗೆ ಕಡಿಮೆ ದರದಲ್ಲಿ ಔಷಧ ನೀಡಲು ಜನೌಷಧ ಕೇಂದ್ರ ತೆರೆಯಲಾಗುವುದು. ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು.

election of new president in mulbagal kotturu g manjunath retains the position for the second time

ಮುಳಬಾಗಲು ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ವಿಕ ಸುದ್ದಿಲೋಕ ಮುಳಬಾಗಲು

ತಾಲೂಕು ಟಿಎಪಿಸಿಎಂಎಸ್ ನ ನೂತನ ಅಧ್ಯಕ್ಷರಾಗಿ 2ನೇ ಬಾರಿಗೆ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ , ಉಪಾಧ್ಯಕ್ಷರಾಗಿ ಎನ್ . ಸುಧಾ ತಿಮ್ಮರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕೊತ್ತೂರು ಜಿ. ಮಂಜುನಾಥ್ , ಉಪಾಧ್ಯಕ್ಷರ ಸ್ಥಾನಕ್ಕೆ ಎನ್ . ಸುಧಾ ತಿಮ್ಮರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಅಮಿದ್ ಹುಸೇನ್ ಅಧಿಕೃತವಾಗಿ ಪ್ರಕಟಿಸಿದರು.

ಈ ವೇಳೆ ನೂತನ ಅಧ್ಯಕ್ಷ ಕೊತ್ತೂರು ಜಿ. ಮಂಜುನಾಥ್ ಮಾತನಾಡಿ, ಒಂದು ವರ್ಷದ ಒಳಗೆ ಟಿಎಪಿಸಿಎಂಎಸ್ ನ ನೂತನ ಹೈಟೆಕ್ ಕಟ್ಟಡವನ್ನು ನಿರ್ಮಿಸಲಾಗುವುದು. ಈ ಹಿಂದೆ ನೂತನ ಕಟ್ಟಡ ನಿರ್ಮಾಣಕ್ಕೆ ಸಾಲ ಪಡೆಯಲು ಅರ್ಹತೆ ಇಲ್ಲ. ಅದರೆ ಕಳೆದ 5 ವರ್ಷಗಳಲ್ಲಿವಾರ್ಷಿಕ 3 ಕೋಟಿ ರೂ. ವಹಿವಾಟು ನಡೆಯುತ್ತಿದ್ದರಿಂದ ಈಗ 40 ಕೋಟಿ ರೂ. ಸಾಲ ಪಡೆಯಲು ಅವಕಾಶ ಸಿಕ್ಕಿದೆ ಎಂದರು.

ಸಂಘದ ನೂತನ ಕಟ್ಟಡಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸಹಕಾರ ಸಚಿವರು ಆಗಿರುವ ಮುಖ್ಯಮಂತ್ರಿಗಳ ಬಳಿ ಮನವಿ ನೀಡಲಾಗುವುದು. ಸರಕಾರದಿಂದ ಅನುದಾನ ವಿಳಂಬವಾದರೆ ಎಲ್ಲಾನಿರ್ದೇಶಕರು ವೈಯುಕ್ತಿಕವಾಗಿ ಹಣ ಖರ್ಚು ಮಾಡಿ ನಂತರ ಸರಕಾರದಿಂದ ಬಂದ ಮೇಲೆ ತೆಗೆದುಕೊಳ್ಳಲಾಗುವುದು. ನೂತನ ಕಟ್ಟಡಕ್ಕೆ ಈ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಕೇಂದ್ರ ಸಚಿವ ದಿವಂಗತ ಎಂ.ವಿ. ಕೃಷ್ಣಪ್ಪ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿಹೋಬಳಿ ಕೇಂದ್ರಗಳಲ್ಲಿಟಿಎಪಿಸಿಎಂಎಸ್ ಸಂಘದ ಶಾಖೆಗಳನ್ನು ಪ್ರಾರಂಭಿಸಿ ಅಲ್ಲಿಯೇ ರೈತರಿಗೆ ಬೇಕಾಗುವ ಗೊಬ್ಬರ, ಕೀಟನಾಶಕಗಳು ಸೇರಿದಂತೆ ಇತರೆ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಬಡವರ್ಗದವರಿಗೆ ಕಡಿಮೆ ಧರದಲ್ಲಿಔಷಧಗಳು ಲಭ್ಯವಾಗಲು ಜನೌಷಧ ಕೇಂದ್ರವನ್ನು ಪ್ರಾರಂಭಿಸಲಾಗುವುದು. ರೈತರ ಸಂಸ್ಥೆಯನ್ನು ಅಭಿವೃದ್ದಿ ಮಾಡುವ ಅಶಯ ಹೊಂದಿ ಎರಡನೇ ಬಾರಿಗೆ ಅಧ್ಯಕ್ಷನಾಗಿದ್ದೇನೆ. ಕಳೆದ 5 ವರ್ಷಗಳಲ್ಲಿನಾನು ಅಧ್ಯಕ್ಷನಾಗಿದ್ದಾಗ ನಿರ್ದೇಶಕರ ಸಭೆ ಸಮಾರಂಭಗಳಿಗೆ ಸಂಘದ ಹಣವನ್ನು ಖರ್ಚು ಮಾಡದೇ ನಾನೇ ವೈಯಕ್ತಿಕವಾಗಿ ಖರ್ಚುಗಳನ್ನು ಭರಿಸುತ್ತಿದ್ದೆ. ಅದನ್ನು ಮುಂದಿನ 5 ವರ್ಷಗಳಲ್ಲಿಮುಂದುವರಿಸುವುದಾಗಿ ತಿಳಿಸಿದರು.

ಸಂಘದ ಕಾರ್ಯದರ್ಶಿಗಳು ಉತ್ತಮ ರೀತಿಯಲ್ಲಿಸೇವೆ ಮಾಡುತ್ತಿದ್ದಾರೆ ಪ್ರಸ್ತುತ ಸಂಘದ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಮೂಲಕ ಚುನಾವಣಾಧಿಕಾರಿ ಅಮೀದ್ ಉಸೇನ್ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಂಘದ ನಿರ್ದೇಶಕರಾದ ಆಲಂಗೂರು ಶಿವಣ್ಣ, ಆರ್ .ಆರ್ . ರಾಜೇಂದ್ರಗೌಡ, ವಿ. ರಾಜಪ್ಪ, ಆರ್ . ಅಮರನಾರಾಯಣಪ್ಪ, ಎಂ. ಸುಬ್ರಮಣಿ, ಪಿ.ಎಸ್ .ರಮೇಶ್ ಬಾಬು, ಎಂ.ಸಿ.ಸರ್ವಜ್ಞಗೌಡ, ಮಲ್ಲಿಕಾರ್ಜುನ್ ರೆಡ್ಡಿ, ನಾರಾಯಣಸ್ವಾಮಿ, ಕಗ್ಗಿನಹಳ್ಳಿ ಶ್ರೀನಿವಾಸ್ , ಚನ್ನರಾಯಪ್ಪ, ಎ. ಕವಿತಾ, ಸಂಘದ ಕಾರ್ಯದರ್ಶಿ ಬಿ.ಆರ್ . ಶಿವಶಂಕರ್ , ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ, ಕೆಪಿಸಿಸಿ ಸದಸ್ಯರಾದ ಜಿ. ರಾಮಲಿಂಗಾರೆಡ್ಡಿ, ಉತ್ತನೂರು ಶ್ರೀನಿವಾಸ್ , ದರಕಾಸ್ತು ಸಮಿತಿ ಸದಸ್ಯರಾದ ಜಮ್ಮನಹಳ್ಳಿ ಕೃಷ್ಣ, ಗುಜ್ಜನಹಳ್ಳಿ ಮಂಜುನಾಥ್ , ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲ, ಮುಖಂಡರಾದ ಎಂ. ಗೋಪಾಲ್ , ಆರ್ .ಎಸ್ . ಸುಹಾಸ್ ಶೆಟ್ಟಿ, ರಚ್ಚಬಂಡಹಳ್ಳಿ ಶ್ರೀರಾಮಪ್ಪ, ಸುಬ್ರಮಣಿರೆಡ್ಡಿ, ವೇಣುಗೋಪಾಲ್ , ಆಂಜನೇಯರೆಡ್ಡಿ, ಇದ್ದರು.

14 ಎಂ,ಬಿ.ಎಲ್ ಪೋಟೋ 3 ಮುಳಬಾಗಲು ತಾಲೂಕಿನ ಟಿಎಪಿಸಿಎಂಎಸ್ ನ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಉಪಾಧ್ಯಕ್ಷರಾಗಿ ಎನ್ . ಸುಧಾ ತಿಮ್ಮರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.