ಯುಗಾದಿ, ರಂಜಾನ್ ಗೆ ಕುರಿ, ಮೇಕೆ ಭರ್ಜರಿ ವ್ಯಾಪಾರ

Contributed bysri.vknews@gmail.com|Vijaya Karnataka

ಚಿಕ್ಕತಿರುಪತಿಯ ವಾರದ ಸಂತೆಯಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಪ್ರಯುಕ್ತ ಕುರಿ, ಮೇಕೆ ಮತ್ತು ನಾಟಿ ಕೋಳಿಗಳ ವ್ಯಾಪಾರ ಜೋರಾಗಿ ನಡೆಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಕುರಿ, ಮೇಕೆಗಳು ಮಾರಾಟವಾದವು. ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯಿತು. ಮಾಂಸದ ಬೆಲೆಗಳು ಏರಿಕೆಯಾಗಿದ್ದರೂ, ಹಬ್ಬದ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರು. ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಆಗಮಿಸಿದ್ದರು.

fantastic trade of sheep and goats for yugadi and ramadan festivals

ಶನಿವಾರದ ಸಂತೆಯಲ್ಲಿ15 ಸಾವಿರಕ್ಕೂ ಹೆಚ್ಚು ಕುರಿಗಳ ವ್ಯಾಪಾರ

ವಿ.ಶ್ರೀನಿವಾಸ್ ಲಕ್ಕೂರು

ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿಚಿಕ್ಕತಿರುಪತಿಯಲ್ಲಿಶನಿವಾರ ನಡೆಯುವ ವಾರದ ಸಂತೆಯಲ್ಲಿಕುರಿ, ಮೇಕೆ ಹಾಗೂ ನಾಟಿ ಕೋಳಿಗಳ ವ್ಯಾಪಾರ ಭರ್ಜರಿಯಾಗಿ ನಡೆದಿದ್ದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆದಿದೆ.

ಯುಗಾದಿ ಹಬ್ಬದ ಮಾರನೆ ದಿನ ಆಚರಿಸುವ ಹೊಸತಡುಕು ಹಿನ್ನೆಲೆಯಲ್ಲಿಹಲವು ಭಾಗಗಳಿಂದ ಕುರಿ, ಮೇಕೆ ಹಾಗೂ ನಾಟಿ ಕೋಳಿಗಳನ್ನು ಮಾರಾಟ ಮಾಡಲು, ಖರೀದಿಸಲು ಜನರು ಜಮಾಯಿಸಿದ್ದರು. ಸಂತೆಯಲ್ಲಿಸುಮಾರು 15 ಸಾವಿರಕ್ಕೂ ಹೆಚ್ಚು ಕುರಿಗಳು, ಮೇಕೆಗಳು ಜಮಾಯಿಸಿದ್ದವು. ರಾಮನಗರ, ಆನೇಕಲ್ , ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಂಗಾರಪೇಟೆ, ತಮಿಳುನಾಡಿನ ಹೊಸೂರು, ಬಾಗಲೂರು, ಬೇರಿಕೈ, ಸೇಲಂ, ಕೃಷ್ಣಗಿರಿ, ಆಂಧ್ರಪ್ರದೇಶದ ಚಿತ್ತೂರು, ಮದನಪಲ್ಲಿ, ಕಡಪ ಮುಂತಾದ ಕಡೆಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಕುರಿಗಳನ್ನು ಖರೀದಿಸಿ ವಾಹನಗಳ ಮೂಲಕ ತುಂಬಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹೊಸತಡಕು ಹಿನ್ನೆಲೆಯಲ್ಲಿಈಗಾಗಲೇ ಮಾಂಸದ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ1 ಕೆ.ಜಿ ಮಾಂಸದ ಬೆಲೆ 750 ರಿಂದ 900 ರೂ., ನಾಟಿ ಕೋಳಿ 800 ರೂ., ಫಾರಂ ಕೋಳಿ 300ರೂ.ಗಳಿಗೆ ಮಾರಾಟವಾಗುತ್ತಿದೆ. ವಾರದ ಸಂತೆಯಲ್ಲಿರಾಜ್ಯದ ಬನ್ನೂರು ಕುರಿ, ಆಂಧ್ರಪ್ರದೇಶದ ಕುರಿಗಳು ಹಾಗೂ ಮೇಕೆಗಳಿಗೆÜ ಹೆಚ್ಚಿನ ಬೇಡಿಕೆ ಕಂಡುಬಂದಿತು. ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಕುರಿ, ಮೇಕೆಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿವ್ಯಾಪಾರಸ್ಥರು ಆಗಮಿಸಿದ್ದರಿಂದ ಮುಖ್ಯರಸ್ತೆಯಲ್ಲೂಜನಜಂಗುಳಿ ತುಂಬಿತುಳುಕುತ್ತಿತ್ತು. ಮಧ್ಯಾಹ್ನ 2 ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆಯಿತು.

ಚಿಕ್ಕ ಕುರಿಗಳು 3 ಸಾವಿರ ರೂ., ದೊಡ್ಡ ಕುರಿಗಳು 60 ಸಾವಿರ ರೂ.ಗಳವರೆಗೂ ಮಾರಾಟವಾದವು. ಮೇಕೆಗಳೂ ಸಹ 20 ಸಾವಿರದಿಂದ 50 ಸಾವಿರದವರೆಗೂ ಮಾರಾಟವಾಗಿ ದಾಖಲೆ ಕಂಡವು. ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬಗಳು ದಿನ ಬಿಟ್ಟು ದಿನ ಬಂದಿರುವುದರಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಮುಗಿಬಿದ್ದು ಕುರಿಗಳನ್ನು ಖರೀದಿಸಿದರು.

ಚಿಕ್ಕತಿರುಪತಿ ವಾರದ ಸಂತೆಯಲ್ಲಿಮೇಕೆಯ ಖರೀದಿಗೆ ಆಗಮಿಸಿದ್ದು, ಒಂದು ಮೇಕೆಯನ್ನು 50 ಸಾವಿರಕ್ಕೆ ಖರೀದಿ ಮಾಡಲಾಗಿದೆ. ನಾನು ಸಾಕಷ್ಟು ವರ್ಷಗಳಿಂದ ಇಲ್ಲಿನ ಸಂತೆಗೆ ಆಗಮಿಸಿ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದೆ. ಆದರೆ, ಈ ಬಾರಿ ಸಂತೆಯಲ್ಲಿಯೇ 1 ಕೆಜಿ ಮೇಕೆ ಬೆಲೆ 1 ಸಾವಿರಕ್ಕೆ ಮಾರಾಟವಾಗಿದ್ದು, ಸ್ವಲ್ಪ ದುಬಾರಿಯಾಗಿದೆ. ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿದ್ದರಿಂದ ಮೇಕೆಯನ್ನು ಖರೀದಿ ಮಾಡಿದ್ದೇನೆ.

-ಮಾರಪ್ಪ, ಡಿ.ಎನ್ .ದೊಡ್ಡಿ

14 ಲಕ್ಕೂರು ಪೋಟೊ 1. ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಸಂತೆಯಲ್ಲಿಹೊಸತಡಕು ಹಿನ್ನೆಲೆಯಲ್ಲಿಕುರಿ, ಮೇಕೆ ಹಾಗೂ ಕೋಳಿಗಳ ಕೊಳ್ಳುವಿಕೆ ಹಾಗೂ ಮಾರಾಟದ ವ್ಯಾಪಾರ ಜೋರಾಗಿ ನಡೆಯಿತು.

14 ಲಕ್ಕೂರು ಪೋಟೊ 2. ಒಂದು ಮೇಕೆಯನ್ನು 50 ಸಾವಿರ ರೂ.ನೀಡಿ ಖರೀದಿಸಿರುವ ರೈತ ಮಾರಪ್ಪ.

14 ಲಕ್ಕೂರು ಪೋಟೊ 3. ಕುರಿಗಳನ್ನು ಖರೀದಿಸಿದ ವ್ಯಾಪಾರಸ್ಥರು ವಾಹನಕ್ಕೆ ತುಂಬಿಸುತ್ತಿರುವುದು.