ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು

Contributed byanilkumarsap2122@gmail.com|Vijaya Karnataka

ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕ್ರೈಸ್ವ್‌ ಕಾಲೇಜು ವಿದ್ಯಾರ್ಥಿ ಸುದರ್ಶನ ಹೇರೂರು ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಧುರೈ ಮೂಲದ 22 ವರ್ಷದ ಸುದರ್ಶನ, ನೀರಿನಲ್ಲಿ ಇಳಿದು ಮೇಲಕ್ಕೆ ಬರಲಾಗದೆ ದುರ್ಮರಣಕ್ಕೀಡಾಗಿದ್ದಾನೆ. ಸುಂಟಿಕೊಪ್ಪ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಹೊರತೆಗೆದಿದ್ದಾರೆ.

student drowns while on vacation this incident brought sheer devastation

ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು

*ಹಾರಂಗಿ ಜಲಾಶಯದ ಹಿನ್ನೀರಿನಲ್ಲಿಘಟನೆ

ವಿಕ ಸುದ್ದಿಲೋಕ ಸುಂಟಿಕೊಪ್ಪ

ಹಾರಂಗಿ ಜಲಾಶಯದ ಹಿನ್ನೀರಿನಲ್ಲಿಮುಳುಗಿ ತಮಿಳುನಾಡು ಮೂಲದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪ ಹೇರೂರುವಿನಲ್ಲಿನಡೆದಿದೆ.

ತಮಿಳುನಾಡಿನ ಮಧುರೈ ನಿವಾಸಿ ಮೀನಾಕ್ಷಿ ಸುಂದರಂ ಅವರ ಪುತ್ರ, ಪ್ರಸ್ತುತ ಬೆಂಗಳೂರಿನ ಕ್ರೈಸ್ವ್ ಕಾಲೇಜಿನಲ್ಲಿಇಂಗ್ಲಿಷ್ ಎಂಎ ವ್ಯಾಸಂಗ ಮಾಡುತ್ತಿದ್ದ ಸುದರ್ಶನ (22) ಮೃತ ದುರ್ದೈವಿ.

ಕಾಲೇಜಿನ 18 ಜನರ ತಂಡ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದು, ಭಾನುವಾರ ಬೆಳಗ್ಗೆ 7.30ರ ಸಮಯದಲ್ಲಿಹೇರೂರು ಹಾರಂಗಿ ಜಲಾಶಯ ಹಿನ್ನೀರಿನ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಸುದರ್ಶನ್ ನೀರಿನಲ್ಲಿಇಳಿದಿದ್ದು, ನಂತರ ಮೇಲಕ್ಕೆ ಬರಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿ ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಮುಳುಗು ತಜ್ಞರಿಂದ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು.