ವಿಕ ಸುದ್ದಿಲೋಕ ಸಿದ್ದಾಪುರ
ತಾಲೂಕಿನ ಸಂಕತ್ತಿಯ ಶ್ರೀ ಓಂಕಾರೇಶ್ವರ ದೇವರು ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವವನ್ನು ಫೆ.7,8 ಮತ್ತು 9ರಂದು ನಡೆಸಲು ನಿಶ್ಚಯಿಸಲಾಗಿದೆ ಎಂದು ದೇವಾಲಯ ಸಮಿತಿಯ ಗೌರವಾಧ್ಯಕ್ಷ ಎ.ಜಿ.ನಾಯ್ಕ ಹೇಳಿದರು.
ಅವರು ಬುಧವಾರ ದೇವಾಲಯದ ಆವರಣದಲ್ಲಿಸುದ್ದಿಗೋಷ್ಠಿ ನಡೆಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
‘‘ಈ ದೇವಾಲಯಕ್ಕೆ ಸುಂಕತ್ತಿ,ಕುಂಬಾರಕುಳಿ, ಸುಳ್ಳುರುಕೇರಿಯ ಸುಮಾರು 135 ಮನೆಯವರ ನಡೆದುಕೊಳ್ಳುತ್ತಾರೆ. ನೂತನ ದೇವಾಲಯ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಮೂರು ಗ್ರಾಮಸ್ಥರ ನೇತೃತ್ವದಲ್ಲಿ2018ರಲ್ಲಿನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಯಿತು. ಕಾಗೇರಿಯವರು ಶಾಸಕರಾಗಿದ್ದಾಗ 5 ಲಕ್ಷ ರೂ.ಅನುದಾನ ನೀಡಿದ್ದರು. ಹಾಲಿ ಶಾಸಕ ಭೀಮಣ್ಣ ನಾಯ್ಕ 5ಲಕ್ಷ ರೂ. ಅನುದಾನ ನೀಡಿದ್ದಾರೆ. ಜಿಪಂ ಮಾಜಿ ಸದಸ್ಯೆ ಸುಮಂಗಲಾ ವಸಂತ ನಾಯ್ಕ.3.5ಲಕ್ಷ ರೂ. ಅನುದಾನ, ಶ್ರೀಕ್ಷೇತ್ರ ಧರ್ಮಸ್ಥಳದಿಂದ 2ಲಕ್ಷ ರೂ. ನೀಡಿದ್ದಾರೆ. ವಿನಾಯಕ ಹೆಗಡೆ ದೊಡ್ಮನೆಯವರು ದೇವಾಲಯಕ್ಕೆ ಬಣ್ಣ ಹೊಡೆಸಿಕೊಟ್ಟಿದ್ದಾರೆ. ಒಟ್ಟಾರೆ ಎಲ್ಲರ ಸಹಕಾರದಿಂದ 70ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿದೇವಾಲಯ ನಿರ್ಮಾಣ ಮಾಡಲಾಗಿದೆ’’ ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಜಯರಾಮ ನಾಯ್ಕ ಮಾತನಾಡಿ, ‘‘ವೇ.ದತ್ತಮೂರ್ತಿ ಭಟ್ಟ ನೇತೃತ್ವದಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸೋಮವಾರ ಮಹಾಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿಧರ್ಮಸಭೆ ನಡೆಯಲಿದೆ. ಸಂಜೆ ಯಕ್ಷಗಾನ ಪ್ರದರ್ಶನವಿದೆ. ಅಲ್ಲದೆ ಪ್ರತಿದಿನ ಸಂಜೆ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿದೇವಾಲಯ ಸಮಿತಿಯ ಉಪಾಧ್ಯಕ್ಷ ಜಯರಾಮ ಟಿ.ನಾಯ್ಕ, ಕಾರ ್ಯದರ್ಶಿ ದಾಮೋದರ ಎನ್ .ನಾಯ್ಕ, ಮಾಬ್ಲೇಶ್ವರ ನಾಯ್ಕ,ಕೆ.ಕೆ.ನಾಯ್ಕ ಇನ್ನಿತರರು ಇದ್ದರು.
4ಎಸ್ ಡಿಪಿಆರ್ 1
ಸುಂಕತ್ತಿಯ ನೂತನ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
4ಎಸ್ ಡಿಪಿಆರ್ 1ಎ
ಸಿದ್ದಾಪುರ ಸುಂಕತ್ತಿಯಲ್ಲಿನೂತನ ಓಂಕಾರೇಶ್ವರ ದೇವಾಲಯ

