ಮಾದಪ್ಪನ ಹುಂಡಿಯಲ್ಲಿ್ಙ3.41 ಕೋಟಿ ಸಂಗ್ರಹ

Contributed byabhilash.gowda7707@gmail.com|Vijaya Karnataka

ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ 28 ದಿನಗಳಲ್ಲಿ 3.41 ಕೋಟಿ ರೂ. ಸಂಗ್ರಹವಾಗಿದೆ. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಣಿಕೆ ಹೆಚ್ಚಾಗಿದೆ. 71 ಗ್ರಾಂ ಚಿನ್ನ, 2 ಕೆಜಿ 50 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ. ಚಲಾವಣೆಯಲ್ಲಿಲ್ಲದ 2000 ರೂ. ನೋಟುಗಳು ಹಾಗೂ ವಿದೇಶಿ ನೋಟುಗಳು ಕೂಡ ಕಂಡುಬಂದಿವೆ. ಹುಂಡಿ ಎಣಿಕೆ ಕಾರ್ಯ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಿತು.

341 crores collected from devotees at male mahadeshwara hills

ಹನೂರು: ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿಬುಧವಾರ ಹುಂಡಿ ಹಣ ಎಣಿಕೆ ನಡೆದಿದ್ದು, ಈ ಬಾರಿ 28 ದಿನಗಳ ಅವಧಿಯಲ್ಲಿ3.41 ಕೋಟಿ ರೂ. ಸಂಗ್ರಹವಾಗಿದೆ. ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಹಾಗೂ ಸಾಲೂರು ಬೃಹನ್ಮಠದ ಅಧ್ಯಕ್ಷರಾದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿಹುಂಡಿಗಳನ್ನು ತೆರೆದು ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿಎಣಿಕೆ ಮಾಡಲಾಯಿತು. ಸರಕಾರಿ ರಜಾದಿನ, ಅಮಾವಾಸ್ಯೆ ಶಿವರಾತ್ರಿ ಜಾತ್ರಾ ಮಹೋತ್ಸವ ಸೇರಿದಂತೆ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿಹೆಚ್ಚಿನ ಸಂಖ್ಯೆಯಲ್ಲಿಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಬಾರಿ 28 ದಿನಗಳ ಅವಧಿಯಲ್ಲಿ3,41,44,208 ರೂ. ನಗದು, 71 ಗ್ರಾಂ ಚಿನ್ನ ಹಾಗೂ 2 ಕೆಜಿ 50 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹುಂಡಿಗೆ ಕಾಣಿಕೆ ಸಲ್ಲಿಸಿದ್ದಾರೆ. ಅಲ್ಲದೆ ಚಲಾವಣೆಯಲ್ಲಿಇಲ್ಲದ 2000 ಮುಖ ಬೆಲೆಯ 6 ನೋಟುಗಳು ಹಾಗೂ 19 ವಿದೇಶಿ ನೋಟುಗಳು ಕಂಡು ಬಂದಿವೆ. ಎಣಿಕೆ ಕಾರ್ಯದಲ್ಲಿಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ರಾದ ಮರಿಸ್ವಾಮಿ, ಭಾಗ್ಯಮ್ಮ, ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರರಾದ ಮಹದೇವು.ಸಿ, ಉಪ ಕಾರ್ಯದರ್ಶಿ ಚಂದ್ರ ಶೇಖರ.ಜಿ.ಎಲ್ , ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಸಿಬ್ಬಂದಿ ಇದ್ದರು.