ನಮ್ಮದು ಕೆಲಸದ ಸರಕಾರ: ಡಿಕೆಶಿ

Contributed byveeresha.yarabalu@timesgroup.com|Vijaya Karnataka

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ಸರಕಾರವು ಕೆಲಸ ಮಾಡುವ ಸರಕಾರ ಎಂದು ಅವರು ಹೇಳಿದರು. ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ತಮ್ಮ ಸರಕಾರದ ಸಾಧನೆ ಎಂದು ತಿಳಿಸಿದರು. ಮಂಡ್ಯ ಸಂಸದರು ಕೇಂದ್ರದಿಂದ ಹಣ ತಂದು ರೈತರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.

dk shivakumars working government in magadi

ಮಾಗಡಿ(ಬೆಂ.ದಕ್ಷಿಣ): ‘ಧಿ‘ನಾನು ಮಾಡಿದ ಕೆಲಸವನ್ನು ತೋರಿಸಲು ಬಂದಿದ್ದೇನೆ. ನಮ್ಮದು ನಾಳೆ ಎನ್ನುವ ಸರಕಾರವಲ್ಲ, ಇಂದೇ ಎನ್ನುವ ಸರಕಾರ,’ಧಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿನಡೆದ 18 ಕೆರೆಗಳಿಗೆ ನೀರು ತುಂಬಿಸುವ ಮಾಗಡಿ-ವೈ.ಜಿ.ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿಮಾತನಾಡಿ,‘ಧಿ‘ ಕೆಲವರು ಇಲ್ಲಿಗೆ ಬಂದು ಶಾಸಕರಾಗಿ, ಸಂಸದರಾಗಿ, ಮುಖ್ಯಮಂತ್ರಿ ಯಾಗಿ ಬರೀ ಬಣ್ಣದ ಮಾತುಗಳನ್ನಾಡುತ್ತಾರೆ. ಆದರೆ ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದೇ ಮುಖ್ಯ. ದಳದ ಮುಖ್ಯಮಂತ್ರಿಗೂ, ಪ್ರಧಾನಿಗೂ ಅಧಿಕಾರವಿತ್ತು. ಆದರೆ ಏನು

ಸಾಕ್ಷಿ ಬಿಟ್ಟು ಹೋಗಿದ್ದಾರೆ,’ಧಿ’ ಎಂದು ಪ್ರಶ್ನಿಸಿದರು. ದಳಪತಿಗಳಿಗೆ ಟಾಂಗ್ ‘ಧಿ‘ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದು ನಮ್ಮ ಸರಕಾರ. ಮಂಡ್ಯ ಸಂಸದರಾಗಿರುವ ನಮ್ಮಣ್ಣ ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್ ಹಾಕಿಸಲಿ. ಕೇಂದ್ರದಿಂದ ಹಣ ತಂದು ಮಂಡ್ಯದ ರೈತರಿಗೆ ಸಹಾಯ ಮಾಡಲಿ,’ಧಿ’ ಎಂದು ಅವರು ಟಾಂಗ್ ನೀಡಿದರು.