ಮಾಧಿನಧಿಸಿಕ ಖಿನ್ನತೆ,
ವೈದ್ಯ ವಿಧಿದ್ಯಾಧಿರ್ಥಿ ಆತ್ಮಹತ್ಯೆ ಮೈಸೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮೈಸೂರು ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸುಭಾಷ್ ನಗರದಲ್ಲಿಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಕೊಪ್ಪಳದ ಡಾ.ಸೈಯದ್ ಅಹಮದ್ ಸಲೀಂ(49) ಆತ್ಮಹತ್ಯೆ ಮಾಡಿಕೊಂಡ ವೈದ್ಯ ವಿಧಿದ್ಯಾಧಿರ್ಥಿ. ಇವರು ಸುಭಾಷ್ ನಗರದಲ್ಲಿಪತ್ನಿಯೊಂದಿಗೆ ನೆಲೆಸಿದ್ದರು. ರಂಜಾನ್ ಉಪವಾಸದ ಹಿನ್ನೆಲೆಯಲ್ಲಿಬುಧವಾರ ಮುಂಜಾನೆ 4.30ಕ್ಕೆ ಉಪಾಹಾರ ಮುಗಿಸಿದ ಡಾ.ಸೈಯದ್ , ಬೆಳಗ್ಗೆ 7.30ರ ಸುಮಾರಿಗೆ ತಮ್ಮ ಕೋಣೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ 19 ವರ್ಷಗಳಾದರೂ ಮಕ್ಕಳಾಗದ ಕಾರಣ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು, 6 ತಿಂಗಳ ಹಿಂದೆಯಷ್ಟೇ ಮಗುವೊಂದನ್ನು ದತ್ತು ಪಡೆದಿದ್ದರು. ಮಕ್ಕಳಿರದ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ದೂರು ನೀಡಿದ್ದು, ಎನ್ .ಆರ್ . ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

