ಅಂಗಟಹಳ್ಳಿ ಗುಡ್ಡಕ್ಕೆ ಬೆಂಕಿ: ಅಪಾರ ನಾಶ

Contributed byvkhnataraj@gmail.com|Vijaya Karnataka

ಹುಣಸೂರು ಬಳಿಯ ಅಂಗಟಹಳ್ಳಿ ಗುಡ್ಡಕ್ಕೆ ಬೆಂಕಿ ಬಿದ್ದಿದೆ. ಇದರಿಂದಾಗಿ ಹತ್ತಾರು ಎಕರೆ ಕುರುಚಲು ಅರಣ್ಯ ಪ್ರದೇಶ ನಾಶವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಬೆಂಕಿಯನ್ನು ನಂದಿಸಿದ್ದಾರೆ. ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ದೊಡ್ಡ ಅನಾಹುತ ತಪ್ಪಿದೆ.

fire incident at angatahalli hill causes significant damage

ವಿಕ ಸುದ್ದಿಲೋಕ ಹುಣಸೂರು ಹುಣಸೂರು-ಹನಗೋಡು ಮುಖ್ಯರಸ್ತೆ ಬಳಿಯ ರಾಮೇನಹಳ್ಳಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಅಂಗಟಹಳ್ಳಿ ಗುಡ್ಡ ಕ್ಕೆ ಬೆಂಕಿ ಬಿದ್ದು ಹತ್ತಾರು ಎಕರೆ ಕುರುಚಲು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು ಕಂಡುಬಂದು ತಟ್ಟೆಕೆರೆಯ ಸುರೇಶ್ , ಸುಂದರ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಆರ್ ಎಫ್ ಒ ಮಲ್ಲಿಕಾರ್ಜುನ್ , ಬೀಟ್ ಫಾರೆಸ್ಟರ್ ಗಳಾದ ಸಿದ್ದಪ್ಪ, ಉದಯ್ , ದಿವಾಕರ್ ಮತ್ತು ಹತ್ತು ಸಿಬ್ಬಂದಿ ದೌಡಾಯಿಸಿ ರಾತ್ರಿ 9ರ ವೇಳೆಗೆ ನಂದಿಸುವಲ್ಲಿಯಶಸ್ವಿಯಾಗಿದ್ದಾರೆ. ಅಂಗಟಹಳ್ಳಿ ಗುಡ್ಡ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲೂ ಸಾಧ್ಯವಾಗಿರಲಿಲ್ಲ. ಆದರೆ, ಬೆಂಕಿಯನ್ನು ಅರಣ್ಯ ಸಿಬ್ಬಂದಿಯೇ ಜೀವದ ಹಂಗು ತೊರೆದು ನಂದಿಸಿರುವುದು ಗ್ರಾಮಸ್ಥರಲ್ಲಿದ್ದ ಆತಂಕ ದೂರ ಮಾಡಿದ್ದಾರೆ. ತಪ್ಪಿದ ಅನಾಹುತ: ಯಾರೋ ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದ್ದು, ತಕ್ಷಣಕ್ಕೆ ಬೆಂಕಿ ನಂದಿಸದಿದ್ದಲ್ಲಿರಾಮೇನಹಳ್ಳಿ ಬೆಟ್ಟ ಹಾಗೂ ಕಲ್ ಬೆಟ್ಟಕ್ಕೂ ಹರಡುವ ಭೀತಿ ಎದುರಾಗಿತ್ತು. ತಕ್ಷಣವೇ ಬೆಂಕಿ ನಂದಿಸುವ ಮೂಲಕ ಬಾರೀ ಅನಾಹತ ತಪ್ಪಿಸಿದ್ದಾರೆ.