ಕಾಲಂ

Contributed byshubha.hegde@timesgroup.com|Vijaya Karnataka

ಕಡ್ಡಿಪುಡಿ ಸಿನಿಮಾದ ಚಿತ್ರೀಕರಣ ವೇಳೆ ಅಘಟನೆಯೊಂದು ನಡೆದಿದೆ. ನಟ ವಿಕ್ಕಿ ವರುಣ್‌ ಅವರ ಮೇಲೆ ಪೆಟ್ರೋಲ್ ಸುರಿಯುವಾಗ ಅವರ ಪ್ಯಾಂಟ್‌ಗೆ ಬೆಂಕಿ ತಗುಲಿ ಕಾಲಿಗೆ ಸುಟ್ಟ ಗಾಯವಾಯಿತು. ಕೂಡಲೇ ತಂಡದವರು ಬೆಂಕಿಯನ್ನು ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದರು. ಒಂದು ಕ್ಷಣದ ನಿರ್ಲಕ್ಷ್ಯ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿತ್ತು ಎಂದು ವಿಕ್ಕಿ ವರುಣ್‌ ಸ್ಮರಿಸಿಕೊಂಡರು.

fire incident during the shooting of kaddipudi

ಮಿಸ್ ಆಗಿ ಬಿದ್ದ ಪೆಟ್ರೋಲ್ , ಬೆಂಕಿ ಹತ್ತಿಕೊಂಡ ಪ್ಯಾಂಟ್

ಚಿತ್ರೀಕರಣದಲ್ಲಿಒಮ್ಮೊಮ್ಮೆ ಕೈತಪ್ಪಿನಿಂದಾಗಿ ಅವಘಡಗಳು ನಡೆದು ಹೋಗುತ್ತವೆ. ಕಲಾವಿದರಿಗೆ ತೊಂದರೆಯಾಗಿರುವ ಎಷ್ಟೋ ಘಟನೆಗಳು ನಡೆದಿವೆ. ಅಂತಹದ್ದೇ ಒಂದು ಘಟನೆ ‘ ಕಡ್ಡಿಪುಡಿ ’ ಸಿನಿಮಾದ ಶೂಟಿಂಗ್ ಸಮಯದಲ್ಲಿನಡೆದಿದೆ.

ಸೂರಿ ನಿರ್ದೇಶನ ಮಾಡಿದ್ದ ‘ಕಡ್ಡಿಪುಡಿ’ ಸಿನಿಮಾದಲ್ಲಿ‘ಕೆಂಡಸಂಪಿಗೆ’ ಖ್ಯಾತಿಯ ನಟ ವಿಕ್ಕಿ ವರುಣ್ ಸಣ್ಣ ಪಾತ್ರ ಮಾಡಿದ್ದಾರೆ. ಆ ಚಿತ್ರದಲ್ಲಿಅವರನ್ನು ಬಾಲು, ನಾಗೇಂದ್ರ, ಕೆಂಡ ಸೇರಿದಂತೆ ಮೂವರ ಗ್ಯಾಂಗ್ ಪೆಟ್ರೋಲ್ ಹಾಕಿ ಸುಡುವ ಸೀನ್ ಒಂದು ಇದೆ. ಈ ಸೀನಲ್ಲಿಪೆಟ್ರೋಲ್ ಹಾಕುವಾಗ, ಕ್ಯಾಮೆರಾಗೆ ಅವರನ್ನೇ ಸುಡುವಂತೆ ಸೀನ್ ಕಂಪೋಸ್ ಮಾಡಲಾಗಿತ್ತು. ಪೆಟ್ರೋಲ್ ಅನ್ನು ಸುರಿಯುವಾಗ ವಿಕ್ಕಿ ಅವರ ಪ್ಯಾಂಟ್ ಮೇಲೂ ಸ್ವಲ್ಪ ಚೆಲ್ಲಿದ್ದಾರೆ. ಬೆಂಕಿ ವಿಕ್ಕಿ ಅವರ ಕಾಲಿಗೆ ತಗುಲಿ ಹತ್ತಿಕೊಂಡು, ಕಾಲಲ್ಲಿರುವ ಚರ್ಮದ ಮೇಲೆ ಕೊಂಚ ಸುಟ್ಟ ಗಾಯಯೂ ಆಯಿತು. ತಕ್ಷಣವೇ ಎಚ್ಚೆತ್ತ ಸಿನಿಮಾ ತಂಡ ವಿಕ್ಕಿ ಅವರ ಕಾಲಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದೆ. ಆಗಬೇಕಾದ ದೊಡ್ಡ ಅನಾಹುತವನ್ನು ತಪ್ಪಿಸಿದೆ. ಒಂದೇ ಒಂದು ಕ್ಷಣ ನಿರ್ಲಕ್ಷಿಸಿದ್ದರೆ ಬೆಂಕಿ ಜೋರಾಗಿ ಹತ್ತಿಕೊಳ್ಳುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ನಟ ವಿಕ್ಕಿ ವರುಣ್ .

-ಹಂಸಪ್ರಿಯ