ಕೃಷ್ಣಪ್ರಸಾದ್ ನಾಗಮಂಗಲ: ತಾಲೂಕಿನ ನಲ್ಕುಂದಿ ಗ್ರಾಮದ ಕೃಷ್ಣಪ್ರಸಾದ್ (65)ಬುಧವಾರ ನಿಧನರಾದರು. ಹಿರಿಯ ಸಹಕಾರಿ ಮುಖಂಡ ಕೃಷ್ಣೇಗೌಡರ ಪುತ್ರರಾಗಿದ್ದ ಇವರು ತಾಲೂಕು ಟಿಎಪಿಸಿಎಂಎಸ್ ನಿರ್ದೇಶಕರಾಗಿದ್ದರು. ಪತ್ನಿ, ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ನಲ್ಕುಂದಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ಸರಸ್ವತಿ ಹುಣಸೂರು: ತಾಲೂಕಿನ ತಿಪ್ಪಲಾಪುರ ಗ್ರಾಮದ ನಿವಾಸಿ, ಹೋಂಗಾರ್ಡ್ ಟಿ.ಸಿ.ಹರೀಶ ಅವರ ಪತ್ನಿ ಸರಸ್ವತಿ (28) ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. ಇವರಿಗೆ ಪತಿ, ಪುತ್ರ ಇದ್ದಾನೆ. ಅಂತ್ಯಕ್ರಿಯೆ ಗುರುವಾರ ಸ್ವಗ್ರಾಮದಲ್ಲಿನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

