ಹುಣಸೂರು : ಆದಿವಾಸಿಗಳ ಅಭಿವೃದ್ಧಿಗಾಗಿ ಹುಣಸೂರಿನಲ್ಲಿಸ್ಥಾಪಿತವಾಗಿರುವ ಡೀಡ್ (ಶಿಕ್ಷಣ ಮುಖೇನ ಪ್ರಗತಿ) ಸಂಸ್ಥೆಯ ಸಂಸ್ಥಾಪಕ ಹಾಗೂ ರಾಜ್ಯದ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಡಾ.ಜೆರ್ರಿಪೈಸ್ (87) ಮೈಸೂರಿನ ಮನೆಯಲ್ಲಿಬುಧಿಧಧಿವಾರ ನಿಧನರಾದರು. ನಗರದ ಚಿಕ್ಕಹುಣಸೂರಿನಲ್ಲಿ1973-74ನೇ ಸಾಲಿನಲ್ಲಿಬಮ್ ಇಂಡಿಯಾವನ್ನು ಸ್ಥಾಪಿಸಿದ ನಂತರ 1976-77ನೇ ಸಾಲಿನಲ್ಲಿಡೀಡ್ ಸಂಸ್ಥೆಯನ್ನು ಸ್ಥಾಪಿಸಿ ಆದಿವಾಸಿಗಳ ಆರೋಗ್ಯ, ಶಿಕ್ಷಣ, ವಸತಿ, ಅರಣ್ಯ ಹಕ್ಕುಗಳು ಬಗ್ಗೆ ಶ್ರಮಿಸಿದ್ದರು. ಸರಕಾರದಿಂದ ಭೂಮಿ ಮಂಜೂರು ಮಾಡಿಸುವ ಮೂಲಕ ಆದಿವಾಸಿಗಳ ಕಣ್ಮಣಿಯಾಗಿದ್ದರು. ಇವರು ಮೂಲನಿವಾಸಿಗಳ ಸಂಸ್ಕೃತಿ, ಭಾಷೆ, ಉಡುಗೆ-ತೊಡುಗೆಗಳ ಬಗ್ಗೆ ಅಧ್ಯಯನ ನಡೆಸಿ ಪ್ರಚುರಪಡಿಸಿದ್ದರು. ಎಸ್ .ಆರ್ .ಹಿರೇಮಠ ಅವರೊಂದಿಗೆ ಸೇರಿ ಮೈಸೂರು ಜಿಲ್ಲೆಯಲ್ಲಿಸ್ವಯಂ ಸೇವಾ ಸಂಸ್ಥೆಯ ಮೈತ್ರಿಕೂಟವನ್ನು ಹುಟ್ಟುಹಾಕಿ ಪ್ರಥಮ ಅಧ್ಯಕ್ಷರಾಗಿದ್ದರು. ಮೃಧಿತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಪುತ್ರ ವಿದೇಶದಿಂದ ಶುಕ್ರವಾರ ಸ್ವದೇಶಕ್ಕೆ ಬರಲಿದ್ದು, ಶನಿವಾರ ಮೈಸೂರಿನಲ್ಲಿಅಂತ್ಯಕ್ರಿಯೆ ನಡೆಯಲಿದೆ ಎಂದು ಡೀಡ್ ಸಂಸ್ಥೆಯ ಮಾಜಿ ಉದ್ಯೋಗಿ ಜಿ.ಎಸ್ .ಜಗದೀಶ್ ತಿಳಿಸಿದ್ದಾರೆ. ವಿ.ಎಸ್ .ರಾಯ್ ಡೇವಿಡ್ , ಡೀಡ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಸ್ .ಎಲ್ .ನಿಂಗರಾಜಪ್ಪ, ನಿಸರ್ಗ ಫೌಂಡೇಷನ್ ನಿರ್ದೇಶಕ ಪ್ರಭು, ಒಡನಾಡಿ ಸ್ಫೂರ್ತಿ ಸಂಸ್ಥೆಯ ಬಸವರಾಜು ಇಧಿತಧಿರರು ಸಂತಾಪ ಸೂಚಿಸಿದ್ದಾರೆ.

