4ನರೇಗಲ್ಲ3
ಹೋಮ ಹವನಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ (ಬಾಕ್ಸ್ )
ಲಘುರುದ್ರ ಸ್ವಾಹಾಕಾರ ಹೋಮದ ಪೂರ್ಣಾಹುತಿ (ಹೆಡ್
ವಿಕ ಸುದ್ದಿಲೋಕ ನರೇಗಲ್ಲ
ಧಾರ್ಮಿಕ ಕಾರ್ಯಗಳಲ್ಲಿನೆರವೇರಿಸುವ ಹೋಮ ಹವನಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಹೋಮ ಹವನಗಳನ್ನು ನೆರವೇರಿಸಿದರೆ ಮುಂಬರುವ ಅನೇಕ ಕಷ್ಟಗಳನ್ನು ತಪ್ಪಿಸಬಹುದು ಎಂದು ಅರುಣ ಜಿ. ಕುಲಕರ್ಣಿ(ಕುರಗಡ್ಡಿ) ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ116ನೇ ವರ್ಷದ ಶ್ರೀ ಗುರುಪ್ರತಿಪದೆ ಉತ್ಸವ ಅಂಗವಾಗಿ ನಡೆದ ಲಘುರುದ್ರ ಸ್ವಾಹಾಕಾರ ಹೋಮದ ಪೂರ್ಣಾಹುತಿ ನಂತರ ಮಾತನಾಡಿದರು.
ನರೇಗಲ್ಲದ ಶ್ರೀ ದತ್ತಾತ್ರೆಯ ದೇವಸ್ಥನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶ್ರೀ ಗುರುಪ್ರತಿಪದೆ ಉತ್ಸವವು ಯಾವುದೇ ವಿಘ್ನವಿಲ್ಲದೆ 116 ವರ್ಷಗಳವರೆಗೆ ಸಾಗಿ ಬಂದಿರುವುದು ಶ್ರೀ ಗುರು ದತ್ತಾತ್ರೇಯನ ಆಶೀರ್ವಾದವೇ ಕಾರಣ. ಇಲ್ಲಿನ ಶ್ರೀ ಗುರು ದತ್ತಾತ್ರೇಯ ಅತ್ಯಂತ ಜಾಗೃತ ಭಗವಂತನಾಗಿದ್ದು, ಭಕ್ತರ ಮನೋಭಿಲಾಷೆಗಳನ್ನು ನೆರವೇರಿಸುವುದರಲ್ಲಿಯಾವಾಗಲೂ ಮುಂದು. ಲಘುರುದ್ರ ಸ್ವಾಹಾಕಾರ ಹೋಮವು ವಿಶೇಷವಾಗಿ ರುದ್ರ ದೇವರಿಗೆ ಬಹಳಷ್ಟು ಪ್ರೀತಿಯ ಹೋಮವಾಗಿದೆ ಎಂದು ಹೇಳಿದರು.
ಡಾ.ಕೃಷ್ಣಾ ಕಾಳೆ ದಂಪತಿಗಳು ಲಘುರುದ್ರ ಸ್ವಾಹಾಕಾರದ ಭಕ್ತಿಸೇವೆ ವಹಿಸಿದ್ದರು. ವಿ.ಆರ್ .ಗ್ರಾಮಪುರೋಹಿತ ಹೋಮದ ನೇತೃತ್ವ ವಹಿಸಿದ್ದರು. ಅರ್ಚಕ ವಲ್ಲಭಭಟ್ಟ ಸದರಜೋಷಿ, ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಎಸ್ .ಎಚ್ ಕುಲಕರ್ಣಿ, ಅರುಣ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ನಾಗೇಶಭಟ್ ಗ್ರಾಮಪುರೋಹಿತ, ಅಜೀತ ಕುಲಕರ್ಣಿ, ನಾಗರಾಜ ನಾಡಗೇರ, ಸೋಮನಾಥ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ಜಗದೀಶ ಜ್ಯೋಷಿ, ಅಭಿಷೇಕ ಜ್ಯೋಷಿ, ರಾಮಚಂದ್ರ ಕುಲಕರ್ಣಿ, ಹರೀಶ ಕುಲಕರ್ಣಿ, ಸುಮಂತ ಕುಲಕರ್ಣಿ, ರಾಮಕೃಷ್ಣ ಸದರಜೋಶಿ, ಪವನ ಗ್ರಾಮಪುರೋಹಿತ, ಅನುಪ ಕುಲಕರ್ಣಿ ಇತರರು ಇದ್ದರು.
ಫೋಟೊ: 4 ನರೇಗಲ್ಲ3:
ನರೇಗಲ್ಲನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿಸೋಮವಾರ ಲಘುರುದ್ರ ಸ್ವಾಹಾಕಾರ ಹೋಮದ ಪೂರ್ಣಾಹುತಿ ಜರುಗಿತು.

