ಸದಲಗಾ ಸೌಂದರ್ಯ ವೃದ್ಧಿ ನಮ್ಮ ಧ್ಯೇಯ

Contributed bymbchinchane@gmail.com|Vijaya Karnataka

ಶಾಸಕ ಗಣೇಶ ಹುಕ್ಕೇರಿ ಅವರು ಸದಲಗಾ ಪಟ್ಟಣದಲ್ಲಿ 40 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವುದಾಗಿ ತಿಳಿಸಿದರು. 3.95 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಸದಲಗಾ-ಘೋಸರವಾಡ ರಸ್ತೆ ಡಾಂಬರೀಕರಣಕ್ಕೆ 1 ಕೋಟಿ ಹಾಗೂ ಸದಲಗಾ ಪಟ್ಟಣದ ರಸ್ತೆ ಸುಧಾರಣೆಗೆ 2 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲೆ ಕಾಮಗಾರಿಗೆ ಚಾಲನೆ ನೀಡಲಾಗುವುದು.

new steps for sedalga beautification plans from the legislator

ಶಾಸಕ ಗಣೇಶ ಹುಕ್ಕೇರಿ ಅಭಿಮತ | ರಸ್ತೆ ಡಾಂಬರೀಕರಣಕ್ಕೆ ಚಾಲನೆ

ವಿಕಸುದ್ದಿಲೋಕ ಬೋರಗಾಂವ

ಸದಲಗಾ ಪಟ್ಟಣದಲ್ಲಿಈಗಾಗಲೇ 40 ಕೋಟಿ ರೂ.ಅಭಿವೃದ್ದಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು.

ಸದಲಗಾ ಪಟ್ಟಣದಲ್ಲಿಶಾಸಕರ ಅನುದಾನದಲ್ಲಿ3.95 ಕೋಟಿ ರೂ.ವೆಚ್ಚದಡಿ ರತ್ನಪ್ಪ ಕುಂಬಾರ ವೃತ್ತದಿಂದ ದತ್ತವಾಡ ಗ್ರಾಮದವರೆಗಿನ 4 ಕಿಮೀ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘‘ಸದಲಗಾ-ಘೋಸರವಾಡ ರಸ್ತೆ ಡಾಂಬರೀಕರಣಕ್ಕಾಗಿ 1 ಕೋಟಿ ಹಾಗೂ ಸದಲಗಾ ಪಟ್ಟಣದ ಶಿವಾಜಿ ವೃತ್ತದಿಂದ ಬಸವ ಸರ್ಕಲ್ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ 2 ಕೋಟಿ ರೂ.ಮಂಜೂರಾಗಿದ್ದು, ಅತಿ ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು,’’ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಗುಂಡಕಲ್ಲೆ, ಪುರಸಭೆ ಸದಸ್ಯರಾದ ಸಂತೋಷ ನವಲೆ, ಪ್ರಕಾಶ ಆನೂರೆ, ರಮೇಶ ದೇಸಾಯಿ, ಸತೀಶ ಪಾಟೀಲ, ಪಿರಗೊಂಡ ಪಾಟೀಲ, ಮೋಹನ ಶಿತೋಳೆ, ದತ್ತ ಕಾರ್ಖಾನೆ ಸಂಚಾಲಕ ಅರುಣ ದೇಸಾಯಿ, ಕುಮಾರ ಮಾನೆ, ರವಿ ಗೋಸಾವಿ, ಉದಯ ಬದ್ನಿಕಾಯಿ, ಭೀಮಾ ಮಾಳಗೆ, ಸಂಜು ಕಾಂಬಳೆ, ಶಿವು ಅನೂರೆ, ಸಂತೋಷ ಉಗಾರೆ, ಚಾಂದ ಸನದಿ, ಅತ್ತಾವುಲ್ಲಾಮುಜಾವರ, ಉದಯ ಪಾಟೀಲ, ಅಷ್ಪಾಕ್ ಜಮಾದಾರ, ಸುಮೇರು ಪಾಟೀಲ, ಅಭಿಯಂತರಾದ ಬಡಿಗೇರ, ಗುತ್ತಿಗೆದಾರ ವೈ.ಕೆ.ಜಮನಾಳೆ ಸೇರಿ ಕಾರ್ಯಕರ್ತರು, ಗಣ್ಯರು ಉಪಸ್ಥಿತರಿದ್ದರು.

ಫೋಟೋ3ಐಸಿಹೆಚ್ 2: ಸದಲಗಾ-ದತ್ತವಾಡ ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.