ಮುಧಿಚ್ಚಿದ ತಿಪ್ಪೇರುದ್ರಸ್ವಾಮಿ ದೇವಾಲಯ
----
ವಿಕ ಸುದ್ದಿಲೋಕ ನಾಯಕನಹಟ್ಟಿ(ಧಿಚಿಧಿತ್ರಧಿದುರ್ಗ)
ಚಂದ್ರ ಗ್ರಹಣ ಹಿನ್ನೆಲೆ ತಿಪ್ಪೇರುದ್ರಸ್ವಾಮಿ ದೇವಾಲಯವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ಮುಚ್ಚಲಾಗಿತ್ತು.
ಸಾಮಾನ್ಯ ದಿನಗಳಲ್ಲಿಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯ ಭಕ್ತರಿಗೆ ತೆರೆದಿರುತ್ತದೆ. ಜತೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ರಾತ್ರಿ ಎರಡು ವೇಳೆಯಲ್ಲಿದಾಸೋಹ ವ್ಯವಸ್ಥೆ ಇರುತ್ತದೆ. ಗ್ರಹಣದ ಹಿನ್ನೆಲೆಯಲ್ಲಿದೇವಾಲಯವನ್ನು ಮಧ್ಯಾಹ್ನವೇ ಮುಚ್ಚಲಾಗಿತ್ತು. ರಾಜಗೋಪುರದ ದೊಡ್ಡ ಬಾಗಿಲನ್ನು ಬಂದ್ ಮಾಡಲಾಗಿತ್ತು. ದಾಸೋಹದ ವ್ಯವಸ್ಥೆ ಇರಲಿಲ್ಲ. ಸಿರಾ, ಚಳ್ಳಕೆರೆ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ್ದ ಭಕ್ತಾದಿಗಳು ದೇವಾಲಯ ಮುಖ್ಯದ್ವಾರದ ಹೊಸ್ತಿಲಿಗೆ ತೆಂಗಿನ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.
ದೇವಾಲಯ ಮುಚ್ಚುವ ಮತ್ತು ಗ್ರಹಣದ ಮಾಹಿತಿಯಿಲ್ಲದ ಭಕ್ತರು ದೇವರ ದರ್ಶನವಿಲ್ಲದೆ ನಿರಾಶೆಯಿಂದ ಹಿಂದಿರುಗಿದರು. ದಾಸೋಹ ಇಲ್ಲದಿರುವುದರಿಂದ ಹೋಟೆಲ್ ಕಡೆಗೆ ತೆರಳಿದರು.
ಹೊರಮಠ ಮತ್ತು ಒಳಮಠದ ಮುಂಭಾಗದಲ್ಲಿತೆಂಗಿನಕಾಯಿ, ಬಾಳೆಹಣ್ಣು ಸೇರಿದಂತೆ ನಾನಾ ವ್ಯಾಪಾರ ನಡೆಸುತ್ತಿದ್ದ ಅಂಗಡಿ, ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಲಾಗಿತ್ತು. ಮಂಗಳವಾರ ಸಂಜೆ ಜರುಗಬೇಕಾಗಿದ್ದ ಸಿಂಹವಾಹನೋತ್ಸವವನ್ನು ರಾತ್ರಿ 7.30ಕ್ಕೆ ಮುಂದೂಡಲಾಗಿದೆ. ಜಾತ್ರೆ ಇನ್ನು ಮೂರು ದಿನ ಬಾಕಿ ಇದೆ. ಹೀಗಾಗಿ ದೇವಾಲಯ ಮುಂಭಾಗದಲ್ಲಿಬ್ಯಾರಿಕೇಡ್ ಮತ್ತು ಸರದಿ ಸಾಲನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
-------
3 ಎನ್ ಕೆ ಹೆಚ್ 1
ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಾಲಯವನ್ನು ಮಂಗಳವಾರ ಮಧ್ಯಾಹ್ನ ಮುಚ್ಚಲಾಗಿತ್ತು.

